ಉರಿ(ಮೇ.02): ಉತ್ತರ ಕಾಶ್ಮೀರದ ಉರಿ ಸೆಕ್ಟರ್ ಸೇನಾ ಕಾರ್ಯಕ್ಷೇತ್ರ ಕೂಡ ಆಗಿದೆ. ಉರಿ ಸೆಕ್ಟರ್ ವಲಯದ ಲಗಮಾ, ಬಂಡಿ, ದ್ಯಾರಿ ಗ್ರಾಮದಲ್ಲಿ ಹೆಚ್ಚು ಕಾಶ್ಮೀರಿ ಪಂಡಿತರು ವಾಸಿಸುತ್ತಿದ್ದಾರೆ. ಇಷ್ಟೇ ಅಲ್ಲ ಅಷ್ಟೇ ಸಂಖ್ಯೆಯಲ್ಲಿ ಮುಸ್ಲೀಮರು ಇದ್ದಾರೆ. ಲಗಾಮ ಗ್ರಾಮದ ಶೇಖರ್ ಕುಮಾರ್( 54 ವರ್ಷ) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಲಾಕ್‌ಡೌನ್ ಕಾರಣ ಶೇಕರ್ ಕುಮಾರ್ ಸಂಬಂಧಿಕರು ಆಗಮಸಿಲು  ಸಾಧ್ಯವಾಗಲಿಲ್ಲ. 

ವಾಹನವಿಲ್ಲ, ಕುಟುಂಬಸ್ಥರು ಬರುತ್ತಿಲ್ಲ: ಹಿಂದೂ ಮಹಿಳೆಯ ಶವ ಹೊತ್ತೊಯ್ದ ಮುಸ್ಲಿಂ ಯುವಕರು!.

ಇಷ್ಟೇ ಅಲ್ಲ ಶೇಖರ್ ಪುತ್ರನಿಗೆ ತಂದೆಯ ಅಂತಿಮ ವಿಧಿವಿಧಾನಗಳನ್ನು ಮಾಡಲು ಹಾಗೂ ಶವ ಸಂಸ್ಕಾರಕ್ಕೆ ರುದ್ರಭೂಮಿಗೆ ಕೊಂಡಯ್ಯಲು ಯಾವುದೇ ವಾಹನ ಸೌಲಭ್ಯ ಕೂಡ ಇಲ್ಲ. ಹೀಗಾಗಿ ನೆರೆಯ ಮುಸ್ಲೀಂ ಕುಟುಂಬಕ್ಕೆ ನೆರವು ನೀಡಲು ಮನವಿ ಮಾಡಿದ್ದಾರೆ. ತಕ್ಷಣವೇ ಮುಸ್ಲೀಂ ಸಮುದಾಯದ ಹಲವರು ಶೇಖರ್ ಮನೆಗೆ ಆಗಮಿಸಿದ್ದಾರೆ. ಶೇಖರ್ ಶವವನ್ನು ಹೊತ್ತುಕೊಂಡು ರುದ್ರಭೂಮಿಗೆ ತೆರಳಿದ್ದಾರೆ. ಇಷ್ಟೇ ಅಲ್ಲ ಹಿಂದೂ ವಿಧಿವಿಧಾನಗಳನ್ನು ಮಾಡಲು ಬೇಕಾದ ಎಲ್ಲಾ ವ್ಯವಸ್ಥೆ ಮಾಡಿದ್ದಾರೆ.

ಕೆಲವರ ತಪ್ಪಿಗೆ ಸಮುದಾಯ ದೂಷಣೆ ತಪ್ಪು: ಭಾಗವತ್‌

ಶೇಕರ್ ಪುತ್ರ ಅನಾರೋಗ್ಯದ ಕಾರಣ ಮುಸ್ಲೀಂ ಸಮುದಾಯದ ಹಿರಿಯ ಅಬ್ದುಲ್ ಬಜೀದ್ ಬಂಡೆ ಅಂತಿಮ ವಿಧಿವಿಧಾನ ನೆರವೇರಿಸಿದ್ದಾರೆ. ನೆರೆಯ ಮುಸ್ಲೀಂ ಸಹೋದರರಿಂದ ತಂದೆಯ ಶವಸಂಸ್ಕಾರ ಮಾಡಲು ಸಾಧ್ಯವಾಗಿದೆ. ಮುಸ್ಲೀಂ ಸಹೋದದರ ಸಹಾಯವಿಲ್ಲದೆ ನನಗೆ ಏನೂ ಸಾಧ್ಯವಾಗುತ್ತಿರಲಿಲ್ಲ. ನಮ್ಮ ಕಷ್ಟದ ಸಮಯದಲ್ಲಿ ಹಲವು ಬಾರಿ ಮುಸ್ಲೀಂ ಸಮುದಾಯ ಸಹಾಯ ಮಾಡಿದೆ ಎಂದು ಶೇಖರ್ ಪುತ್ರ ಹೇಳಿದ್ದಾರೆ.

ಉರಿ ವಲಯದಲ್ಲಿರುವ ಮಾನವೀಯತೆಗೆ ಈ ಘಟನೆ ಸಾಕ್ಷಿ. ಇಂತಹ ಅನೇಕ ಘಟನೆಗಳು ಇಲ್ಲಿನ ಐಕ್ಯತೆಯನ್ನು ಸಾರಿ ಹೇಳುತ್ತದೆ. ಇಲ್ಲಿ ಹಿಂದೂ-ಮುಸ್ಲೀಮರು ಶಾಂತಿಯಿಂದ ಪ್ರೀತಿಯಿಂದ ಬದುಕುತ್ತಿದ್ದಾರೆ ಎಂದು ಉರಿ ಮುನ್ಸಿಪಲ್ ಕಮಿಟಿ ಚೇರ್ಮೆನ್ ಭರತ್ ಕುಮಾರ್ ಶರ್ಮಾ ಹೇಳಿದ್ದಾರೆ. 

ಉರಿ ವಲಯದ ಲಗಮಾ ಗ್ರಾಮದಲ್ಲಿ 300 ಕಾಶ್ಮೀರಿ ಪಂಡಿತರ ಕುಟುಂಬ ವಾಸವಿದೆ. 90ರ ದಶಕದಲ್ಲಿ ಕಾಶ್ಮೀರ ಪಂಡಿತರ ಮೇಲೆ ದಾಳಿ ನಡೆದಿತ್ತು. ಸಿಕ್ಕ ಸಿಕ್ಕಲ್ಲಿ ಕಾಶ್ಮೀರಿ ಪಂಡಿತರನ್ನು ಹತ್ಯೆ ಮಾಡಲಾಗಿತ್ತು. ಲಗಮಾ ಗ್ರಾಮದಿಂದ ಹಲವು ಕಾಶ್ಮೀರಿ ಪಂಡಿತರನ್ನು ಕೊಲ್ಲಲಾಯಿತು. ಹಲವರು ಭಯದಿಂದ ರಾತ್ರೋರಾತ್ರಿ ಬೇರೆ ಬೇರೆ ರಾಜ್ಯಗಳಿದೆ ನಿರಾಶ್ರಿತರಾಗಿ ತೆರಳಿದ್ದರು. ಆದರೆ 300 ಕಾಶ್ಮೀರಿ ಕುಟುಂಬ ಮಾತ್ರ ಇಲ್ಲಿಂದ ತೆರಳದೇ ಇಲ್ಲೇ ಉಳಿದುಕೊಂಡಿದ್ದಾರೆ. 

ಉರಿಯಲ್ಲಿನ ಲಗಮಾ ಗ್ರಾಮದಲ್ಲೇ ಹೆಚ್ಚು ಕಾಶ್ಮೀರ ಪಂಡಿತರು ವಾಸವಿದ್ದಾರೆ. ಇನ್ನು ಬಂಡಿ ಹಾಗೂ ದ್ಯಾರಿ ಗ್ರಾಮಗಳಲ್ಲೂ ಕಾಶ್ಮೀರ ಪಂಡೀತರು ವಾಸಿಸುತ್ತಿದ್ದಾರೆ. ಈ ಮೂರು ಗ್ರಾಮಗಳಲ್ಲಿ ಈಗ 6 ಹಿಂದೂ ದೇವಾಲಯಗಳು ಉಳಿದುಕೊಂಡಿದೆ.