ಗಾಜಿಯಾಬಾದ್‌ನಲ್ಲಿ ಜ್ಯೂಸ್‌ನಲ್ಲಿ ಉಗುಳುವ ಮೂಲಕ ಆಹಾರವನ್ನು ಅಪವಿತ್ರಗೊಳಿಸುವ ಘಟನೆ ಬೆಳಕಿಗೆ ಬಂದಿದೆ. ಶಾಸಕ ನಂದಕಿಶೋರ್ ಗುರ್ಜರ್ ಈ ಘಟನೆಯನ್ನು 'ಉಗುಳು ಜಿಹಾದ್' ಎಂದು ಕರೆದಿದ್ದು, ಕಠಿಣ ಕಾನೂನು ಜಾರಿಗೆ ಒತ್ತಾಯಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಉತ್ತರ ಪ್ರದೇಶದ ಗಾಜಿಯಾಬಾದ್‌ನ ಲೋನಿಯ ಶಾಸಕ ನಂದಕಿಶೋರ್ ಗುರ್ಜರ್ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಈ ಬಾರಿ ನಂದಕಿಶೋರ್ ಗುರ್ಜರ್ ಆಹಾರ ಪದಾರ್ಥಗಳನ್ನು ಅಪವಿತ್ರಗೊಳಿಸುವ ಹೆಸರಿನಲ್ಲಿ ಉಗುಳು ಜಿಹಾದ್(Spit Jihad) ವಿಷಯವನ್ನು ಎತ್ತಿದ್ದಾರೆ. ಅವರು ವಿಧಾನಸಭಾ ಸ್ಪೀಕರ್‌ಗೆ ಪತ್ರ ಬರೆದು ರಾಜ್ಯದಲ್ಲಿ ನಡೆಯುತ್ತಿರುವ ಜಿಹಾದ್ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಈ ಕೃತ್ಯಗಳನ್ನು ತಡೆಯಲು ಕಠಿಣ ಕಾನೂನು ಜಾರಿಗೊಳಿಸಬೇಕೆಂದು ಅವರು ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ.

ಜ್ಯೂಸ್‌ನಲ್ಲಿ ಉಗುಳಿದ ಕೃತ್ಯ ಬೆಳಕಿಗೆ:

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಜ್ಯೂಸ್‌ನಲ್ಲಿ ಉಗುಳು ಬೆರೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಕೆಲವು ಉಪವಾಸ ನಿರತರು ಗೌಡ್ ಸಿದ್ಧಾರ್ಥಂನಲ್ಲಿರುವ ಜ್ಯೂಸ್ ಅಂಗಡಿಯಿಂದ ಜ್ಯೂಸ್ ಖರೀದಿಸಿದ್ದಾರೆ ಎಂದು ಹೇಳಲಾಗಿದೆ. ಜ್ಯೂಸ್ ಕುಡಿದ ನಂತರ ಅವರು ಅದರ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಅದರಲ್ಲೇ ರುಚಿ ವ್ಯತ್ಯಾಸವಿರುವುದನ್ನ ಗಮನಿಸಿದ್ದಾರೆ.ಅನುಮಾನಗೊಂಡು ಪ್ರಶ್ನಿಸಿದಾಗ ಅಂಗಡಿಯವನು ಉದ್ದೇಶಪೂರ್ವಕವಾಗಿ ಜ್ಯೂಸ್‌ನಲ್ಲಿ ಉಗುಳು ಬೆರೆಸಿದ್ದಾನೆ ಎಂದು ಉಪವಾಸ ನಿರತರು ಆರೋಪಿಸಿದ್ದಾರೆ.

ಶ್ರಾವಣ ತಿಂಗಳ ಕಾನ್ವಾರ್ ಯಾತ್ರೆಯ ಸಂದರ್ಭದಲ್ಲಿ ಇಂತಹ ಘಟನೆಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತವೆ ಎಂದು ಅವರು ಎಚ್ಚರಿಸಿದ್ದಾರೆ. ಸರ್ವಪಕ್ಷ ಸಭೆ ಕರೆಯುವಂತೆಯೂ ಒತ್ತಾಯಿಸಿದ್ದಾರೆ. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.