Asianet Suvarna News Asianet Suvarna News

ಮುಸ್ಲಿಂ ಪುರುಷ ಹಿಂದೂ ಮಹಿಳೆ ವಿವಾಹ ಮಾನ್ಯವಲ್ಲ, ಮನವಿ ತಿರಸ್ಕರಿಸಿದ ಹೈಕೋರ್ಟ್!

ಮುಸ್ಲಿಮ್ ಲಾ ಬೋರ್ಡ್ ಪ್ರಕಾರ ಮುಸ್ಲಿಮ್ ಪುರುಷ ಹಾಗೂ ಹಿಂದೂ ಮಹಿಳೆಯ ಮದುವೆ ಸಿಂಧುವಲ್ಲ. ಹೀಗಾಗಿ ಈ ಮದುವೆಯನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
 

Muslim Man Hindu Girl Marriage not valid Under Muslim law High Court Rejects inter religion couple plea ckm
Author
First Published May 30, 2024, 5:13 PM IST

ಭೋಪಾಲ್(ಮೇ.30) ಮುಸ್ಲಿಮ್ ಪುರುಷ ಹಾಗೂ ಹಿಂದೂ ಮಹಿಳೆ ವಿವಾಹವನ್ನು ಮುಸ್ಲಿಮ್ ಲಾ ಬೋರ್ಡ್ ಪ್ರಕಾರ ಮಾನ್ಯವಲ್ಲ. ಈ ಮದುವೆಯನ್ನು ಸಿಂಧುಗೊಳಿಸಲು ಸಾಧ್ಯವಿಲ್ಲ ಎಂದು ಮಧ್ಯ ಪ್ರದೇಶ ಹೈಕೋರ್ಟ್ ಹೇಳಿದೆ. ಅಂತರ್ಧರ್ಮ ವಿವಾಹ ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ಮಧ್ಯಪ್ರದೇಶ ಹೈಕೋರ್ಟ್ ತಿರಸ್ಕರಿಸಿದೆ. ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗಿದ್ದರೂ ಮುಸ್ಲಿಮ್ ಲಾ ಬೋರ್ಡ್ ಪ್ರಕಾರ ಈ ಮದುವೆಯನ್ನು ಸಿಂಧುಗೊಳಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

ಜಸ್ಟೀಸ್ ಗುರುಪಾಲ್ ಸಿಂಗ್ ಅಹ್ಲುವಾಲಿಯಾ ಈ ಕುರಿತು ಮಹತ್ವದ ತೀರ್ಪು ನೀಡಿದ್ದಾರೆ. ಮುಸ್ಲಿಮ್ ಪುರುಷ, ಹಿಂದೂ ಮಹಿಳೆ ನಡುವಿನ ವಿವಾಹಕ್ಕೆ ಮುಸ್ಲಿಮ್ ಕಾನೂನಿನಲ್ಲಿ ಮಾನ್ಯತೆ ಇಲ್ಲ. ಇದನ್ನು ಮಾನ್ಯವಾದ ವಿವಾಹ ಎಂದು ಪರಿಗಣಿಸಲು ಸಾಧ್ಯವಿಲ್ಲ. ಇದಕ್ಕೆ ಕೋರ್ಟ್ ಮುಸ್ಲಿಮ್ ಲಾ ಬೋರ್ಡ್ ನಿಯಮಗಳನ್ನು ಉಲ್ಲೇಖಿಸಿದೆ. 

'ಇಸ್ಲಾಂನಲ್ಲಿ ಜನ್ಮ ಜನ್ಮದ ಅನುಬಂಧವಿಲ್ಲ, ದಾಂಪತ್ಯದಲ್ಲಿ ವಿರಸ ಬಂದ್ರೆ ತಲಾಕ್‌ ಅಷ್ಟೇ'..

ಹಿಂದೂ ಮಹಿಳೆ ಮೂರ್ತಿ ಪೂಜಕರಾಗಿದ್ದಾರೆ. ಇಸ್ಲಾಂನಲ್ಲಿ ಮೂರ್ತಿ ಪೂಜೆಗೆ ಅವಕಾಶವಿಲ್ಲ. ಹಿಂದೂ ಭಕ್ತಿ ಹಾಗೂ ನಂಬಿಕೆ ಇಸ್ಲಾಂಗೆ ತದ್ವಿರುದ್ಧವಾಗಿದೆ. 1954ರ ವಿಶೇಷ ವಿವಾಹ ಕಾಯ್ದೆಯಡಿ ದಂಪತಿ ಮದುವೆಯಾಗಿದ್ದರೂ, ಈ ಮದುವೆಗೆ ಮುಸ್ಲಿಮ್ ಲಾ ಬೋರ್ಡ್‌ನಲ್ಲಿ ಯಾವ ಮಾನ್ಯತೆಯೂ ಇಲ್ಲ. ಈ ಮದುವೆ ಮೊಹಮ್ಮದೀಯನ್ ಕಾನೂನಿನಲ್ಲಿ ಫಾಸಿದ್ ಎಂದಿದೆ. 

ಪೋಷಕರ ತೀವ್ರ ವಿರೋಧದ ಬಳಿಕ ಹಿಂದೂ ಮಹಿಳೆ ಮುಸ್ಲಿಮ್ ಪುರುಷನ ಜೊತೆ ವಿವಾಹವಾಗಿದ್ದಾಳೆ. ಮನೆಯಲ್ಲಿದ್ದ ಚಿನ್ನಾಭರಣವನ್ನೆಲ್ಲಾ ತೆಗೆದುಕೊಂಡು ಹೋಗಿ ಮುಸ್ಲಿಮ್ ಪುರುಷನ ಜೊತೆ ವಿವಾಹವಾಗಿದ್ದಳು. ಸ್ಪೆಷಲ್ ಮ್ಯಾರೇಜ್ ಆ್ಯಕ್ಟ್ ಅಡಿಯಲ್ಲಿ ಮದುವೆ ನೋಂದಣಿ ಮಾಡಲಾಗಿತ್ತು. ಹಿಂದೂ ಮಹಿಳೆ ಇಸ್ಲಾಂಗೆ ಮತಾಂತರವಾದರೆ ಮಾತ್ರ ಮದುವೆ ಮಾನ್ಯವಾಗಲಿದೆ ಎಂಬ ಒತ್ತಡ ಎದುರಾಗಿತ್ತು.  ಹಿಂದೂ ಮಹಿಳೆಗೆ ಇಸ್ಲಾಂಗೆ ಮತಾಂತರವಾಗಲು ಇಷ್ಟವಿರಲಿಲ್ಲ. ಇತ್ತ ಮುಸ್ಲಿಮ್ ಪುರುಷನಿಗೆ ಹಿಂದೂ ಧರ್ಮಗೆ ಮತಾಂತರವಾಗಲೂ ಇಷ್ಟವಿರಲಿಲ್ಲ. ಹೀಗಾಗಿ ಪತಿ ಹಾಗೂ ಪತ್ನಿ ಇಬ್ಬರು ಕೋರ್ಟ್ ಮೆಟ್ಟಿಲೇರಿದ್ದರು.

ನಾವು ನಮ್ಮ ಕಾನೂನನ್ನೇ ಅನುಸರಿಸುತ್ತೇವೆ, ಆದರೆ ಏಕ​ರೂಪ ಸಂಹಿ​ತೆ ವಿರುದ್ಧ ಬೀದಿಗೆ ಇಳಿಯಲ್ಲ: ಜಮೀಯ​ತ್‌ ಮುಖ್ಯಸ್ಥ

ಹಿಂದೂ ಮುಸ್ಲಿಮ್ ವಿವಾಹವಾಗಿರುವ ಕಾರಣ ತಮ್ಮ ಮದುವೆಯನ್ನು ಮಾನ್ಯ ಮಾಡಬೇಕು, ಸತಿ ಪತಿ ಎಂದು ಮಾನ್ಯತೆ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಈದರೆ ಮುಸ್ಲಿಮ್ ಲಾ ಬೋರ್ಡ್‌ನಲ್ಲಿ ಈ ಮುಸ್ಲಿಮ್ ಹಾಗೂ ಹಿಂದೂ ಮದುವೆಗೆ ಮಾನ್ಯತೆ ಇಲ್ದ ಕಾರಣ ಈ ದಂಪತಿ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಇದೀಗ ಹಿಂದೂ ಮಹಿಳೆಗೆ ತನ್ನ ಮದುವೆ ಮಾನ್ಯ ಮಾಡಲು ಮತಾಂತರವಾಗದೇ ಅನ್ಯ ಮಾರ್ಗ ಕಾಣದ ಪರಿಸ್ಥಿತಿ ಎದುರಾಗಿದೆ.

Latest Videos
Follow Us:
Download App:
  • android
  • ios