ಯಮುನಾನಗರ(ನ.02): ‘ಲವ್‌ ಜಿಹಾದ್‌’ ವಿರುದ್ಧ ಉತ್ತರ ಪ್ರದೇಶ ಮಾದರಿಯಲ್ಲಿ ಕಾನೂನು ರೂಪಿಸಲು ಹಲವು ರಾಜ್ಯಗಳು ಚರ್ಚೆ ನಡೆಸುತ್ತಿರುವಾಗಲೇ, ಮುಸ್ಲಿಂ ಯುವಕನೊಬ್ಬ ಹಿಂದು ಯುವತಿಯನ್ನು ವಿವಾಹವಾಗಲು ಹಿಂದು ಧರ್ಮಕ್ಕೆ ಮತಾಂತರಗೊಂಡಿರುವ ಘಟನೆ ಹರಾರ‍ಯಣದ ಯಮುನಾನಗರ ಪೊಲೀಸ್‌ ಠಾಣಾ ವ್ಯಪ್ತಿಯಲ್ಲಿ ನಡೆದಿದೆ.

21 ವರ್ಷದ ಮುಸ್ಲಿಂ ಯುವಕನೊಬ್ಬ ತನ್ನ ಹೆಸರನ್ನು ಬದಲಾಯಿಸಿಕೊಂಡು ಹಿಂದು ಸಂಪ್ರದಾಯದ ಪ್ರಕಾರ 19 ವರ್ಷದ ಹಿಂದು ಯುವತಿಯನ್ನು ನ.9ರಂದು ವಿವಾಹವಾಗಿದ್ದಾನೆ ಎಂದು ಇಲ್ಲಿನ ಪೊಲೀಸ್‌ ವರಿಷ್ಠಾಧಿಕಾರಿ ಕಮಲ್‌ದೀಪ್‌ ಗೋಯಲ್‌ ತಿಳಿಸಿದ್ದಾರೆ.

ಹಿಂದು ಯುವತಿ ಮತಾಂತರ ಮಾಡಿ ಮದುವೆ ಮಾಡಿಕೊಂಡ ಜೋಡಿಗೆ ಪೊಲೀಸ್ ರಕ್ಷಣೆ

ವಿವಾಹದ ಬಳಿಕ ವಧುವಿನ ಕುಟುಂಬದ ಕಡೆಯಿಂದ ತಮಗೆ ಜೀವ ಬೆದರಿಕೆ ಇದೆ ಎಂದು ದಂಪತಿ ಪಂಜಾಬ್‌ ಮತ್ತು ಹರಾರ‍ಯಣ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್‌ ನಿರ್ದೇಶನದ ಅನುಸಾರ ಪೊಲೀಸರು ದಂಪತಿಗೆ ಭದ್ರತೆ ಒದಗಿಸಿದ್ದಾರೆ. ಅಲ್ಲದೆ ವಧುವಿನ ಕುಟುಂಬದವರ ಮನವೊಲಿಸುವ ಪ್ರಯತ್ನವನ್ನೂ ಮಾಡಿದ್ದಾರೆ.

ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಮಹಿಳೆಗೆ ಜೈನ ಧರ್ಮ ಸ್ವೀಕಾರ ಮಾಡಲು ಒತ್ತಡ

ಕಳೆದ ವಾರವಷ್ಟೇ ಹರಾರ‍ಯಣ ಗೃಹ ಸಚಿವ ಅನಿಲ್‌ ವಿಜ್‌ ಅವರು, ವಿವಾಹದ ಕಾರಣಕ್ಕಾಗಿಯೇ ಮತಾಂತರಗೊಳ್ಳುವ ‘ಲವ್‌ ಜಿಹಾದ್‌’ ವಿರುದ್ಧ ಕಾನೂನು ರೂಪಿಸುವ ಸಲುವಾಗಿ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದ್ದರು.