ಮುಂಬೈ(ಏ.25): ಕೆಲ ದಿನಗಳ ಹಿಂದಷ್ಟೇ ದೇಶದಲ್ಲೇ ಅತ್ಯಧಿಕ ಪ್ರಮಾಣದ ಕೊರೋನಾ ಕೇಸ್‌ಗಳು ದಾಖಲಾಗುತ್ತಿದ್ದ ಮುಂಬೈನಲ್ಲಿ ಇದೀಗ ದೈನಂದಿನ ಕೊರೋನಾ ಪ್ರಕರಣಗಳು ಕ್ರಮೇಣ ಇಳಿಕೆ ಆಗುತ್ತಿವೆ.

"

ಶನಿವಾರ ಮುಂಬೈನಲ್ಲಿ 5,888 ಕೇಸ್‌ಗಳು ದಾಖಲಾಗಿದ್ದು, 71 ಮಂದಿ ಬಲಿ ಆಗಿದ್ದಾರೆ. ಇದು 25 ದಿನಗಳ ಕನಿಷ್ಠ ಎನಿಸಿಕೊಂಡಿದೆ. ಏ.4ರಂದು ಮುಂಬೈನಲ್ಲಿ ಗರಿಷ್ಠ 11,163 ಕೇಸ್‌ಗಳು ದಾಖಲಾಗಿದ್ದವು. ಅಂದಿನ ಪ್ರಕರಣಗಳಿಗೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ಅರ್ಧದಷ್ಟುಇಳಿಕೆ ಆಗಿದೆ. ಇನ್ನು ಶುಕ್ರವಾರ ಮುಂಬೈನಲ್ಲಿ 7,221 ಕೇಸ್‌ಗಳು ದಾಖಲಾಗಿದ್ದವು. ಇದು ಕೊರೋನಾ ತನ್ನ ಗರಿಷ್ಠ ಮಟ್ಟಮುಟ್ಟಿಇಳಿಕೆಯಾಗುತ್ತಿರುವುದರ ಸುಳಿವು ಎನ್ನಲಾಗಿದೆ.

ಮುಂಬೈನಲ್ಲಿ ಕೊರೋನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿ ಮಾಡಿರುವುದರಿಂದ ಸೋಂಕಿನ ಪ್ರಮಾಣ ಇಳಿಕೆ ಆಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.