ಲಕ್ನೋ(ಮೇ.24): ಉತ್ತರ ಪ್ರದೇಶದ ಮುರಾದಾಬಾದ್‌ ಜಿಲ್ಲೆಯಲ್ಲಿ ಮಾಂಸದ ವ್ಯಾಪಾರಿ, ಮುಸ್ಲಿಂ ಯುವಕನನ್ನು ಸಮೂಹವೊಂದು ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಮೂಹದ ನೇತೃತ್ವ ವಹಿಸಿದ್ದ ವ್ಯಕ್ತಿ ತಾನೊಬ್ಬ ಗೋರಕ್ಷಕ ಎಂದು ಹೇಳುತ್ತಿದ್ದ. ಪೊಲೀಸರು ಸಂತ್ರಸ್ತ ಯುವಕನ ಸಹೋದರ ನೀಡಿದ್ದ ದೂರಿನಡಿ ಯುವಕನನ್ಉ ಥಳಿಸಿದ್ದವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಅತ್ತ ಆರೋಪಿಗಳೂ ಸಂತ್ರಸ್ತ ವ್ಯಕ್ತಿ ಮೊಹಮ್ಮದ್ ಶಾಕೀರ್ ವಿರುದ್ಧ ಪ್ರತಿ ದೂರು ದಾಖಲಿಸಿದ್ದಾರೆ. ಈ ಪ್ರತಿ ದೂರಿನಲ್ಲಿ ಗೋಹತ್ಯೆ, ಸೋಂಕು ಹರಡುವ ಯತ್ನ, ಲಾಕ್‌ಡೌನ್ ನಿಯಮ ಉಲ್ಲಂಘನೆ ಸಂಬಂಧ ಐಪಿಸಿ ಸೆಕ್ಷನ್‌ಗಳಡಿ ದೂರು ದಾಖಲಿಸಲಾಗಿದೆ.

ಮುಸ್ಲಿಂ ಮಹಿಳೆ ಸದ್ಗತಿಗೆ ಇಸ್ಲಾಮಿಕ್‌ ಪ್ರಾರ್ಥನೆ ಮಾಡಿದ ಹಿಂದೂ ವೈದ್ಯೆ!

ಈ ಕ್ಷೇತ್ರದ ಹಿರಿಯ ಪೊಲೀಸ್ ಅಧಿಕಾರಿ ಡಿಎಸ್ಪಿ ಶಾಕಿರ್‌ನನ್ನು ಬಂಧಿಸಲಾಗಿದೆ. ಆದರೆ ಇವೆಲ್ಲವೂ ಜಾಮೀನುಸಹಿತ ಪ್ರಕರಣಗಳಾಗಿರುವುದರಿಂದ ಅವರನ್ನು ಇನ್ನೂ ಜೈಲಿಗೆ ಹಾಕಿಲ್ಲ ಎಂದಿದ್ದಾರೆ. ಇನ್ನು ಎನ್‌ಡಿಟಿವಿಗೆ ಪ್ರತಿಕ್ರಿಯಿಸಿರುವ ಶಾಕೀರ್‌ ಮನೆಯವರು ಆತನಿಗೆ ಮನೆಯಲ್ಲೇ ಚಿಕಿತ್ಸೆ ಆರಂಭಿಸಿದ್ದೇವೆ ಎಂದಿದ್ದಾರೆ.

ನಿವೃತ್ತ ಬ್ರಾಹ್ಮಣ ಅಧ್ಯಾಪಕಿಯ ಅಸ್ಥಿ ವಿಸರ್ಜಿಸಿ ಸಾಮರಸ್ಯ ಸಾರಿದ ಮುಸ್ಲಿಂ ಎಂಪಿ

ಇನ್ನು ಈ ಮುಸ್ಲಿಂ ವ್ಯಕ್ತಿಯನ್ನು ಥಳಿಸಿದ್ದ ಸಮೂಹದ ನೇತೃತ್ವ ವಹಿಸಿದ್ದ ಮನೋಜ್‌ ಠಾಕೂರ್‌ರನ್ನೂ ಇನ್ನೂ ಬಂಧಿಸಿಲ್ಲ ಎಂಬ ವಿಚಾರ ತಿಳಿದು ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿತ್ತು. ಇದರಲ್ಲಿ ಐದಾರು ಮಂದಿಯ ಗುಂಪು ಮಾಂಸ ವ್ಯಾಪಾರಿಗೆ ಥಳಿಸುವ ದೃಶ್ಯಗಳಿದ್ದವು. ಹೀಗಾಗಿ ಆ ಗುಂಪಿನಲ್ಲಿದ್ದವರ ವಿರುದ್ಧ ದೂರು ದಾಕಲಿಸಲಾಗಿದೆ. ಸದ್ಯ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದ, ಶೀಘ್ರದಲ್ಲೇ ಅವರನ್ನು ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ
.