ಭಯೋತ್ಪಾದಕ ಕೃತ್ಯದಲ್ಲಿ ತೊಡಗಿದ ಕಾಶ್ಮೀರದ ಮುಸ್ಲಿಂ ಲೀಗ್ ಸಂಘಟನೆ ನಿಷೇಧಿಸಿದ ಕೇಂದ್ರ ಸರ್ಕಾರ!
ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ(ಮಸರತ್ ಅಲಂ ಬಣ) ಕಾನೂನು ಬಾಹಿರ ಸಂಘಟನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಭಯೋತ್ಪಾದನೆ ಚಟುವಟಿಕೆ, ಇಸ್ಲಾಮಿಕ್ ಆಳ್ವಿಕೆ ಸ್ಥಾಪನೆಗೆ ಪ್ರಚೋದನೆ ಸೇರಿದಂತೆ ಹಲವು ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ(ಮಸರತ್ ಅಲಂ ಬಣ)ವನ್ನು UAPA ಅಡಿಯಲ್ಲಿ ಕಾನೂನು ಬಾಹಿರ ಸಂಘಟನೆ ಎಂದು ಘೋಷಿಸಿದೆ.
ನವದೆಹಲಿ(ಡಿ.27) ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಸತತ ಉಗ್ರ ದಾಳಿ ನಡೆಯುತ್ತಿದೆ. ಪೂಂಚ್ ಸೆಕ್ಟರ್‌ನಲ್ಲಿ ಭಾರತೀಯ ಸೇನೆ ಮೇಲೆ ನಡೆದ ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಇದಕ್ಕೂ ಮೊದಲು ರಜೌರಿಯಲ್ಲಿ ಯೋಧರ ಮೇಲೆ ದಾಳಿ ನಡೆದಿತ್ತು. ಕಳೆದ 30 ದಿನದಲ್ಲಿ 2 ಭೀಕರ ದಾಳಿ ನಡೆದಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಮಹತ್ತರ ಬದಲಾವಣ ಮಾಡಿರುವ ಕೇಂದ್ರ ಸರ್ಕಾರ, ಉಗ್ರರ ಮೂಲವನ್ನೇ ಟಾರ್ಗೆಟ್ ಮಾಡಿ ಬೇರು ಸಹಿತ ಕಿತ್ತು ಹಾಕವ ಪ್ರಯತ್ನ ಮಾಡುತ್ತಿದೆ. ಇದೀಗ ಜಮ್ಮ ಮುತ್ತು ಕಾಶ್ಮೀರದಲ್ಲಿ ಭಯೋತ್ಪಾದನ ಚಟುವಟಿಕೆ ನಡೆಸುತ್ತಾ, ಮುಸ್ಲಿಂ ಆಳ್ವಿಕೆ, ಪ್ರತ್ಯೇಕತಾ ವಾದ, ರಾಷ್ಟ್ರ ವಿರೋಧಿ ಚಟುವಟಿಕೆ ನಡೆಸುತ್ತಿದ್ದ ಮುಸ್ಲಿಂ ಲೀಗ್ ಜಮ್ಮು ಮತ್ತು ಕಾಶ್ಮೀರ(ಮಸರತ್ ಅಲಂ ಬಣ)ವನ್ನು ಕೇಂದ್ರ ಸರ್ಕಾರ ಕಾನೂನು ಬಾಹಿರ ಸಂಘಟನೆ ಎಂದು ಘೋಷಿಸಿದೆ.
ಮುಸ್ಲಿಂ ಸಮುದಾಯದ ಅಭಿವೃದ್ಧಿ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳ ಹೆಸರಿನಲ್ಲಿ ನೋಂದಣಿಯಾಗಿರುವ ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ(MA) ಬಣ ಭಯೋತ್ಪಾದಕ ಚಟುವಟಿಕೆಯಲ್ಲಿ ಸಕ್ರಿಯವಾಗಿತ್ತು. ಈ ಸಂಘಟನೆ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಕೇಂದ್ರ ಸರ್ಕಾರ ಇದೀಗ ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ(MA) ಬಣ ನಿಷೇಧಿಸಿದೆ.
ಸ್ಮೋಕ್ ಬಾಂಬ್ ಹಿಂದಿನ ಮಾಸ್ಟರ್ ಮೈಂಡ್ ಯಾರು..? ಆರು ಆರೋಪಿಗಳ ವಿರುದ್ಧ UAPA ಕಾಯ್ದೆಯಡಿ ಕೇಸ್!
ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ ಬಣವನ್ನು ಮಸರತ್ ಅಲಂ ಮುನ್ನಡೆಸುತ್ತಿದ್ದ. ಈತ ಆಲ್ ಇಂಡಿಯನ್ ಹುರಿಯತ್ ಕಾನ್ಫರೆನ್ಸ್ ಹಂಗಾಮಿ ಮುಖ್ಯಸ್ಥನಾಗಿದ್ದಾನೆ. ಕಾಶ್ಮೀರ ಪ್ರತ್ಯೇಕತವಾದಿ ಸೈಯದ್ ಆಲಿ ಶಾ ಗಿಲಾನಿ ನೇತೃತ್ವದಲ್ಲಿ ಹುರಿಯತ್ ಕಾನ್ಫರೆನ್ಸ್ ಮುನ್ನಡೆಯುತ್ತಿತ್ತು. ಗಿಲಾನಿ 2021ರಲ್ಲಿ ಮೃತಪಟ್ಟಿದ್ದ. ಬಳಿಕ ಅಸರತ್ ಅಲಂನನ್ನು ಹಂಗಾಮಿ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು. ಇದೇ ಮಸರತ್ ಅಲಂ ನಾಯಕತ್ವದಲ್ಲಿ ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ ಹಲವು ಉಗ್ರ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
'ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ(ಮಸರತ್ ಅಲಂ ಬಣ)ವನ್ನು ಯುಎಪಿಎ ಅಡಿಯಲ್ಲಿ ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಲಾಗಿದೆ. ಈ ಸಂಘಟನೆ ಜಮ್ಮ ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿದೆ. ಉಗ್ರ ಚಟುವಟಿಕೆಗೆ ಬೆಂಬಲ, ಆರ್ಥಿಕ ನೆರವು, ಇಸ್ಲಾಂ ಆಳ್ವಿಕೆ ಸ್ಥಾಪಿಸಲು ಪ್ರಚೋದನೆ, ರಾಷ್ಟ್ರವಿರೋಧಿ ಕೃತ್ಯ, ಪ್ರತ್ಯೇಕತವಾದಿ ಚಟುವಟಿಕೆಯಲ್ಲಿ ಈ ಸಂಘಟನೆ ತೊಡಗಿಕೊಂಡಿತ್ತು. ನಮ್ಮ ರಾಷ್ಟ್ರತ ಏಕತೆ, ಸೌರ್ವಭೌಮತೆ ಹಾಗೂ ಸಮಗ್ರತೆ ವಿರುದ್ಧವಾಗಿರುವ ಯಾರನ್ನೂ ಬಿಡುವುದಿಲ್ಲ. ಇಂತವರಿಗೆ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಅನ್ನೋ ಸರ್ಕಾರದ ಸಂದೇಶ ಸ್ಪಷ್ಟವಾಗಿದೆ ಎಂದು ಅಮಿತ್ ಶಾ ಎಕ್ಸ್ ಖಾತೆ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ನಿಷೇಧ ಪ್ರಶ್ನಿಸಿ ಪಿಎಫ್‌ಐ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್