Asianet Suvarna News Asianet Suvarna News

ಮುಸ್ಲಿಮರು ಗೋಮಾಂಸ ಸೇವನೆ ಬಿಡಬೇಕು, RSS ಭೇಟಿ ಬಳಿಕ ಎಸ್‌ವೈ ಖುರೇಷಿ ಸಂಚಲನ ಹೇಳಿಕೆ!

ಇತ್ತೀಚೆಗೆ ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಎಸ್ ವೈ ಖುರೇಷಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭೇಟಿ ಮಾಡಿದ್ದಾರೆ. ಈ ಭೇಟಿಗೆ ಪರ ವಿರೋಧಗಳು ಕೇಳಿಬಂದಿತ್ತು. ಖುರೇಷಿ ಭೇಟಿ ಬಳಿಕ ಏಷ್ಯಾನೆಟ್ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ. ಭಾಗವತ್ ಜೊತೆಗಿನ ಮಾತುಕತೆ, ಹಿಂದೂ ಮುಸ್ಲಿಮ್ ನಡುವಿನ ಭಿನ್ನಾಭಿಪ್ರಾಯ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ.

Muslims should not eat beef for Healthy society says former Chief Election Commissioner sy kureshi  ckm
Author
First Published Oct 19, 2022, 4:07 PM IST | Last Updated Oct 19, 2022, 5:58 PM IST

ಚುನಾವಣಾ ಆಯೋಗದ ಮಾಜಿ ಮುಖ್ಯಸ್ಥ ಎಸ್‌ವೈ ಖುರೇಷಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಹಿಂದೂ ಮುಸ್ಲಿಮ್ ನಡುವಿನ ಕಂದಕ ಹೆಚ್ಚಾಗುತ್ತಿರುವ ಬೆನ್ನಲ್ಲೇ ಈ ಭೇಟಿ ಭಾರಿ ಕುತೂಹಲ ಹಾಗೂ ಟೀಕೆಗೂ ಕಾರಣವಾಗಿತ್ತು. ಈ ಭೇಟಿಯಲ್ಲಿ ನಡೆದ ಮಾತುಕತೆಗಳೇನು? ಏಷ್ಯಾನೆಟ್ ಜೊತೆ ಸಂಪೂರ್ಣ ವಿವರ ಹಂಚಿಕೊಂಡಿದ್ದಾರೆ.

ಪ್ರಶ್ನೆ: ಇತ್ತೀಚೆಗೆ ನೀವು ಆರ್​ಎಸ್​ಎಸ್​ ಮುಖ್ಯಸ್ಥರನ್ನ ಭೇಟಿಯಾಗಿದ್ದಿರಿ... ಯಾವ ಕಾರಣದಿಂದ ಬೇಟಿಯಾಗಿದ್ದಿರಿ..? ಈ ನಿರ್ಧಾರದ ಹಿಂದೆ ಯಾರಿದ್ದಾರೆ..?
ಉತ್ತರ: ನಮ್ಮ ಸ್ನೇಹಿತರ ತಂಡದ ನಿರ್ಧಾರ ಇದು. ನಾವು ಸ್ನೇಹಿತರು ಭಾರತದ ಸದ್ಯದ ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೆವು. ಇಂದಿನ ದೇಶದ ಸ್ಥಿತಿ ಬಗ್ಗೆ ಆತಂಕ ಮತ್ತು ಚಿಂತೆ ಇದೆ. ಈ ಕಾರಣದಿಂದ ನಾವು ಆರ್​ಎಸ್​ಎಸ್​ ಮುಖ್ಯಸ್ಥರನ್ನ ಭೇಟಿಯಾದೆವು. ಅವರ ಚಿಂತನೆ ಏನಿದೆ, ಅವರ ಉದ್ದೇಶ ಏನು.. ಎಂದು ತಿಳಿಯ ಬಯಸಿದ್ದೆವು ಶೇ.15ರಷ್ಟು ಜನಸಂಖ್ಯೆಯ ಮುಸ್ಲಿಂ ಭದ್ರತೆ ಬಗ್ಗೆ ಅವರ ಜತೆ ಮಾತನಾಡಬೇಕಿತ್ತು. ಭೇಟಿಗೆ ಅನಮುತಿ ಕೇಳಿ ಇ-ಮೇಲ್ ಮೂಲಕ ಕೇಳಿಕೊಂಡಿದ್ದೆವು
ದೆಹಲಿಗೆ ಅವರು ಬಂದ ಸಂದರ್ಭದಲ್ಲಿ ನಮ್ಮ ಬೇಟಿಗೆ ಅವಕಾಶ ಕೊಟ್ಟಿದ್ದರು. ಅದು ಒಳ್ಳೆಯ ಭೇಟಿಯಾಗಿತ್ತು

Samvaad: ಭಾರತದ ಸಂಸ್ಕೃತಿ ಪ್ರಭಾವ ನನ್ನ ಮೇಲಿದೆ, ನಾನೆಂದು ಬೀಫ್‌ ತಿಂದಿಲ್ಲ, ತಿನ್ನೋದು ಇಲ್ಲ: ಎಸ್‌ವೈ ಖುರೇಷಿ!

ಪ್ರಶ್ನೆ: ನಿಮ್ಮ ಬೇಟಿ ಬಗ್ಗೆ ಪ್ರತಿಕ್ರಿಯೆಗಳೇನು..? ನವ ಭಾರತದಲ್ಲಿ ನೀವು ಆರ್​ಎಸ್​ಎಸ್​ ಕಾರ್ಯನಿರ್ವಹಣೆಯನ್ನ ಒಪ್ಪಿಕೊಂಡಿರಿ ಅನ್ನೋ ಆರೋಪಗಳಿವೆಯಲ್ಲ..
ಉತ್ತರ:  ಇದು ಅತ್ಯಂತ ಮೂರ್ಖತನದ ಆರೋಪ. ನಾವು ಕೇವಲ ನಿವೃತ್ತ ಸರ್ಕಾರಿ ಅಧಿಕಾರಿಗಳ ತಂಡ ಅಷ್ಟೇ. ಒಬ್ಬ ನಿವೃತ್ತ ಸೇನಾಧಿಕಾರಿ, ಒಬ್ಬರು ಅಧಿಕಾರಿ, ಪತ್ರಕರ್ತ, ಹೋಟೆಲ್ ಮಾಲೀಕ.. ನಾವು ಯಾವುದೇ ಸಮುದಾಯ, ಸಂಘಟನೆಯನ್ನ ಪ್ರತಿನಿಧಿಸುವುದಿಲ್ಲ. ನಾವು ಹೇಗೆ ಆರ್​ಎಸ್​ಎಸ್​ ಕಾರ್ಯನಿರ್ವಹಣೆಯನ್ನ ಒಪ್ಪಿಕೊಂಡಂತಾಗುತ್ತೆ. ಇದು ಅರ್ಥವಿಲ್ಲದ ಆರೋಪ . 

ಪ್ರಶ್ನೆ: ಈ ಭೇಟಿ ನಂತರ ಮುಸ್ಲಿಂ ಸಮುದಾಯದ ಕೆಲವರು ನಿಮ್ಮೊಂದಿಗೆ ಮಾತಾಡಿರಬಹುದು.. ಅವರ ಪ್ರತಿಕ್ರಿಯೆ ಹೇಗಿತ್ತು..?
ಉತ್ತರ:   ಶೇ.99ರಷ್ಟು ಪ್ರತಿಕ್ರಿಯೆಗಳು.. ನೀವು ಒಳ್ಳೆಯ ಕೆಲಸ ಮಾಡಿದಿರಿ ಎಂದಾಗಿತ್ತು. ಈ ಭೇಟಿಯಿಂದ ಏನು ಆಗಲ್ಲ, ಯಾವ ಬದಲಾವಣೆಯೂ ಆಗಲ್ಲ ಎಂದು ಕೆಲವರು ಟೀಕಿಸಿದರು. ಮಾತುಕತೆಯಿಂದಷ್ಟೇ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ಹಲವರು ಹೇಳುತ್ತಾರೆ. ಈ ಭೇಟಿಯಿಂದ ಉಪಯೋಗವೇನು ಅನ್ನೋ ಪ್ರಶ್ನೆ ಉದ್ಭವಿಸಲ್ಲ. ಈ ಭೇಟಿಯ ಪ್ರಾಮುಖ್ಯತೆಯೇನು..? ಉಪಯೋಗವೇನು ಎಂದು ಕೆಲವರು ಕೇಳುತ್ತಿದ್ದಾರೆ. ನಾವು ಕೇವಲ ಪ್ರಯತ್ನವನ್ನಷ್ಟೇ ಮಾಡಬಹುದು, ಫಲಿತಾಂಶ ಅಲ್ಲಾನ ಕೈಯಲ್ಲಿದೆ. 

ಪ್ರಶ್ನೆ: ಭೇಟಿ ವೇಳೆ ಕೆಲ ವಿಷಯಗಳ ಚರ್ಚೆ ಮಾಡಿದ ಬಗ್ಗೆ ಪತ್ರಿಕೆಗಳಲ್ಲಿ ಬಂದಿದೆ. ಸಮುದಾಯಗಳ ಮಧ್ಯದ ಧ್ವೇಷ, ಮುಸ್ಲಿಂ ಅಭದ್ರತೆ ಬಗ್ಗೆ ಮಾತಾಡಿದಿರಿ... ಅವರ ಪ್ರತಿಕ್ರಿಯೆ ಏನಿತ್ತು..?
ಉತ್ತರ:  ಅವರೂ ಕೂಡ ಈ ಬೆಳವಣಿಗೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಈ ಬಗ್ಗೆ ನಾವು ಏನಾದರೂ ಮಾಡಬೇಕು ಎಂದರು. ಅವರ ಸಂಘಟನೆಯ, ಹಿಂದೂ ಸಮುದಾಯದ ಕೆಲವರ ಯೋಚನೆ ಬೇರೆ ಇದೆ ಎಂದರು. ಕೆಲವರು ಮುಸ್ಲಿಮರ ಜತೆ ಒಳ್ಳೆಯ ಸಂಬಂಧವಿಟ್ಟುಕೊಳ್ಳಬೇಕೆಂದುಕೊಳ್ಳುತ್ತಾರೆ. ಕೆಲವರು ಈಗ ನಡೆಯುತ್ತಿರುವುದೇ ಸರಿ ಎನ್ನುತ್ತಾರೆ ಎಂಬ ಬಗ್ಗೆ ಹೇಳಿದರು. ಎರಡೂ ಸಮುದಾಯದಲ್ಲೂ ಒಂದೇ ರೀತಿಯ ಅಭಿಪ್ರಾಯ ಇಲ್ಲ. ಬಹುಸಂಖ್ಯಾತ ಮುಸ್ಲಿಮರ ಅಭಿಪ್ರಾಯ ಮಾತುಕತೆ ನಡೆಬೇಕು ಎಂಬುದಾಗಿದೆ. ನಾವು ಯಾವುದೇ ಸಂಘಟನೆಯನ್ನ ಪ್ರತಿನಿಧಿಸಿಕೊಂಡು ಅಲ್ಲಿಗೆ ಹೋಗಿರಲಿಲ್ಲ. ನಮ್ಮ ಆತಂಕಗಳನ್ನು ಅವರಲ್ಲಿ ಹೇಳಿಕೊಳ್ಳಲು ಹೋಗಿದ್ದೆವಷ್ಟೇ

ಅಜ್ಞಾನದಿಂದ ಆರ್‌ಎಸ್‌ಎಸ್‌ ಟೀಕಿಸುವವರು ಸಂಘದ ಬಗ್ಗೆ ಜ್ಞಾನ ಪಡೆದುಕೊಳ್ಳಿ: ಪ್ರಮೋದ್ ಮಧ್ವರಾಜ್

ಪ್ರಶ್ನೆ:ನೀವು ಸಮುದಾಯಗಳ ಮಧ್ಯದ ಧ್ವೇಷ, ಮುಸ್ಲಿಂ ಅಭದ್ರತೆ ವಿಷಯವನ್ನ ಪ್ರಸ್ತಾಪಿಸಿದಿರಿ..
ಉತ್ತರ: ಹೌದು

ಪ್ರಶ್ನೆ:ಅವರ ಪ್ರತಿಕ್ರಿಯೆ ಏನಿತ್ತು..?
ಉತ್ತರ: ಅವರ ಪ್ರತಿಕ್ರಿಯೆ, ಬದಲಾವಣೆಯಾಗಬೇಕು ಎಂಬುದಾಗಿತ್ತು. ಅವರೂ ಕೂಡ ಕೆಲವು ಬೆಳವಣಿಗೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಅವರು ಹಿಂದೂಗಳನ್ನು ಪ್ರಚೋದಿಸುವ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದರು.  ಹಿಂದೂಗಳಿಗೆ ಗೋವು ಅನ್ನೋದು ಅತ್ಯಂತ ಸೂಕ್ಷ್ಮ ವಿಷಯ ಎಂದರು. ನಾವು ಕೂಡ ಇದನ್ನ ಒಪ್ಪಿದೆವು, ದೇಶದ ಬಹುತೇಕ ಕಡೆ ಗೋಹತ್ಯೆಗೆ ನಿಷೇಧವಿದೆ. ಗೋಹತ್ಯೆ ಮಾಡಿದರೆ, ಗೋಮಾಂಸ ಮಾರಾಟ ಮಾಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ. ದೇಶದ ಕೆಲ ಭಾಗಗಳಲ್ಲಿ ಕಾನೂನಿಗೆ ಬೆಲೆಯಿಲ್ಲದ ವಾತಾವರಣದ ಬಗ್ಗೆ ಅವರು ಪ್ರಸ್ತಾಪಿಸಿದರು. ಕೆಲವು ಕಡೆ ಜನ ಗೋಹತ್ಯೆ ವಿರುದ್ಧ ನೈತಿಕ ಪೊಲೀಸ್​ಗಿರಿಗೆ ಇಳಿಯುತ್ತಾರೆ. ಇದು ಅರ್ಥವಾಗುವಂತದ್ದು... ನಮ್ಮ ಧರ್ಮದಲ್ಲಿ ಗೋ ಮಾಂಸ ಭಕ್ಷಣೆಗೆ ನಿಷೇಧವಿಲ್ಲ. ಆದರೆ ನಾನು ಕಳೆದ 50  ವರ್ಷಗಳಿಂದ ನಾನು ಗೋ ಮಾಂಸ ಮುಟ್ಟಿಲ್ಲ. ನಾನು ವಿದೇಶಗಳಿಗೆ ಹೋದರೂ ನಾನು ಗೋ ಮಾಂಸ ತಿನ್ನಲ್ಲ. ಸಂಸ್ಕೃತಿಕ ಪ್ರಭಾವದ ಕಾರಣ, ನನ್ನ ಎಲ್ಲ ಸ್ನೇಹಿತರು ಹಿಂದೂಗಳು ಗೋ ಮಾಂಸ ತಿನ್ನಲ್ಲ. ನಾನೂ ಕೂಡ ಗೋ ಮಾಂಸ ತಿನ್ನದಿರುವ ಅಬ್ಯಾಸ ಮಾಡಿಕೊಂಡಿದ್ದೇನೆ. ಗೋಮಾಂಸ ತಿನ್ನುವುದನ್ನು ಬಿಡುವುದು ಮುಸ್ಲಿಮರಿಗೆ ಕಷ್ಟವೇನಲ್ಲ. ಗೋ ಮಾಂಸಕ್ಕಿಂತ ಕೋಳಿಯ ಮಾಂಸವೇ ಕಡಿಮೆ ಬೆಲೆಗೆ ಸಿಗುತ್ತದೆ. ಆರೋಗ್ಯದ ಕಾರಣಕ್ಕೂ ಕೆಂಪು ಮಾಂಸದ ಬದಲಿಗೆ ಕೋಳಿ ಮಾಂಸ ಒಳ್ಳೆಯದು. ದೇಶದೊಳಗಿನ ಸಾಮಾಜಿಕ ಸ್ವಾಸ್ತ್ಯಕ್ಕಾಗಿ ನಾವು ಗೋಮಾಂಸ ತಿನ್ನುವುದನ್ನ ಯಾಕೆ ಬಿಡಬಾರದು..? ಆದ್ರೆ ಜನ ಇದನ್ನ ಮೂಲಬೂತ ಹಕ್ಕೆಂದು ಪರಿಗಣಿಸುತ್ತಾರೆ... ಏನನ್ನ ತಿನ್ನಬೇಕು..? ಏನು ಮಾಡಬೇಕು ಅನ್ನೋದನ್ನ..ಖಂಡಿತ ಇದನ್ನು ಒಪ್ಪುತ್ತೇನೆ. ಇದು ನಮ್ಮ ಮೂಲಭೂತ ಹಕ್ಕು ಆದರೆ ಸ್ವಯಂಪ್ರೇರಿತವಾಗಿ ಕೆಲವರು ಹಕ್ಕುಗಳನ್ನ ಬಿಟ್ಟುಕೊಡಬಹುದು. ಸಾಮಜಿಕ ಸ್ವಾಸ್ತ್ಯದ ಉದ್ದೇಶಕ್ಕೆ, ಸ್ನೇಹದ ಕಾರಣಕ್ಕೆ ಬಿಡಬಹುದು. 

ಪ್ರಶ್ನೆ:ಮೋಹನ್ ಭಾಗವತ್ ಅವರು ಕೇರಳ ರಾಜ್ಯದ ಬಗ್ಗೆ ಪ್ರಸ್ತಾಪಿಸಿದರಾ..?
ಉತ್ತರ:  ಅವರು ಕೇರಳ ರಾಜ್ಯದ ಬಗ್ಗೆ ಪ್ರಸ್ತಾಪ ಮಾಡಲಿಲ್ಲ

ಪ್ರಶ್ನೆ:  ಗೋ ಮಾಂಸ ತಿನ್ನುವುದರ ವಿರುದ್ಧ ಸಲಹೆ ನೀಡಿದರಾ..?
ಉತ್ತರ:ಅದು ಅವರ ಸಹೆಯಾಗಿತ್ತು... ಪರೋಕ್ಷ ಸಲಹೆಯಾಗಿತ್ತು.  ನೀವು ತಿನ್ನಲೇಬಾರದು ಎಂದೇನು ಅವರು ಹೇಳಲಿಲ್ಲ. ಸರ್ಕಾರವೇ ಗೋಮಾಂಸ ತಿನ್ನುವುದನ್ನ ಬ್ಯಾನ್ ಮಾಡಬಹುದು. ಅವರೂ ಅರ್ಥಮಾಡಿಕೊಂಡಿದ್ದಾರೆ. ಅಲ್ಪಸಂಖ್ಯಾತರ ಸೂಕ್ಷ್ಮ ವಿಷಯದ ಕಾರಣಕ್ಕೆ ಅದನ್ನು ಸರ್ಕಾರ ಮಾಡಿಲ್ಲ.
 

Latest Videos
Follow Us:
Download App:
  • android
  • ios