* ಬಳೆ ಮಾರುತ್ತಿದ್ದ 25 ವರ್ಷದ ವ್ಯಕ್ತಿಯನ್ನು ಥಳಿಸಿದ ಅಪರಿಚಿತ ಗುಂಪು* 10 ಸಾವಿರ ರು. ಕದ್ದೊಯ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌* ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲು

ಇಂದೋರ್‌(ಆ.24): ಬಳೆ ಮಾರುತ್ತಿದ್ದ 25 ವರ್ಷದ ವ್ಯಕ್ತಿಯನ್ನು ಅಪರಿಚಿತ ಗುಂಪೊಂದು ಸಾರ್ವಜನಿಕವಾಗಿ ಥಳಿಸಿ, 10 ಸಾವಿರ ರು. ಕದ್ದೊಯ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇಂದೋರ್‌ನ ಬಾನ್‌ಗಂಗಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

‘ಬಳೆ ಮಾರುತ್ತಿದ್ದ ಮುಸ್ಲಿಂ ವ್ಯಕ್ತಿ ತನ್ನ ವ್ಯಾಪಾರಕ್ಕಾಗಿ ಹಿಂದೂ ಹೆಸರು ಇಟ್ಟುಕೊಂಡಿದ್ದ, ಆತನ ಬಳಿ ಬೇರೆ ಬೇರೆ ಹೆಸರಿನಲ್ಲಿ 2 ಆಧಾರ್‌ ಕಾರ್ಡ್‌ ಲಭ್ಯವಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಜನರು ಕೊಮು ದ್ವೇಷ ಹರಡುವ ಪೋಸ್ಟ್‌ಗಳನ್ನು ಹಂಚಬಾರದು ಎಂದು ಸೂಚಿಸಿದ್ದಾರೆ.

‘ಬಳೆ ಮಾರುತ್ತಿದ್ದಾಗ ಬಂದ ಗುಂಪೊಂದು ನನ್ನ ಹೆಸರನ್ನು ಕೇಳಿ ಥಳಿಸಲು ಆರಂಭಿಸಿದರು. ಬಳೆಗಳು ಸೇರಿದಂತೆ ಇತರ ವಸ್ತುಗಳನ್ನು ನಾಶ ಮಾಡಿದ್ದಾರೆ ಮತ್ತು ನನ್ನ ಬಳಿ ಇದ್ದ 10 ಸಾವಿರ ರು. ಕದ್ದುಕೊಂಡು ಹೋಗಿದ್ದಾರೆ’ ಎಂದು ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಾರೆ.