ಲಕ್ನೋ(ಆ.21) ಪ್ರತಿನಿತ್ಯ ಗಂಡ ಕುಡಿದು ಮನೆಗೆ ಬರುತ್ತಾನೆ, ವರದಕ್ಷಿಣೆ ತರಲು ಪೀಡಿಸುತ್ತಾನೆ, ಮಾನಸಿಕ ಕಿರುಕುಳ ನೀಡುತ್ತಾನೆ.. ವಿಚ್ಛೇದನ ಕೊಡಿ ಎಂಬ ಅರ್ಜಿಗಳು ಸಲ್ಲಿಕೆಯಾಗುವುದು ಸಾಮಾನ್ಯ. ಆದರೆ ಇಲ್ಲೊಂದು ವಿಚಿತ್ರ ಅರ್ಜಿ ಬಂದಿದೆ.
 
ಪತಿ ನನ್ನ ಜತೆ ಜಗಳವಾಡಲ್ಲ, ಹೆಚ್ಚು ಪ್ರೀತಿಸುತ್ತಾನೆ. ಇದರಿಂದ ನನಗೆ ಬೇಸರವಾಗಿದೆ ದಯವಿಟ್ಟು ವಿಚ್ಛೇದನ ಕೊಡಿ ಎಂದು ಮಹಿಳೆಯೊಬ್ಬರು ಅರ್ಜಿ ಸಲ್ಲಿಸಿದ್ದಾರೆ

ಕುಂಕುಮ, ಬಳೆ ಧರಿಸದ ಪತ್ನಿ ವಿಚ್ಛೇದನಕ್ಕೆ ಅರ್ಹ

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಮಹಿಳೆಗೆ ವಿಚ್ಛೇದನ ಬೇಕಾಗಿದೆಯಂತೆ.  ಶರಿಯಾ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಈ ವೇಳೆ ವಿಚ್ಛೇದನಕ್ಕೆ ಕಾರಣ ಕೇಳಿದಾಗ ಪತಿ ಜಗಳವಾಡುವುದಿಲ್ಲ, ಹೆಚ್ಚು ಪ್ರೀತಿಸುತ್ತಾನೆ ಎಂದು ಮಹಿಳೆ ಹೇಳಿದ್ದಾಳೆ. ಇದನ್ನು ಕೇಳಿ ಸ್ವತಃ ನ್ಯಾಯಾಧೀಶರೇ  ಗೊಂದಲಕ್ಕೆ ಗುರಿಯಾಗಿದ್ದು ವಿಚ್ಛೇದನಕ್ಕೆ ಇದು ಸಮಂಜಸ ಕಾರಣ ಅಲ್ಲ ಎಂದು ಅರ್ಜಿ ವಜಾ ಮಾಡಿದ್ದಾರೆ. ಇನ್ನೊಮ್ಮೆ ಇಬ್ಬರು ಮಾತುಕತೆ ಮಾಡಿ ಎಂದು ಸಲಹೆ ನೀಡಿದ್ದಾರೆ.

ಪತಿ ಎಂದೂ ನನ್ನ ಮೇಲೆ ಕೂಗಾಡಲಿಲ್ಲ. ಯವುದೇ ವಿಷಯದ ಬಗ್ಗೆ ನನಗೆ ನಿರಾಸೆ ಮಾಡಿಲ್ಲ. ಇಂತಹ ವಾತಾವರಣದಿಂದಾಗಿ ನನಗೆ ಉಸಿರುಗಟ್ಟಿದಂತಗುತ್ತಿದೆ. ಕೆಲವೊಮ್ಮೆ ಅವನೇ ಅಡುಗೆ ಮಾಡಿ ನನಗೆ ಬಡಿಸುತ್ತಾನೆ. ಮನೆ ಕೆಲಸ ಮಾಡಲು ಸಹ ಸಹಾಯ ಮಾಡುತ್ತಾನೆ ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಮಹಿಳೆ ಹೇಳಿದ್ದಾರೆ.