Asianet Suvarna News Asianet Suvarna News

'ರಾಮ, ಕೃಷ್ಣ, ಶಿವ ಭಾರತೀಯ ಮುಸ್ಲಿಮರ ಪೂರ್ವಜರು'

* ವಿವಾದ ಎಬ್ಬಿಸುವ ಹೇಳಿಕೆ ನೀಡಿದ ಉತ್ತರ ಪ್ರದೇಶದ ಸಚಿವ
*ರಾಮ, ಕೃಷ್ಣ, ಶಿವ ಭಾರತೀಯ ಮುಸ್ಲಿಮರ ಪೂರ್ವಜರು,
* ಮುಸ್ಲಿಮರು ಭಾರತೀಯ ಸಂಸ್ಕೃತಿಗೆ ತಲೆ ಬಾಗಲೇಬೇಕು

Muslims should bow to 'Indian culture Uttar Pradesh Minister Statement mah
Author
Bengaluru, First Published Sep 24, 2021, 11:56 PM IST

ಲಕ್ನೋ(ಸೆ. 24)   ಉತ್ತರ ಪ್ರದೇಶದ ಸಚಿವರೊಬ್ಬರು ವಿವಾದ ಎಬ್ಬಿಸುವ ಹೇಳಿಕೆ ನೀಡಿದ್ದಾರೆ.  ರಾಮ, ಕೃಷ್ಣ, ಶಿವ ಭಾರತೀಯ ಮುಸ್ಲಿಮರ ಪೂರ್ವಜರು,ಹೀಗಾಗಿ ಅವರು ಭಾರತೀಯ ಸಂಸ್ಕೃತಿಗೆ ತಲೆಬಾಗಲೇಬೇಕು ಎಂದು ಉತ್ತರ ಪ್ರದೇಶ ಸಚಿವ ಆನಂದ ಸ್ವರೂಪ್ ಶುಕ್ಲಾ ಹೇಳಿರುವುದು ದೊಡ್ಡ ಸುದ್ದಿಯಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹಿಂದುತ್ವ ಮತ್ತು ಭಾರತೀಯ ಸಂಸ್ಕೃತಿ ಧ್ವಜವನ್ನು ಎತ್ತಿ ಹಿಡಿಯುವ ಮೂಲಕ ದೇಶದಲ್ಲಿ ಇಸ್ಲಾಮಿಕ್ ರಾಜ್ಯವನ್ನು ರಚಿಸುವ ಉದ್ದೇಶಕ್ಕೆ ತಡೆಯಾಗಿದ್ದಾರೆ ಎಂಬ ಅರ್ಥದಲ್ಲಿಯೂ ಮಾತನಾಡಿದ್ದಾರೆ. 

ಮಹಾಭಾರತದ ಗೀತೆಯನ್ನು ಇವರ ಬಾಯಲ್ಲಿ ಕೇಳಲೇಬೇಕು

ಕಾಬಾ ಭೂಮಿಯ ಕಡೆ ನೋಡುವ ಅಗತ್ಯವಿಲ್ಲ.  ಭಾರತದ ಮುಸ್ಲಿಮರ ಪೂರ್ವಜರು ರಾಮ, ಕೃಷ್ಣ, ಶಿವ.  ಮುಸ್ಲಿಮರು ಭಾರತದ ಭೂಮಿ ಮತ್ತು ಸಂಸ್ಕೃತಿಗೆ ತಲೆಬಾಗಲೇಬೇಕು ಎಂದಿದ್ದಾರೆ.  ಕಳೆದ ನಾಲ್ಕೂವರೆ ವರ್ಷಗಳ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್  ಸರ್ಕಾರ ಮಾಡಿರುವ ಕೆಲಸಗಳನ್ನು ಒಂದೊಂದಾಗಿ ತಿಳಿಸಿದರು.

ಸಿರಿಯಾ ಮತ್ತು ಅಫ್ಘಾನಿಸ್ತಾನದ ನಂತರ ಕೆಲವರು ಜಗತ್ತಿನ ಇನ್ನು ಕೆಲ ರಾಷ್ಟ್ರಗಳನ್ನು ಇಸ್ಲಾಮಿಕರಣ ಮಾಡಲು ಮುಂದಾಗಿದ್ದಾರೆ.  ಮೋದಿ ಮತ್ತು ಯೋಗಿ ಭಾರತವನ್ನು ಕಾಪಾಡುತ್ತಿದ್ದಾರೆ ಎಂದರು. ಓವೈಸಿ ವಿರುದ್ಧವೂ ವಾಗ್ದಾಳಿ ಮಾಡಿ ಹೈದರಾಬಾದ್‌ ನ್ನು ಪ್ರತ್ಯೇಕ ದೇಶ ಮಾಡಲು ಹುನ್ನಾರ ನಡೆದಿತ್ತು ಎಂದಿದ್ದಾರೆ. 

Follow Us:
Download App:
  • android
  • ios