ಅಪ್ಪನ ಚಿಕನ್ ಹಲೀಮ್ ಅಂಗಡಿಯಲ್ಲಿ ಏನೆನೆಲ್ಲಾ ಇರುತ್ತದೆ ಎನ್ನುವುದನ್ನು ತಿಳಿಸುವ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡಿದ್ದ ಹುಡುಗನಿಗೆ ಈಗ ಅಚ್ಚರಿ, ಇಂಟರ್ನೆಟ್ ನಲ್ಲಿ ವೈರಲ್ ಆದ ಹೈದರಾಬಾದ್‌ನ ರಸ್ತೆಬದಿಯ ಹಲೀಮ್ ಕಾರ್ಟ್ ನಗರದ ನೆಚ್ಚಿನ ಫುಡ್ ಜಾಯಿಂಟ್ ಎನಿಸಿದೆ.

ಹೈದರಾಬಾದ್ (ಏ.15): ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳು ( Social Media ) ಇನ್ ಫ್ಲುಯೆನ್ಸರ್ ಗಳಿಂದಲೇ ತುಂಬಿದೆ. ಜೀವನವನ್ನು ಬದಲಾಯಿಸಲು ನಮ್ಮ ಕೈಯಲ್ಲಿ ಇರುವ ಪ್ರಬಲ ಸಾಧನವನ್ನು ನಾವು ಸಾಮಾನ್ಯವಾಗಿ ಕಡೆಗಣಿಸುತ್ತೇವೆ. ರಂಜಾನ್ ಋತುವಿನ ಮಧ್ಯೆ, ಹೈದರಾಬಾದ್‌ನಲ್ಲಿ ( Hyderabad ) ಪುಟ್ಟ ಹುಡುಗ, ತನ್ನ ವಯಸ್ಸಾದ ತಂದೆಯ ರಸ್ತೆ ಬದಿಯ (Road Side) ಹಲೀಮ್ ಸ್ಟಾಲ್ ಅನ್ನು ( Haleem Food Stal l) ಶ್ರದ್ಧೆಯಿಂದ ಪ್ರಚಾರ ಮಾಡುತ್ತಿರುವ ವೀಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ವೀಡಿಯೊದಲ್ಲಿ, ಮೋತಿ ನಗರ ಚೌರಸ್ತಾದಲ್ಲಿರುವ "ಹುಮಾರೆ ಪಪ್ಪಾ ಕಿ ಹಲೀಮ್" ಫುಡ್ ಶಾಪ್ ನಲ್ಲಿ ಆಹಾರ ತಿನ್ನಲು ಬರುವಂತೆ ಹುಡುಗ ಜನರನ್ನು ಒತ್ತಾಯಿಸುವುದನ್ನು ಕೇಳಬಹುದು. ಫುಡ್ ಸ್ಟಾಲ್ ಗೆ ದೀಪಾಲಂಕಾರ ಮಾಡಲಾಗಿದ್ದು, ಕೈಗೆಟಕುವ ಬೆಲೆಗೆ ಚಿಕನ್ ಹಲೀಮ್ ಮಾರಾಟ ಮಾಡಲಾಗುತ್ತಿದೆ ಎಂದು ಹೇಳುವುದನ್ನು ಕೇಳಬಹುದಾಗಿದೆ.

@phatishpharma ಹೆಸರಿನ ಹ್ಯಾಂಡಲ್‌ನಿಂದ ಮೊದಲು ಹಂಚಿಕೊಂಡ ವೀಡಿಯೊವನ್ನು ಈಗ ಹೆಚ್ಚಾಗಿ ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ನೋಡಿದ ಬಹುತೇಕ ಜನರು ಅವರಿಗೆ ತಮ್ಮ ಕೈಲಾದ ಸಹಾಯ ಮಾಡಲು ಮುಂದಾಗಿದ್ದಾರೆ. ಅದರೊಂದಿಗೆ ತಮ್ಮ ಜೊತೆಗಿದ್ದವರೂ, ಸಣ್ಣ ವ್ಯಾಪಾರಗಳನ್ನು ಬೆಂಬಲಿಸುವಂತೆ ಒತ್ತಾಯಿಸುತ್ತಿದ್ದಾರೆ. ತನ್ನ ತಂದೆಯ ವ್ಯವಹಾರವನ್ನು ಉತ್ತೇಜಿಸಲು ಪ್ರಯತ್ನಿಸುತ್ತಿರುವ ಮಗುವನ್ನು ಅನೇಕರು ಶ್ಲಾಘನೆ ಮಾಡಿದ್ದಾರೆ. 

View post on Instagram


ಮೊಹಮ್ಮದ್ ಅದ್ನಾನ್ ಎಂದು ಗುರುತಿಸಲಾದ ಚಿಕ್ಕ ಹುಡುಗ, ಚಿಕನ್ ಹಲೀಮ್ ಶಾಪ್ ನೊಂದಿಗೆ ವ್ಯವಹಾರ ಮಾಡು ಒದ್ದಾಡುತ್ತಿದ್ದ ತಂದೆಗೆ ಸಹಾಯ ಮಾಡಲು ಸಾಮಾಜಿಕ ಮಾಧ್ಯಮವನ್ನು ತೆಗೆದುಕೊಂಡಿದ್ದ. ಇನ್‌ಸ್ಟಾಗ್ರಾಮ್ ಖಾತೆಯನ್ನು ತೆರೆದ ಬಳಿಕ, ಹುಡುಗ ನೆಟಿಜನ್‌ಗಳನ್ನು ಆಕರ್ಷಿಸಲು 'ರಿಪೋರ್ಟಿಂಗ್' ಶೈಲಿಯಲ್ಲಿ ವೀಡಿಯೊಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದ್ದ. ಸ್ಥಳ ಮತ್ತು ಮೆನು ಸೇರಿದಂತೆ ಎಲ್ಲಾ ಸಂಬಂಧಿತ ವಿವರಗಳನ್ನು ಹಂಚಿಕೊಳ್ಳುವ ಅದ್ನಾನ್, ವೀಡಿಯೊವೊಂದರಲ್ಲಿ ತಮ್ಮ ಫುಡ್ ಸ್ಟಾಲ್ ನ ಬಗ್ಗೆ ಹೀಗೆ ಹೇಳುತ್ತಾರೆ.

“ದೇಖಿಯೇ ಯೇ ಹಮಾರೇ ಪಾಪ ಬೈಟೆ ಹುಯೇ ಹೈಂ. ಚಿಕನ್ ಕಿ ಹಲೀಮ್ ಹೈ (ನೋಡಿ, ಇವರು ನಮ್ಮ ತಂದೆ, ಸ್ಟಾಲ್ ನಲ್ಲಿದ್ದಾರೆ. ಇಲ್ಲಿ ಚಿಕನ್ ಹಲೀಮ್ ಇದೆ) ಎಂದು ಹೇಳುವ ಮೂಲಕ ಫುಡ್ ಸ್ಟಾಲ್ ನ ವಿಶೇಷತೆಗಳನ್ನು ಬಣ್ಣಿಸಿದ್ದಾರೆ. ತನ್ನ ಫೋನ್ ಬಳಸಿ ವೀಡಿಯೊಗಳನ್ನು ಮಾಡುತ್ತಿರುವಾಗ, ಅವನ ತಂದೆಯ ವ್ಯವಹಾರದ ವಿವರಗಳನ್ನು ಹಂಚಿಕೊಳ್ಳುವ ಅವನ ಪ್ರಯತ್ನ ಎಲ್ಲಿಯೂ ತಪ್ಪಾಗಿಲ್ಲ ಎನ್ನುವುದು ವಿಶೇಷ.

Viral Video ಟ್ರ್ಯಾಕ್ ನ ಮಧ್ಯೆ ಮಲಗಿದ್ದ ಮಹಿಳೆಯ ಮೇಲೆ ಹಾದು ಹೋದ ರೈಲು, ಆಕೆಯ ಪ್ರತಿಕ್ರಿಯೆ ಕಂಡು ನೆಟಿಜನ್ಸ್ ಗಳ ಅಚ್ಚರಿ!

ಕಳೆದ ನಾಲ್ಕು ವರ್ಷಗಳಿಂದ ಅದ್ನಾನ್ ನ ತಂದೆ ಬೀದಿ ಬದಿಯಲ್ಲಿ ಚಿಕನ್ ಹಲೀಮ್ ವ್ಯವಹಾರ ನಡೆಸುತ್ತಿದ್ದಾರೆ. ಆದರೆ, ಅದ್ನಾನ್ ನ ಡಿಜಿಟಲ್ ಮಾರ್ಕೆಟಿಂಗ್ ನ ಪ್ರಯತ್ನವಾಗಿ ಹೈದರಾಬಾದ್ ನ ಬಹುತೇಕ ಜನರು ಹಲೀಮ್ ಸವಿಯುವ ಸಲುವಾಗಿ ಈ ಫುಡ್ ಸ್ಟಾಲ್ ಗೆ ಧಾವಿಸುತ್ತಿದ್ದಾರೆ.

Discriminate ಭಾರತೀಯ ಕಾನೂನಿಂದ ಬಡವರ ತಾರತಮ್ಯ, ಹೈಕೋರ್ಟ್ ಮುಖ್ಯನ್ಯಾಯಮೂರ್ತಿ!

ಅದ್ನಾನ್ ಅವರ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆದ ನಂತರ, ಹಲವಾರು ಫುಡ್ ಬ್ಲಾಗರ್‌ಗಳು ಅದ್ನಾನ್ ಹಾಗೂ ಆತನ ತಂದೆಗೆ ಬೆಂಬಲ ತೋರಿಸಿದ್ದಾರೆ. ಆಹಾರವನ್ನು ಖರೀದಿಸುವುದರಿಂದ ಹಿಡಿದು ಅದ್ನಾನ್ ಅವರ ತಂದೆಯ ಸ್ಟಾಲ್ ಅನ್ನು ಪ್ರಚಾರ ಮಾಡುವ ವೀಡಿಯೊಗಳನ್ನು ಮಾಡುವವರೆಗೆ ಜನಪ್ರಿಯತೆ ಸಿಕ್ಕಿದೆ. ಇಂಟರ್ನೆಟ್ ಇಡೀ ಕುಟುಂಬದ ಭಾಗ್ಯದ ಬಾಗಿಲನ್ನು ತೆರೆದಂತಾಗಿದೆ. ಸಾಮಾಜಿಕ ಜಾಲತಾಣವನ್ನು ಉತ್ತಮವಾಗಿ ಬಳಸಿಕೊಳ್ಳುವುದರಿಂದ ಒಂದು ವಾಣಿಜ್ಯ ವ್ಯವಹಾರವನ್ನು ಹೇಗೆ ಪ್ರಖ್ಯಾತಿ ಮಾಡಬಹುದು ಎನ್ನುವುದಕ್ಕೆ ಅದ್ನಾನ್ ಅವರ ಈ ಪ್ರಯತ್ನವೇ ಸಾಕ್ಷಿಯಾಗಿದೆ.