ನಿವೃತ್ತ ಬ್ರಾಹ್ಮಣ ಅಧ್ಯಾಪಕಿಯ ಅಸ್ಥಿ ವಿಸರ್ಜಿಸಿ ಸಾಮರಸ್ಯ ಸಾರಿದ ಮುಸ್ಲಿಂ ಎಂಪಿ
* ಬ್ರಾಹ್ಮಣ ಮಹಿಳೆಯ ಅಂತಿಮ ವಿಧಿವಿಧಾನ ನೆರವೇರಿಸಿದ ರಾಜ್ಯಸಭಾ ಸದಸ್ಯ
* ವಿಧಿ ವಿಧಾನ ನಡೆಸಲು ಯಾರು ಇಲ್ಲದ ಕಾರಣಕ್ಕೆ ಖುದ್ದು ನೆರವೇರಿಸಿದ ನಾಸೀರ್ ಹುಸೇನ್
* ಹಿಂದು ಸಂಪ್ರದಾಯದ ಪ್ರಕಾರ ಅಸ್ಥಿ ವಿಸರ್ಜನೆ ಪ್ರಕ್ರಿಯೆ ಪೂರ್ಣ ಮಾಡಿದ ರಾಜ್ಯಸಭಾ ಸದಸ್ಯ
* ದೆಹಲಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿಯ ಅಂತಿಮ ವಿಧಿ ವಿಧಾನ ನೆರವೇರಿಸಿದ ನಾಸೀರ ಹುಸೇನ್
ಮೈಸೂರು(ಮೇ 20) ಕೊರೊನಾದಿಂದ ಮೃತಪಟ್ಟ ಬ್ರಾಹ್ಮಣ ಮಹಿಳೆಯ ಅಂತಿಮ ವಿಧಿವಿಧಾನವನ್ನು ಮುಸ್ಲಿಂ ಎಂಪಿಯೊಬ್ಬರು ನೆರವೇರಿಸಿದ್ದಾರೆ. ವಿಧಿ ವಿಧಾನ ನಡೆಸಲು ಯಾರು ಇಲ್ಲದ ಕಾರಣಕ್ಕೆ ನಾಸೀರ್ ಹುಸೇನ್ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ.
ಹಿಂದು ಸಂಪ್ರದಾಯದ ಪ್ರಕಾರ ಅಸ್ಥಿ ವಿಸರ್ಜನೆ ಪ್ರಕ್ರಿಯೆ ಪೂರ್ಣಮಾಡಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿಯ ಅಂತಿಮ ವಿಧಿ ವಿಧಾನ ನೆರವೇರಿಸಿದ ನಾಸೀರ ಹುಸೇನ್ ಹೊಸ ಮಾರ್ಗವೊಂದನ್ನು ಹಾಕಿಕೊಟ್ಟಿದ್ದಾರೆ.
"
ಮೂಲತ: ತಮಿಳುನಾಡಿನ ಬ್ರಾಹ್ಮಣ ಸಮುದಾಯದರಾಗಿದ್ದ ಸಾವಿತ್ರಿ ವಿಶ್ವನಾಥನ್ ದೆಹಲಿ ವಿವಿಯ ಜಪಾನಿ ಅಧ್ಯಯನ ಪೀಠದ ಪ್ರಾಧ್ಯಾಪಕಿಯಾಗಿದ್ದರು ನಿವೃತ್ತಿಯ ಬಳಿಕ ತಂಗಿ ಮಹಾಲಕ್ಷ್ಮೀ ಅತ್ರಿಯಾ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಆದರೆ ಅಕ್ಕ - ತಂಗಿ ಇಬ್ಬರು ಕೋರೋನಾದಿಂದ ಇತ್ತೀಚೆಗೆ ಆಸ್ಪತ್ರೆ ಸೇರಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವಿತ್ರಿ ವಿಶ್ವನಾಥನ್ ಮೃತಪಟ್ಟಿದ್ದರು.
ಮಗ ತಿರುಗಿ ನೋಡಲಿಲ್ಲ; ತಹಶೀಲ್ದಾರ್ ಮತ್ತು ಮುಸ್ಲಿಂ ತಂಡದಿಂದ ಅಂತ್ಯಕ್ರಿಯೆ
ಆಸ್ಪತ್ರೆಯಲ್ಲಿದ್ದ ಕಾರಣಕ್ಕೆ ಅಂತಿಮ ಕಾರ್ಯ ನೇರವೇರಿಸಲು ತಂಗಿ ಮಹಾಲಕ್ಷ್ಮೀಗೆ ಸಾಧ್ಯವಾಗುತ್ತಿರಲಿಲ್ಲ ದೂರದ ಊರುಗಳಲ್ಲಿರುವ ಸಂಬಂಧಿಕರು ಸಹ ಬೆಂಗಳೂರಿಗೆ ಬರಲು ಕೊರೋನಾ ಪರಿಸ್ಥಿತಿಯಲ್ಲಿ ಅಸಾಧ್ಯ. ಇದೆಲ್ಲವನ್ನು ಮನಗಂಡ ರಾಜ್ಯಸಭಾ ಸದಸ್ಯ ಡಾ.ನಾಸೀರ್ ಹುಸೇನ್ ದಂಪತಿ ತಾವೇ ಮುಂದೆ ನಿಂತಿದ್ದಾರೆ.
ಮೇ 18 ರಂದು ಮೈಸೂರಿನಲ್ಲಿ ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಿದ್ದಾರೆ. ಅಂತಿಮ ಕಾರ್ಯ ಮಾಡಲೇಬೇಕಾದ ಕಾರಣಕ್ಕೆ ಧರ್ಮ ಸಹಿಷ್ಣುತೆಯ ಪರಿಕಲ್ಪನೆಯಲ್ಲಿ ಅಸ್ಥಿ ವಿಸರ್ಜನೆ ಮಾಡಿದ್ದೇನೆ..ಬ್ರಾಹ್ಮಣ ಸಂಪ್ರದಾಯದ ಪ್ರಕಾರ ವಿಧಿ ವಿಧಾನಗಳನ್ನು ಮಾಡಿದ ತೃಪ್ತಿ ನನಗಿದೆ. ಮಾನವೀಯತೆಯೇ ಇಲ್ಲಿ ಮುಖ್ಯವಾಗಿರುವುದು ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ವಕ್ತಾರ ಡಾ.ನಾಸೀರ್ ಹುಸೇನ್ ತಿಳಿಸಿದ್ದಾರೆ.