Asianet Suvarna News Asianet Suvarna News

ಮುಸ್ಲಿಮ್ ಕುಟುಂಬದಿಂದ ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರ, ಮಾದರಿ ನಡೆಗೆ ಎಲ್ಲೆಡೆಯಿಂದ ಮೆಚ್ಚುಗೆ!

  • ರಾಮ ನಾಮ ಸತ್ಯ ಹೇ ಹೇಳಿ ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರ
  • ಮುಸ್ಲಿಮ್ ಕುಟಂಬ ಸದಸ್ಯರಿಂದ ಹಿಂದೂ ನಾಮ ಹೇಳಿ ಅಂತ್ಯಸಂಸ್ಕಾರ
  • ಹಿಂದೂ ವಿಧಿ ವಿಧಾನಗಳನ್ನು ನೆರವೇರಿಸಿದ ಮುಸ್ಲಿಮ್ ಕುಟುಂಬ
Muslim family performed last rites of Hindu elder with full religious rituals in Patna ckm
Author
Bengaluru, First Published Jul 3, 2022, 9:14 PM IST

ಪಾಟ್ನಾ(ಜು.03): ದೇಶದಲ್ಲಿ ಹಿಂದೂ ಮುಸ್ಲಿಮ್ ನಡುವೆ ಅತೀ ದೊಡ್ಡ ಸಂಘರ್ಷವೇ ನಡೆಯುತ್ತಿದೆ. ಇದರ ನಡುವೆ ಬಿಹಾರದ ಪಾಟ್ನಾದಲ್ಲಿನ ಮುಸ್ಲಿಮ್ ಕುಟುಂಬ ಮಾದರಿಯಾಗಿದೆ. 75 ವರ್ಷದ ರಾಮದೇವ್ ಅನ್ನೂ ಹಿಂದೂ ವ್ಯಕ್ತಿ ಮೃತಪಟ್ಟಿದ್ದರು. ರಾಮದೇವ್ ಅಂತ್ಯಸಂಸ್ಕಾರವನ್ನು ಮುಸ್ಲಿಮ್ ಕುಟುಂಬ ನೆರವೇರಿಸಿದೆ. ವಿಶೇಷವಾಗಿ ರಾಮ ನಾಮ ಸತ್ಯಹೇ ಹೇಳಿ, ಆರತಿ ಎತ್ತಿ ಸಂಸ್ಕಾರ ನಡೆಸಿ ಏಕತೆ ಮೆರೆದಿದೆ.

ಕಳೆದ 25 ವರ್ಷಗಳಿಂದ ಮುಸ್ಲಿಮ್ ಕುಟುಂಬದ ಜೊತೆ ಜೀವನ ನಡೆಸಿದ್ದ ರಾಮದೇವ್ ವಯೋಸಹಯ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಹಿಂದೂ ವ್ಯಕ್ತಿಯ ಕುಟುಂಬಸ್ಥರು ಯಾರು ಇಲ್ಲದ ಕಾರಣ ಮುಸ್ಲಮ್ ಕುಟುಂಬ ಹಿಂದೂ ವಿಧಿವಿಧಾನದ ರೀತಿಯಲ್ಲಿ ಅಂತ್ಯಸಂಸ್ಕಾರ ನಡೆಸಿದೆ.

 

ಚಿಕ್ಕಮಗಳೂರು: ದತ್ತಪೀಠ ಪೂಜೆಗೆ ಎರಡೂ ಸಮುದಾಯಕ್ಕೆ ಅವಕಾಶ

ಪಾಟ್ನಾ ಮುಸ್ಲಿಮ್ ಕುಟುಂಬ ಹಿಂದೂ ವ್ಯಕ್ತಿಯ ಮೃತದೇಹವನ್ನು ಗಂಗಾ ಘಾಟ್‌ಗೆ ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ರಾಮ್ ನಾಮ್ ಸತ್ಯೆ ಹೇ ಎಂದು ಹೇಳುತ್ತಾ ಸಾಗಿದ್ದಾರೆ. ಗಂಗಾ ಘಾಟ್‌ನಲ್ಲಿ ಆರತಿ ಎತ್ತಿ, ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ.

25 ವರ್ಷಗಳ ಹಿಂದೆ ಪಾಟ್ನಾದ ಮೊಹಮ್ಮದ್ ಅರ್ಮಾನ್ ಮುಸ್ಲಿಮ್ ಕುಟುಂಬ ಹಸಿವಿನಿಂದ ರಸ್ತೆ ಬದಿಯಲ್ಲಿ ಕುಳಿತಿದ್ದ ರಾಮ್‌ದೇವ್ ಗಮನಿಸಿ ಆತನಿಗೆ ಊಟ ನೀಡಿದ್ದರು. ಬಳಿಕ ಅರ್ಮಾನ್ ಕುಟುಂಬದ ವ್ಯಾಪಾರದಲ್ಲಿ ಕೆಲಸ ಕೊಡಿಸಿದ್ದರು. ಜೊತೆಗೆ ಕುುಟುಂಬ ಸದಸ್ಯರಂತೆ ನೋಡಿಕೊಂಡಿದ್ದಾರೆ. 

ಸ್ವರ್ಣವಲ್ಲಿ ರಥ ಕಟ್ಟುವ ಮುಸ್ಲಿಂ ಕುಟುಂಬ
ಹಿಂದು-ಮುಸ್ಲಿಂ ಸೌಹಾರ್ದಕ್ಕೆ ಸ್ವರ್ಣವಲ್ಲಿ ಸಂಸ್ಥಾನ ಮಾದರಿಯಾಗಿದೆ. ಸೇವೆ, ಸಹಕಾರ, ಭಾತೃತ್ವ ಮುಸ್ಲಿಮರೊಂದಿಗೆ ಸ್ವರ್ಣವಲ್ಲಿ ಸಂಸ್ಥಾನವು ಅನಾದಿಕಾಲದಿಂದ ಬೆಸೆದುಕೊಂಡಿದೆ.ಸ್ವರ್ಣವಲ್ಲಿ ಸಂಸ್ಥಾನ ಮಠದ ರಥ ಕಟ್ಟುವ ಕಾರ್ಯವನ್ನು ಅನಾದಿ ಕಾಲದಿಂದಲೂ ಮುಸ್ಲಿಮರೇ ನಿರ್ವಹಿಸಿಕೊಂಡು ಬಂದಿದ್ದಾರೆ. ಸೋಂದಾದ ಅಬ್ದುಲ್‌ ರೆಹಮಾನ್‌ ಕುಟುಂಬ ಈ ಕಾರ್ಯವನ್ನು ನಡೆಸಿಕೊಂಡು ಬಂದಿದೆ.

ರಥೋತ್ಸವದ ದಿನಾಂಕದ ಮಾಹಿತಿಯನ್ನು ಸ್ವರ್ಣವಲ್ಲಿ ಸಂಸ್ಥಾನದಿಂದ ಪಡೆದುಕೊಳ್ಳುವ ಈ ಕುಟುಂಬ ರಥ ಕಟ್ಟಲು ದಿನಾಂಕವನ್ನು ನಿಗದಿಪಡಿಸಿಕೊಳ್ಳುತ್ತದೆ. ಕುಟುಂಬದ ಸದಸ್ಯರಾದ ರವೂಫಸಾಬ, ಕಬೀರಸಾಬ, ನಜೀರ ಅಹಮ್ಮದ್‌ ಮಠಕ್ಕೆ ಆಗಮಿಸಿ ರಥವನ್ನು ಗೂಡಿನಿಂದ ಹೊರ ತೆಗೆಯುತ್ತಾರೆ.

ರುಂಡ ಕತ್ತರಿಸುವ ಮದರಸಾ ಶಿಕ್ಷಣಕ್ಕಿಂತ ಮುಸ್ಲಿಮ್ ಮಕ್ಕಳಿಗೆ ಆಧುನಿಕ ಶಿಕ್ಷಣ ಬೇಕು, ಆರೀಫ್ ಖಾನ್!

ರಥಕ್ಕೆ ಮರದ ಪಟ್ಟಿಗಳನ್ನು ಅಳವಡಿಸಿ, ಹಗ್ಗದಿಂದ ಬಿಗಿಯುವ ಕಾರ್ಯವನ್ನು ಮುಸ್ಲಿಂ ಯುವಕರೇ ಮಾಡುತ್ತಾರೆ. ಬಳಿಕ ಅಡಕೆ ಮರದ ದಬ್ಬೆಗಳನ್ನು ಕಟ್ಟುವಿಕೆ, ರಥದ ಪತಾಕೆ ಹಾರಿಸುವಿಕೆಯನ್ನು ಇವರೇ ನಿರ್ವಹಿಸುತ್ತಾರೆ. ರಥೋತ್ಸವದಲ್ಲಿ ಈ ಕುಟುಂಬದ ಸದಸ್ಯರೆಲ್ಲ ಪಾಲ್ಗೊಳ್ಳುತ್ತಾರೆ.

ಈ ಕುಟುಂಬದ ಜವಾಬ್ದಾರಿ ಇಷ್ಟಕ್ಕೇ ಸೀಮಿತವಲ್ಲ. ರಥೋತ್ಸವ ಮುಗಿದ ಬಳಿಕ ಮತ್ತೆ ಆಗಮಿಸಿ ಎಲ್ಲ ಕಳಚಿ ರಥದ ಗೂಡಿನೊಳಗೆ ಮತ್ತೆ ವ್ಯವಸ್ಥಿತವಾಗಿ ಜೋಡಿಸಿಡುತ್ತಾರೆ. ರಥೋತ್ಸವದ ವೇಳೆ ಸ್ವರ್ಣವಲ್ಲೀ ಸಂಸ್ಥಾನದಿಂದ ಈ ಮುಸ್ಲಿಂ ಕುಟುಂಬಗಳಿಗೆ ಗೌರವ ಸಲ್ಲಿಸಲಾಗುತ್ತದೆ. ಸ್ವರ್ಣವಲ್ಲೀಯ ರಥೋತ್ಸವ ಸಮಾಜಕ್ಕೆ ಮಾದರಿಯಾಗಿದೆ.

Latest Videos
Follow Us:
Download App:
  • android
  • ios