ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿರುವಾಗಲೇ, ಇದಕ್ಕೆ ಯಾವುದೇ ರೀತಿಯ ವಿರೋಧ ವ್ಯಕ್ತಪಡಿಸದಿರುವ ಅಚ್ಚರಿಯ ತೀರ್ಮಾನವನ್ನು ಮುಸ್ಲಿಂ ನಾಯಕರು ಹಾಗೂ ಸಂಘಟನೆಗಳು ತೆಗೆದುಕೊಂಡಿವೆ.

ನವದೆಹಲಿ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿರುವಾಗಲೇ, ಇದಕ್ಕೆ ಯಾವುದೇ ರೀತಿಯ ವಿರೋಧ ವ್ಯಕ್ತಪಡಿಸದಿರುವ ಅಚ್ಚರಿಯ ತೀರ್ಮಾನವನ್ನು ಮುಸ್ಲಿಂ ನಾಯಕರು ಹಾಗೂ ಸಂಘಟನೆಗಳು ತೆಗೆದುಕೊಂಡಿವೆ. ಏಕರೂಪ ನಾಗರಿಕ (Uniform Civil Code)ಸಂಹಿತೆಯನ್ನು ಅತ್ಯುಗ್ರವಾಗಿ ವಿರೋಧ ಮಾಡಲು ಹೊರಟರೆ, ಮುಂಬರುವ ವಿಧಾನಸಭೆ ಹಾಗೂ 2024ರ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗಬಹುದು ಎಂಬ ಕಾರಣದಿಂದ ತಂತ್ರಗಾರಿಕೆಯ ಭಾಗವಾಗಿ ಈ ನಿರ್ಧಾರವನ್ನು ಕೈಗೊಂಡಿವೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ, ಕಾನೂನು ಆಯೋಗಕ್ಕೆ ಶೀಘ್ರದಲ್ಲೇ ಕರಡು ವರದಿಯೊಂದನ್ನು ಸಲ್ಲಿಕೆ ಮಾಡಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (All India Muslim Personal Law Council) ನಿರ್ಧಾರ ತೆಗೆದುಕೊಂಡಿದೆ.

ಬಿಜೆಪಿ ದೀರ್ಘಕಾಲದಿಂದ ನೀಡಿಕೊಂಡು ಬಂದಿರುವ ಮೂರು ಪ್ರಮುಖ ಭರವಸೆಗಳಲ್ಲಿ ಏಕರೂಪ ನಾಗರಿಕ ಸಂಹಿತೆಯೂ ಒಂದು. ಇನ್ನುಳಿದ ಎರಡು ಭರವಸೆಗಳಾದ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ಪರಿಚ್ಛೇದ ರದ್ದು ಹಾಗೂ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣ ಎರಡೂ ಈಡೇರಿವೆ. ಹೀಗಾಗಿ ಉಳಿದಿರುವ ಏಕೈಕ ಪ್ರಮುಖ ಭರವಸೆಯಾದ ಏಕರೂಪ ನಾಗರಿಕ ಸಂಹಿತೆಯನ್ನು ಇದೀಗ ಜಾರಿ ಮಾಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ.

ಏಕರೂಪದ ಸಂಹಿತೆ ಪ್ರಸ್ತಾಪಕ್ಕೆ ಪ್ರತಿಪಕ್ಷಗಳು ಕೆಂಡಾಮಂಡಲ: ಮುಸ್ಲಿಂ ಮಂಡಳಿ ಆಕ್ಷೇಪ

ವಿವಾಹ, ವಿಚ್ಛೇದನ, ಆಸ್ತಿ ಬಳುವಳಿ ಹಾಗೂ ದತ್ತು ಸೇರಿದಂತೆ ವೈಯಕ್ತಿಕ ವಿಚಾರಗಳಿಗೆ ಧರ್ಮದ ಆಧಾರದಲ್ಲಿ ನೀತಿ- ನಿಯಮಗಳಿವೆ. ಅದರ ಬದಲಿಗೆ ಸರ್ವಧರ್ಮೀಯರಿಗೂ ಒಂದೇ ರೀತಿಯ ಕಾನೂನು ಜಾರಿಗೆ ತರುವುದೇ ಏಕರೂಪ ನಾಗರಿಕ ಸಂಹಿತೆಯಾಗಿದೆ. ಮಂಗಳವಾರ ಈ ಕಾಯ್ದೆ ಪರ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಬಲವಾಗಿ ಮಾತನಾಡಿದ್ದರು.

2 ಕಾಯ್ದೆ ಇಟ್ಕೊಂಡು ದೇಶ ನಡೆಸಲು ಹೇಗೆ ಸಾಧ್ಯ? ಏಕರೂಪ ನಾಗರಿಕ ಸಂಹಿತೆ ಪರ ಪ್ರಧಾನಿ ಮೋದಿ ಬ್ಯಾಟಿಂಗ್‌