Asianet Suvarna News Asianet Suvarna News

ಮುಸ್ಲಿಮರು ಲಸಿಕೆ ಪರಿಶೀಲಿಸಬೇಕು ಎಂದ ಧರ್ಮಗುರು; ತಿರುಗೇಟು ನೀಡಿದ ಬಿಜೆಪಿ!

ಕೊರೋನಾ ವೈರಸ್ ಲಸಿಕೆ ದೇಶದ ಎಲ್ಲಾ ಭಾಗಕ್ಕೆ ವಿತರಣೆ ಮಾಡಲು ಸರ್ಕಾರ ತಯಾರಿ ಮಾಡಿಕೊಳ್ಳುತ್ತಿದೆ. ಇದರ ನಡುವೆ ಭಾರತೀಯ ಮುಸ್ಲೀಮರು ಹಲಾಲ್ ಪ್ರಮಾಣೀಕೃತ ಕೊರೋನಾ ಲಸಿಕೆಗೆ ಆಗ್ರಹಿಸಿದ್ದಾರೆ. ಹಂದಿ ಗೆಲಾಟಿನ್ ಬಳಿಸಿದ ಕೊರೋನಾ ಲಸಿಕೆ ನಮಗೆ ಬೇಡ ಎಂದಿದ್ದಾರೆ. ಇದು ಭಾರಿ ವಿವಾದಕ್ಕೂ ಕಾರಣವಾಗಿದೆ. ಪ್ರತಿ ದಿನ ಹಲಾಲ್ ಲಸಿಕೆ ಬೇಡಿಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಬಿಜೆಪಿ ತಿರುಗೇಟು ನೀಡಿದೆ.

Muslims should check substances used in vaccine are allowed in Islam or not says cleric ckm
Author
Bengaluru, First Published Dec 25, 2020, 7:46 PM IST

ನವದೆಹಲಿ(ಡಿ.25):  ವಿಶ್ವದಲ್ಲಿನ ಮುಸ್ಲಿಂರು ಇದೀಗ ಕೊರೋನಾ ಲಸಿಕೆಯಲ್ಲಿ ಹಿಂದಿ ಗೆಲಾಟಿನ್ ಅಂಶ ಬಳಸಲಾಗಿದೆ. ಹೀಗಾಗಿ ಹಲಾಲ್ ಪ್ರಮಾಣೀಕೃತ ಕೊರೋನಾ ಲಸಿಕೆಗೆ ಪಟ್ಟು ಹಿಡಿಯುತ್ತಿದ್ದಾರೆ. ಭಾರತದಲ್ಲೂ ಹಲಾಲ್ ಲಸಿಕೆಗೆ ಕೂಗು ಕೇಳಿ ಬರುತ್ತಿದೆ. ಇದೀಗ ದಾರುಲ್ ಉಲೂಮ್ ದಿಯೊಬಾಂದ್  ಧರ್ಮಗುರು  ಮುಸ್ಲಿಂರಿಗೆ ಮಹತ್ವದ ಎಚ್ಚರಿಕೆ ನೀಡಿದ್ದಾರೆ.

ಹಲಾಲ್ ಪ್ರಮಾಣೀಕೃತ ಕೊರೋನಾ ಲಸಿಕೆಗೆ ಮಾತ್ರ ಇಂಡೋನೇಷ್ಯಾದಲ್ಲಿ ಅವಕಾಶ!..

ಭಾರತೀಯ ಮುಸ್ಲೀಮರು ಕೊರೋನಾ ಲಸಿಕೆ ಪಡೆಯುವ ಮೊದಲು ಪರಿಶೀಸಿಲುವುದು ಅಗತ್ಯ. ಕೊರೋನಾ ಲಸಿಕೆಯಲ್ಲಿ ಮುಸ್ಲಿಂಮರಿಗೆ ವಿರುದ್ಧವಾಗಿರುವ ಪದಾರ್ಥಗಳನ್ನು ಬಳಸಲಾಗಿದೆಯೇ ಎಂಬುದನ್ನು ಅಗತ್ಯವಾಗಿ ಪರಿಶೀಲಿಸಬೇಕು ಎಂದು ಧರ್ಮಗುರು ಆಗ್ರಹಿಸಿದ್ದಾರೆ. ಆದರೆ ಬಿಜೆಪಿ ಹಲಾಲ್ ಬೇಡಿಕೆಗೆ ತಿರುಗೇಟು ನೀಡಿದೆ.

ಮುಸ್ಲಿಮರು ಕೊರೋನಾ ಲಸಿಕೆ ಪಡೆಯುವ ಮೊದಲು ಫತ್ವಾಕ್ಕಾಗಿ ಕಾಯಬೇಕು. ಬಳಿಕ ನಿರ್ಧರಿಸಿ ಎಂದಿದ್ದಾರೆ. ಲಸಿಕೆ ತೆಗೆದುಕೊಳ್ಳುವ ಮೊದಲು ಮುಸ್ಲಿಮರು ಲಸಿಕೆ ತಯಾರಿಸಲು ಬಳಸುವ ವಸ್ತುಗಳನ್ನು ಇಸ್ಲಾಮಿನಲ್ಲಿ ಅನುಮತಿಸಲಾಗಿದೆಯೇ ಎಂದು ಪರಿಶೀಲಿಸಬೇಕು ಎಂದಿದ್ದಾರೆ. ಮುಸ್ಲಿಮರಿಗೆ ಕೊರೋನಾ ಲಸಿಕೆ ಸುರಕ್ಷಿತವಾಗಿದೆಯೇ? ಅಥವಾ ಬಳಸಲು ಯೋಗ್ಯವೇ ಅನ್ನೋದನ್ನು ಫತ್ವಾ ವಿಭಾಗ ನಿರ್ಧರಿಸಲಿದೆ ಎಂದು ಧರ್ಮಗುರು ಹೇಳಿದ್ದಾರೆ.

ಕೋವಿಡ್ ವ್ಯಾಕ್ಸಿನ್‌ನಲ್ಲಿ ಹಂದಿ ಮಾಂಸದ ಜಿಲಾಟಿನ್ ; ತಂದಿಟ್ಟಿತು 'ಧರ್ಮ' ಸಂಕಟ...

ಕೊರೋನಾ ಲಸಿಕೆ ಸಾಗಾಣಿಕೆ ಹಾಗೂ ಸಂಗ್ರಹಣೆ ಕೂಡ ಅತ್ಯಂತ ಸವಾಲಾಗಿದೆ. ಇವನ್ನು ಪರಿಣಾಮಕಾರಿಯಾಗಿ ಮಾಡಲು ಹಂದಿಮಾಂಸದ ಜಿಲಾಟಿನ್ ಬಳಸಲಾಗುತ್ತದೆ. ಇದಕ್ಕೆ ಭಾರತ ಸೇರಿದಂತೆ ವಿಶ್ವದ ಮುಸ್ಲಿಮರು ವಿರೋಧ ವ್ಯಕ್ತಪಡಿಸಿದ್ದಾರೆ.
 

Follow Us:
Download App:
  • android
  • ios