Namaz Controversy ತರಗತಿ ಒಳಗಡೆ ನಮಾಜ್ ಮಾಡಿ ವಿವಾದ ಸೃಷ್ಟಿಸಿದ ವಿದ್ಯಾರ್ಥಿನಿಯಿಂದ ಕ್ಷಮಾಪಣಾ ಪತ್ರ!

  • ಹಿಜಾಬ್ ತೀರ್ಪಿನ ಬಳಿಕ ತರಗತಿ ಒಳಗೆ ನಮಾಜ್ ವಿವಾದ
  • ಹರಿಸಿಂಗ್ ಗೌರ್ ವಿಶ್ವವಿದ್ಯಾಲಯದ ತರಗತಿಯೊಳಗೆ ನಮಾಜ್
  • ವೈರಲ್ ವಿಡಿಯೋ, ತನಿಖೆ ನಡೆಸಿದ ಕಾಲೇಜು ಆಡಳಿತ ಮಂಡಳಿ
Muslim girl apologise Who offered namaz in HGU classroom Bhopal probe committee submit report ckm

ಭೋಪಾಲ್(ಏ.03) ಹಿಜಾಬ್ ತೀರ್ಪಿನ ಬಳಿಕ ದೇಶದಲ್ಲಿ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ನಡೆದಿದೆ. ಇದರ ನಡುವೆ ಮಧ್ಯಪ್ರದೇಶದ ಡಾ.ಹರಿಸಿಂಗ್ ಗೌರ್ ಕೇಂದ್ರ ವಿಶ್ವವಿದ್ಯಾಲಯದ ತರಗತಿ ಒಳಗಿ ವಿದ್ಯಾರ್ಥಿನಿ ನಮಾಜ್ ಮಾಡಿ ಭಾರಿ ವಿವಾದ ಸೃಷ್ಟಿಸಿದ್ದಳು. ಇದೀಗ ನಮಾಜ್ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದ ವಿದ್ಯಾರ್ಥಿನಿ ಕ್ಷಮೇ ಕೇಳಿದ್ದಾಳೆ. ತನಗೆ ಕಾಲೇಜಿನ ನಿಯಮ ಅರಿವಿರಲಿಲ್ಲ ಎಂದು ಕ್ಷಮಾಪಣಾ ಪತ್ರದಲ್ಲಿ ಹೇಳಿದ್ದಾರೆ.

ಹರಿಸಿಂಗ್ ಗೌರ್ ಕೇಂದ್ರೀಯ ವಿಶ್ವವಿದ್ಯಾಲಯದ  ತರಗತಿ ಒಳಗೆ ವಿದ್ಯಾರ್ಥಿನಿ ನಮಾಜ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು. ಕರ್ನಾಟಕ ಹೈಕೋರ್ಟ್ ನೀಡಿದ ಹಿಜಾಬ್ ತೀರ್ಪು ವಿರುದ್ಧ ಇಡೀ ದೇಶದಲ್ಲೇ ಪ್ರತಿಭಟನೆ, ಅಸಮಾಧಾನ ವ್ಯಕ್ತವಾಗಿತ್ತು. ಇದರ ನಡುವೆ ತರಗತಿಯೊಳಗೆಡೆ ನಮಾಜ್ ಮಾಡಿದ ವಿಡಿಯೋ ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿತ್ತು. ಪರಿಣಾಮ ಕಾಲೇಜು ಆಡಳಿತ ಮಂಡಳಿ ಮಾರ್ಚ್ 25 ರಂದು 6 ಸದಸ್ಯರ ತನಿಖಾ ತಂಡವನ್ನು ರಚಿಸಿ ತನಿಖೆ ನಡೆಸಿತ್ತು.

ಕಡಬ ಸರಕಾರಿ ಶಾಲೆಯ ತರಗತಿಯಲ್ಲಿ ನಮಾಜ್ , ಶಿಕ್ಷಣಾಧಿಕಾರಿ ಭೇಟಿ ಬಳಿಕ ಸೌಹಾರ್ದಯುತವಾಗಿ ಬಗೆ ಹರಿದ ಸಮಸ್ಯೆ

ಇದೀಗ ತನಿಖಾ ತಂಡ ವರದಿ ನೀಡಿದೆ. ವಿದ್ಯಾರ್ಥಿನಿಗೆ ಕಾಲೇಜು ಕ್ಯಾಂಪಸ್ ಒಳಗಡೆ ನಮಾಜ್ ಮಾಡಬಾರದು ಅನ್ನೋದು ಗೊತ್ತಿರಲಿಲ್ಲ. ಕಾಲೇಜಿನಲ್ಲಿ ಕಲಿಕೆ ಜೊತೆಗೆ ನಮಾಜ್‌ಗೂ  ಅವಕಾಶವಿದೆ ಎಂದು ಭಾವಿಸಿದ್ದಳು. ಈ ಕುರಿತು ವಿದ್ಯಾರ್ಥಿನಿ ಕ್ಷಮೆ ಕೇಳಿದ್ದಾಳೆ ಎಂದು ತನಿಖಾ ತಂಡ ವರದಿಯಲ್ಲಿ ಉಲ್ಲೇಖಿಸಿದೆ.

ಮಾರ್ಚ್ 25 ರಂದು ಕಾಲೇಜು ಆಡಳಿ ಮಂಡಳಿ ಎಲ್ಲಾ ವಿದ್ಯಾರ್ಥಿಗಳು, ಸಿಬ್ಬಂದಿಗಳಿಗೆ ಸೂಚನೆ ನೀಡಿತ್ತು. ಕಾಲೇಜು ಕ್ಯಾಂಪಸ್ ಒಳಗೆ ಯಾವುದೇ ಧರ್ಮದ ಪಾರ್ಥನೆಗೆ ಅವಕಾಶವಿಲ್ಲ. ಪ್ರಾರ್ಥನೆ, ನಮಾಜ್ ಎಲ್ಲವೂ ಆಯಾ ಸ್ಥಳಗಳಲ್ಲಿ, ಮನೆಗಳಲ್ಲಿ ಮಾಡಬೇಕು. ನಿಯಮ ಉಲ್ಲಂಘಿಸಿದರೆ ಕಠಿಣ ಶಿಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಸೂಚಿಸಿತ್ತು.ಮಾರ್ಚ್ 25 ರಂದು ವೈರಲ್ ಆದ ವಿಡಿಯೋದಲ್ಲಿ ತರಗತಿ ಒಳಗಡೆ ಹಿಜಾಬ್ ಹಾಕಿಕೊಂಡು ನಮಾಜ್ ಮಾಡಲಾಗಿತ್ತು. 

Namaz In School: ಹಿಜಾಬ್ ವಿವಾದದ ನಡುವೆ  ಮಂಗಳೂರಿನ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ನಮಾಜ್

ಡಾ.ಹರೀಸಿಂಗ್ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿನ ಈ ಘಟನೆ ದೇಶಾದ್ಯಂತ ಭಾರಿ ಸದ್ದು ಮಾಡಿತ್ತು. ಇದರೊಂದಿಗೆ ಕರ್ನಾಟಕ ಹಲವು ಶಾಲಾ ಕಾಲೇಜುಗಳಲ್ಲೂ ಈ ರೀತಿಯ ಘಟನೆ ನಡೆದಿತ್ತು. 

ಶಾಲೆಯಲ್ಲಿ ನಮಾಜ್‌: ಮುಖ್ಯಶಿಕ್ಷಕಿ ಅಮಾನತು
ಶಿವಮೊಗ್ಗ ನಗರದ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ನಮಾಜ್‌ ಮಾಡಿದ ವಿಡಿಯೋ ವೈರಲ್‌ ಆಗಿದ್ದು, ಇದರ ಬೆನ್ನಲ್ಲೇ ಶಾಲಾ ಆಡಳಿತ ಮಂಡಳಿ ಮುಖ್ಯಶಿಕ್ಷಕಿ ಜಬೀನಾ ಪರ್ವಿನ್‌ರನ್ನು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದೆ. ಗೋಪಾಲಗೌಡ ಬಡಾವಣೆಯ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯಲ್ಲಿ ನಿತ್ಯ ನಮಾಜ್‌ಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂಬುದು ಸುತ್ತಮುತ್ತಲಿನ ನಿವಾಸಿಗಳ ಮಾತು. ಇದಕ್ಕಾಗಿ ಪ್ರತ್ಯೇಕ ಕೋಣೆಯೊಂದನ್ನು ಮೀಸಲಿಟ್ಟಿದ್ದರು ಎನ್ನಲಾಗಿದೆ. ಬಿಇಒ ನಾಗರಾಜ್‌ ಸ್ಥಳಕ್ಕೆ ಭೇಟಿ ನೀಡಿ ಎಚ್ಚರಿಕೆ ನೀಡಿದ್ದಾರೆ.

ಶಾಲೆಯಲ್ಲಿ ನಮಾಝ್‌ ಘಟನೆ ಮತ್ತೆ ಮರುಕುಳಿಸುವುದಿಲ್ಲ: ಶಿಕ್ಷಣಾಧಿಕಾರಿ
ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಅಂಕತ್ತಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲವು ಮುಸ್ಲಿಂ ವಿದ್ಯಾರ್ಥಿಗಳು ಕೊಠಡಿಯೊಂದರಲ್ಲಿ ನಮಾಝ್‌ ಮಾಡಿರುವ ಘಟನೆ ಮುಂದಿನ ದಿನಗಳಲ್ಲಿ ಮರುಕಳಿಸುವುದಿಲ್ಲ. ಸರ್ಕಾರಿ ಶಾಲೆಯಲ್ಲಿರುವ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಶಾಲೆಗಳು ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತಮಾಡಿಕೊಳ್ಳುವ ಶಾಲಾಭಿವೃದ್ಧಿಯ ನಿರ್ಣಯಕ್ಕೆ ಎಲ್ಲ ಪೋಷಕರು ಬದ್ಧರಾಗಿದ್ದಾರೆ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಲೋಕೇಶ್‌ ತಿಳಿಸಿದರು.

Latest Videos
Follow Us:
Download App:
  • android
  • ios