ಇತ್ತೀಚಿನ ದಿನಗಳಲ್ಲಿ ಮದುವೆ ಆಗುವವರು ತಮಗೊಂದು ಜೋಡಿ ಸಿಕ್ಕರೆ ಸಾಕು ಅನ್ನೋ ಮಟ್ಟಿಗೆ ಪರಿಸ್ಥಿತಿ ಬಂದಿದೆ. ಆದ್ರೆ ಇಲ್ಲೊಬ್ಬ ಮಹಿಳೆ ತನಗೆ ವಾರ್ಷಿಕ ಕೋಟಿ ಆದಾಯ ಹೊಂದಿರುವ ವರ ಬೇಕೆಂದು ಡಿಮ್ಯಾಂಡ್‌ ಮಾಡಿದ್ದಾಳೆ. 

ಮುಂಬೈ (ಏ.04): ಇತ್ತೀಚಿನ ದಿನಗಳಲ್ಲಿ ಮದುವೆ ಆಗುವವರು ತಮಗೊಂದು ಜೋಡಿ ಸಿಕ್ಕರೆ ಸಾಕು ಅನ್ನೋ ಮಟ್ಟಿಗೆ ಪರಿಸ್ಥಿತಿ ಬಂದಿದೆ. ಆದ್ರೆ ಇಲ್ಲೊಬ್ಬ ಮಹಿಳೆ ತನಗೆ ವಾರ್ಷಿಕ ಕೋಟಿ ಆದಾಯ ಹೊಂದಿರುವ ವರ ಬೇಕೆಂದು ಡಿಮ್ಯಾಂಡ್‌ ಮಾಡಿದ್ದಾಳೆ.

Add Asianetnews Kannada as a Preferred SourcegooglePreferred

ಅಂಬರ್‌ ಎನ್ನುವ ಜಾಲತಾಣ ಖಾತೆಯಲ್ಲಿ, ಮುಂಬೈನ 37 ವರ್ಷದ ಮಹಿಳೆ ತಮ್ಮನ್ನು ಮದುವೆಯಾಗುವ ವರ ಹೇಗಿರಬೇಕು ಎಂದು ನಡೆಸಿರುವ ಸಂಭಾಷಣೆಯೊಂದರ ಸ್ಕ್ರೀನ್‌ಶಾಟ್‌ನ್ನು ಹಂಚಿಕೊಂಡಿದ್ದಾರೆ. ‘ವರ್ಷಕ್ಕೆ 4 ಲಕ್ಷ ಆದಾಯವನ್ನು ಗಳಿಸುವ ವಧುವಿಗೆ ಕೋಟಿ ಆದಾಯದ ವರ ಬೇಕಂತೆ, ಇದು ಮತ್ತೊಂದು ಹಂತದ ಭ್ರಮೆ’ ಎಂದು ಬರೆದುಕೊಂಡಿದ್ದಾರೆ.

ವಧುವಿನ ಬೇಡಿಕೆ: ವರ್ಷಕ್ಕೆ ಕನಿಷ್ಠ 1 ಕೋಟಿ ಆದಾಯ ಇರಬೇಕು. ಮುಂಬೈನಲ್ಲಿ ಸ್ವಂತ ಮನೆ ಇರಬೇಕು. ವರ ಎಂಬಿಬಿಎಸ್‌, ಚಾರ್ಟಡ್‌ ಅಕೌಂಟೆಂಟ್‌ ರೀತಿ ಉನ್ನತ ಶಿಕ್ಷಣ ಪಡೆದಿರಬೇಕು ಅಥವಾ ಯಾವುದಾದರೂ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿರಬೇಕು. ಒಂದು ವೇಳೆ ವರ ಯುರೋಪ್‌ ಅದರಲ್ಲೂ ವಿಶೇಷವಾಗಿ ಇಟಲಿಯಲ್ಲಿ ಇದ್ದರೆ ಹೆಚ್ಚು ಸೂಕ್ತ ಎಂದೆಲ್ಲಾ ಬೇಡಿಕೆ ಇಟ್ಟಿದ್ದಾಳೆ.

12 ದಿನದಲ್ಲಿ ಕೇಜ್ರಿವಾಲ್‌ ತೂಕ 4.5 ಕೆ.ಜಿ ಇಳಿ: ಸಚಿವೆ ಅತಿಷಿ ಆರೋಪ

ಕೆಲ ನೆಟ್ಟಿಗರು, ಇದರಲ್ಲಿ ತಪ್ಪೇನಿದೆ..? ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ಆಕೆಯ ಹಕ್ಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಈ ಮಹಿಳೆಯ ಆಸೆ ಈಡೇರುವ ಸಾಧ್ಯತೆ ಕೇವಲ ಶೇ.0.01 ಮಾತ್ರ. ಯಾಕಂದ್ರೆ ನಮ್ಮ ದೇಶದಲ್ಲಿ ವಾರ್ಷಿಕ ಕೋಟಿ ಆದಾಯ ಹೊಂದಿರುವವರು 1.7 ಲಕ್ಷ ಮಾತ್ರ ಎನ್ನುತ್ತದೆ ಅಂಕಿ ಅಂಶ.