Asianet Suvarna News Asianet Suvarna News

20 ವರ್ಷಗಳ ಹಿಂದೆ ನಾಪತ್ತೆಯಾದ ಮಹಿಳೆ ಪಾಕಿಸ್ತಾನದಲ್ಲಿ ಪತ್ತೆ

20 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಈಗ ಪಾಕಿಸ್ತಾನದಲ್ಲಿ ಪತ್ತೆಯಾಗಿದ್ದು, ಬೇರೆಯಾದ ತನ್ನ ಕುಟುಂಬವನ್ನು ಸಾಮಾಜಿಕ ಜಾಲತಾಣದಿಂದಾಗಿ ಮತ್ತೆ ಕಂಡುಕೊಳ್ಳುವಂತಾಗಿದ್ದು, ಸಾಮಾಜಿಕ ಜಾಲತಾಣಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

Mumbai Woman found in Pakistan by social media who left Mumbai 20 years ago akb
Author
Bangalore, First Published Aug 2, 2022, 1:18 PM IST

ಮುಂಬೈ: 20 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಈಗ ಪಾಕಿಸ್ತಾನದಲ್ಲಿ ಪತ್ತೆಯಾಗಿದ್ದು, ಬೇರೆಯಾದ ತನ್ನ ಕುಟುಂಬವನ್ನು ಸಾಮಾಜಿಕ ಜಾಲತಾಣದಿಂದಾಗಿ ಮತ್ತೆ ಕಂಡುಕೊಳ್ಳುವಂತಾಗಿದ್ದು, ಸಾಮಾಜಿಕ ಜಾಲತಾಣಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಪ್ರಸ್ತುತ ಹಮೀದಾ ಭಾನು ಪಾಕಿಸ್ತಾನದ ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ. 20 ವರ್ಷಗಳ ಹಿಂದೆ ಮುಂಬೈನ ಕುರ್ಲಾದ ಮನೆಯಿಂದ ದೂರಾಗಿದ್ದ ಅವರು ಈಗ ಮತ್ತೆ ತಮ್ಮ ಕುಟುಂಬವನ್ನು ಸಂಪರ್ಕಿಸುವಂತಾಗಿದೆ. ಹಮೀದಾ ಅವರು ದುಬೈನಲ್ಲಿ ಮನೆ ಕೆಲಸದ ವೃತ್ತಿಗಾಗಿ 2002ರಲ್ಲಿ ಮುಂಬೈ ತೊರೆದಿದ್ದರು. ಆದರೆ ಇವರನ್ನು ಮನೆ ಕೆಲಸ ನೀಡುವುದಾಗಿ ಮುಂಬೈನಿಂದ ಕರೆದೊಯ್ದ ಏಜೆಂಟ್‌ನ ಮೋಸದಿಂದಾಗಿ ಇವರು ದುಬೈ ಬದಲು ಪಾಕಿಸ್ತಾನದಲ್ಲಿ ಇಳಿಯುವಂತಾಯಿತು.

20 ವರ್ಷದ ಹಿಂದೆ 2002ರಲ್ಲಿ ಕೆಲಸ ಅರಸಿ ವಲಸೆ ಹೊರಟಿದ್ದ ಮುಂಬೈನ 70 ವರ್ಷದ ಮಹಿಳೆ ಬರೋಬರಿ 20 ವರ್ಷಗಳ ನಂತರ ಸೋಶಿಯಲ್ ಮೀಡಿಯಾ ಸಹಾಯದಿಂದ ಪಾಕಿಸ್ತಾನದಲ್ಲಿ ಪತ್ತೆಯಾಗಿದ್ದಾಳೆ. ಪಿಟಿಐ ವರದಿ ಪ್ರಕಾರ ಹಮೀದಾ ಬಾನು ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದರು. ಪ್ರಸ್ತುತ ಹಮೀದಾ ಬಾನು ಅವರು ಪಾಕಿಸ್ತಾನದ ಸಾಮಾಜಿಕ ಹೋರಾಟಗಾರರ ಬಳಿ, ದುಬೈನಲ್ಲಿ ಕೆಲಸ ಅರಸಿ ಮುಂಬೈನಿಂದ ಹೊರಟ ತಾನು ಹೇಗೆ ಟ್ರಾವೆಲ್ ಏಜೆಂಟ್‌ನಿಂದ ಮೋಸಕ್ಕೊಳಗಾಗಿ ಪಾಕಿಸ್ತಾನ ತಲುಪಿದೆ ಎಂಬುದನ್ನು ವಿವರಿಸಿದ್ದಾರೆ. 

ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಶತ್ರುರಾಷ್ಟ್ರದಲ್ಲಿ ತಳಮಳ ಸೃಷ್ಟಿಸಿದ ರಾಜನಾಥ್ ಹೇಳಿಕೆ!
ಗುರಿ ತಪ್ಪಿ ಪಾಕಿಸ್ತಾನಕ್ಕೆ ಬಂದ ಆಕೆ ಅಂತಿಮವಾಗಿ ಅಲ್ಲಿನ ಸ್ಥಳೀಯ ವ್ಯಕ್ತಿಯನ್ನು ಮದುವೆಯಾಗಿ ಮಗುವನ್ನು ಕೂಡ ಹೊಂದಿದ್ದಾರೆ. ಆಕೆಯ ಪತಿ ಪ್ರಸ್ತುತ ತೀರಿಕೊಂಡಿದ್ದಾರೆ. ಇವರ ಕತೆಯನ್ನು ಸಾಮಾಜಿಕ ಕಾರ್ಯಕರ್ತ ಮರೂಫ್‌ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅಲ್ಲದೇ ಮುಂಬೈನ ಸಾಮಾಜಿಕ ಹೋರಾಟಗಾರರೊಬ್ಬರನ್ನು ಸಂಪರ್ಕಿಸಿದ್ದಾರೆ. ನಂತರ ಇಲ್ಲಿನ ಸಾಮಾಜಿಕ ಹೋರಾಟಗಾರ ಖಫ್ಲಾನ್ ಶೇಕ್‌ ಈ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ಹಂಚಿಕೊಂಡು ಹಮೀದಾ ಬಾನು ಅವರ ಕುಟುಂಬವನ್ನು ಪತ್ತೆ ಮಾಡಲು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. 

 

ಕೊನೆಗೂ ಇವರ ಶ್ರಮ ಯಶಸ್ವಿಯಾಗಿದ್ದು, ಕರ್ಲಾದ ಕಷಿಯಾವಾಡ ಪ್ರದೇಶದಲ್ಲಿರುವ ಹಮೀದಾ ಅವರ ಪುತ್ರಿ ಯಾಸ್ಮೀನ್ ಬಾಷಿರ್ ಶೇಕ್ ಅವರನ್ನು ಪತ್ತೆ ಮಾಡುವಲ್ಲಿ ಹೋರಾಟಗಾರರು ಯಶಸ್ವಿಯಾಗಿದ್ದಾರೆ. ನಮ್ಮ ಅಮ್ಮ ಸುರಕ್ಷಿತ ಹಾಗೂ ಜೀವಂತವಾಗಿರುವುದಕ್ಕೆ ನಾವು ತುಂಬಾ ಖುಷಿಯಾಗಿದ್ದೇವೆ. ನಾವು ಈಗ ಆಕೆಯನ್ನು ಭಾರತಕ್ಕೆ ವಾಪಸ್ ಕರೆಸಿಕೊಳ್ಳಲು ಭಾರತೀಯ ಸರ್ಕಾರದ ಸಹಾಯ ಬೇಕಿದೆ ಎಂದು ಎರಡು ದಶಕಗಳ ಬಳಿಕ ತನ್ನ ತಾಯಿಯ ಬಳಿ ಮೊದಲ ಬಾರಿಗೆ ಮಾತನಾಡಿದ ಹಮೀದಾ ಪುತ್ರಿ ಯಾಸ್ಮಿನ್ ಹೇಳಿದ್ದಾರೆ. ನಮಗೆ ಆಕೆ ಏನಾದಳು, ಎಲ್ಲಿರುವಳು ಎಂಬ ಬಗ್ಗೆ ಯಾವುದೇ ಸುಳಿವುಗಳಿರಲಿಲ್ಲ. ಆಕೆಗೆ ಮೋಸ ಮಾಡಿದ ಏಜೆಂಟ್ ಬಳಿಯೇ ನಾವು ಆಗಾಗ ಆಕೆ ಹೇಗಿದ್ದಾಳೆ ಎಂದು ಕೇಳುತ್ತಿದ್ದೇವು ಎಂದು ಯಾಸ್ಮಿನ್ ಹೇಳಿಕೊಂಡಿದ್ದಾರೆ. 

ಅರೆಸ್ಟ್ ಆದ ಪಾಕಿಸ್ತಾನಿ ಎಜೆಂಟ್‌ಗಳೆಲ್ಲಾ ಆರ್‌ಎಸ್ಎಸ್ ಹಾಗೂ ಹಿಂದುಗಳು, RJD ನಾಯಕನ ವಿವಾದ!

Follow Us:
Download App:
  • android
  • ios