Asianet Suvarna News Asianet Suvarna News

UP Elections: ಬಿಜೆಪಿ ಅದೃಷ್ಟ ಬದಲಾಯಿಸುತ್ತಾ ಮುಸ್ಲಿಂ ಸಮುದಾಯದ ಮತಗಳು?

* ಉತ್ತರ ಪ್ರದೇಶ ಚುನಾವಣೆಗೆ ದಿನಗಣನೆ

* ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳ ಸರ್ಕಸ್

* ಬಿಜೆಪಿ ಅದೃಷ್ಟ ಬದಲಾಯಿಸುತ್ತಾ ಮುಸ್ಲಿಂ ಸಮುದಾಯದ ಮತಗಳು?

Muslim Vote Bank May Change The Fate Of BJP In UP Elections pod
Author
Bangalore, First Published Jan 9, 2022, 5:30 PM IST | Last Updated Jan 9, 2022, 5:30 PM IST

ಲಕ್ನೋ(ಜ.09): ಉತ್ತರ ಪ್ರದೇಶ ವಿಧಾನಸಭೆ (Uttar Pradesh Elections) 2022 ರ ಚುನಾವಣೆ ಫೆಬ್ರವರಿ 10 ರಿಂದ ಪ್ರಾರಂಭವಾಗಲಿದೆ. ಈ ಕುರಿತು ಚುನಾವಣಾ ಆಯೋಗ ಶನಿವಾರ ಘೋಷಣೆ ಮಾಡಿದೆ. ಈಗ ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲಲು ಮತ ಗಳಿಸಲು ಭಾರೀ ಪೈಪೋಟಿ ಆರಂಭವಾಗಿದೆ. ಈ ಬಾರಿಯ ಉತ್ತರ ಪ್ರದೇಶ ಚುನಾವಣೆಯಲ್ಲಿ ಯುಪಿ ಸರ್ಕಾರ ರಚನೆಯಲ್ಲಿ ಮುಸ್ಲಿಂ ಸಮುದಾಯ ದೊಡ್ಡ ಪಾತ್ರ ವಹಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಬಿಜೆಪಿ ಇಲ್ಲಿಯವರೆಗೆ ಹಿಂದೂ ಸಮುದಾಯದ ಪ್ರಬಲ ಮತಬ್ಯಾಂಕ್ ಹೊಂದಿತ್ತು.

ಅದೇ ವೇಳೆ, ಇದುವರೆಗೆ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮುಸ್ಲಿಂ ಸಮುದಾಯದ ಮತಗಳ ಪ್ರಬಲ ಬೆಂಬಲವನ್ನು ಹೊಂದಿದ್ದವು. ಆದರೆ ಈಗ ಈ ಮತ ಮಾದರಿಯಲ್ಲಿ ಬದಲಾವಣೆ ಕಾಣುವ ಸಾಧ್ಯತೆ ಇದೆ. 2014ರ ಲೋಕಸಭೆ ಚುನಾವಣೆ ಮತ್ತು 2017ರ ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಓಟ್‌ಬ್ಯಾಂಕ್ ಎಸ್ ಪಿ ಮತ್ತು ಬಿಎಸ್ ಪಿ ನಡುವೆ ಹಂಚಿ ಹೋಗಿತ್ತು. ಆದರೆ ಎಸ್‌ಪಿ ಮತ್ತು ಬಿಎಸ್‌ಪಿ ನಡುವಿನ ಮೈತ್ರಿಯು 2019 ರ ಲೋಕಸಭೆ ಚುನಾವಣೆಯಲ್ಲಿ ಮತದಾರರ ಆಯ್ಕೆ ಸುಲಭಗೊಳಿಸಿತು.

2019 ರ ಚುನಾವಣೆಯಿಂದ ಬದಲಾದ ಮಾದರಿ 

2019ರ ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಮತದಾನದ ಮಾದರಿಯು ಎಸ್‌ಪಿ ಮತ್ತು ಬಿಎಸ್‌ಪಿಯನ್ನು ಬೆಚ್ಚಿ ಬೀಳಿಸಿತ್ತು. ಲೋಕಸಭೆ ಚುನಾವಣೆಯಲ್ಲಿ ಈ ಸಮುದಾಯದ ಸಂಘಟಿತ ಮತಗಳು ಬಿಜೆಪಿಯ ಕಡೆ ವಾಳಿದ್ದವು, ಇದು ಮುಸ್ಲಿಂ ಸಮುದಾಯದ ಒಲವು ಬಿಜೆಪಿ ಅಥವಾ ಧ್ರುವೀಕರಣವನ್ನು ಸೂಚಿಸಿತ್ತು. ಆದರೆ, 2014ರ ಮೊದಲು ಯುಪಿಯಲ್ಲಿ ಬಿಜೆಪಿಗೆ ಅವರ ಬೆಂಬಲ ಸಿಗುತ್ತಿರಲಿಲ್ಲ. ಇದರಿಂದಾಗಿ ಎಸ್‌ಪಿ ಮತ್ತು ಬಿಎಸ್‌ಪಿ ಉತ್ತರ ಪ್ರದೇಶದ ಪ್ರಮುಖ ಪಕ್ಷಗಳಾಗಿ ಉಳಿದಿದ್ದವು.

ಬಿಜೆಪಿಗೆ ಲಾಭ

ಯುಪಿಯಲ್ಲಿ ಅಲ್ಪಸಂಖ್ಯಾತರ ಮತಗಳ ವಿಭಜನೆಯು ಬಿಜೆಪಿಗೆ ಸಹಾಯ ಮಾಡುತ್ತದೆ. ಅದರಲ್ಲೂ ಪಶ್ಚಿಮ ಮತ್ತು ಪೂರ್ವ ಯುಪಿಯಂತಹ ಪ್ರಬಲ ಹಿಂದೂ ಧ್ರುವೀಕರಣದ ಸಾಧ್ಯತೆಯಿರುವ ಕ್ಷೇತ್ರಗಳಲ್ಲಿ ಬಿಎಸ್‌ಪಿ ಮತ್ತು ಎಸ್‌ಪಿಗಳಿಗೆ ಮುಸ್ಲಿಂ ಸಮುದಾಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ಬಿಜೆಪಿಗೆ ಖಂಡಿತವಾಗಿಯೂ ಲಾಭವಾಗಲಿದೆ.

ಬಿಎಸ್‌ಪಿ ಕಣಕ್ಕಿಳಿಯದ ಕಾರಣ ಅಖಿಲೇಶ್‌ಗೆ ಲಾಭ

ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಆರಂಭಿಕ ಹಂತದಲ್ಲಿ ದೊಡ್ಡ ಸಾರ್ವಜನಿಕ ಸಭೆಗಳನ್ನು ನಡೆಸಿದ್ದರು, ಸಾಮಾಜಿಕ ಮಾಧ್ಯಮದ ಮೂಲಕ ಜನರೊಂದಿಗೆ ಬೆರೆತರು. ಈ ವೇಳೆ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಚುನಾವಣಾ ಪ್ರಚಾರಕ್ಕೆ ಗೈರು ಹಾಜರಾಗಿರುವುದು ಅಖಿಲೇಶ್‌ ಯಾದವ್‌ಗೆ ನೆರವಾಗಿದೆ. ಈ ಎರಡು ಪಕ್ಷಗಳ ನಡುವೆ ಅಖಿಲೇಶ್ ಗಂಭೀರ ಮತ್ತು ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.

Latest Videos
Follow Us:
Download App:
  • android
  • ios