Asianet Suvarna News Asianet Suvarna News

Covid 19 Cases ಭಾರತದಲ್ಲಿ 4ನೇ ಕೋವಿಡ್ ಅಲೆ ಭೀತಿ, ಮತ್ತೆ ಮುಂಬೈನಿಂದಲೇ ಆರಂಭ?

  • ಮುಂಬೈನಲ್ಲಿನ ಕೊರೋನಾ ಹೆಚ್ಚಳ ಪ್ರತಿ ಭಾರಿ ಭಾರತಕ್ಕೆ ತಂದಿದೆ ಸಂಕಷ್ಟ
  • ಈ ಬಾರಿಯೂ ಮುಂಬೈನಲ್ಲಿ ಕೊರೋನಾ ಗಣನೀಯ ಹೆಚ್ಚಳ
  • ನಾಲ್ಕನೇ ಅಲೆ ಎಚ್ಚರಿಕೆ, ಮಂಕಿಪಾಕ್ಸ್ ಸೇರಿದಂತೆ ಇತರ ವೈರಸ್ ಆತಂಕ
     
Mumbai reports 500 plus covid 19 case aftet february India on 4th wave Alert ckm
Author
Bengaluru, First Published Jun 1, 2022, 3:38 PM IST

ಮುಂಬೈ(ಜೂ.01): ಭಾರತದಲ್ಲಿನ ಕೊರೋನಾ ಪ್ರಕರಣ ಸಂಖ್ಯೆ ನಿಧಾನವಾಗಿ ಏರಿಕೆಯಾಗುತ್ತಿದೆ. ಆದರೆ ಮುಂಬೈನಲ್ಲಿನ ಕೋವಿಡ್ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿದೆ. ಮುಂಬೈನ ಕೋವಿಡ್ ಪಾಸಿಟಿವಿಟಿ ರೇಟ್ ಶೇಕಡಾ 6ಕ್ಕೆ ಜಿಗಿದಿದೆ. ಇಚ್ಚು ಎಚ್ಚರಿಕೆ ಕರೆಗಂಟೆಯಾಗಿದೆ. ಪ್ರತಿ ಭಾರಿ ಭಾರತದಲ್ಲಿ ಕೊರೋನಾ ಅಲೆಗೆ ಮುಂಬೈನಲ್ಲಿನ ಕೋವಿಡ್ ಪ್ರಕರಣ ಸಂಖ್ಯೆ ಕಾರಣವಾಗಿದೆ. ಇದೀಗ ಮತ್ತೆ ಮುಂಬೈ ಭಾರತದಲ್ಲಿ 4ನೇ ಅಲೆಗೆ ಕಾರಣವಾಗುತ್ತಾ ಅನ್ನೋ ಭೀತಿಯೂ ಹೆಚ್ಚಾಗಿದೆ.

ವಿಶ್ವದ ಹಲವು ರಾಷ್ಟ್ರಗಳೊಂದಿಗೆ ನಿಕಟ ವಾಣಿಜ್ಯ ವ್ಯಹಾರ ಹೊಂದಿರುವ ಮುಂಬೈ ಮಹಾನಗರಿ ಅತೀ ವೇಗದಲ್ಲಿ ಕೋವಿಡ್‌ಗೆ ತುತ್ತಾಗುತ್ತಿದೆ. ಈ ಹಿಂದಿನ ಕೋವಿಡ್ ಅಲೆಗಳಿಗೆ ಮುಂಬೈನಲ್ಲಿನ ಪ್ರಕರಣಗಳು ಒಂದು ಕಾರಣವಾಗಿತ್ತು. ಇದೀಗ ಈ ಬಾರಿ ಮತ್ತೆ ಮುಂಬೈನಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದ್ದು, ಜನರ ಆತಂಕವೂ ಹೆಚ್ಚಾಗಿದೆ.

ಜಗತ್ತಿನಾದ್ಯಂತ ಹಬ್ಬುತ್ತಿದೆ ಮಹಾಮಾರಿ ಮಂಕಿಪಾಕ್ಸ್, ಭಾರತವೂ ಆತಂಕ ಪಡುವ ಅಗತ್ಯವಿದ್ಯಾ ?

ಕಳೆದ ಡಿಸೆಂಬರ್, ಈ ವರ್ಷದ ಆರಂಭ ಹಾಗೂ ಮಾರ್ಚ್ ತಿಂಗಳಲ್ಲಿ ಭಾರತದಲ್ಲಿ ಕೊರೋನಾ ಹಾಗೂ ಓಮಿಕ್ರಾನ್ ಆತಂಕ ಹೆಚ್ಚಾಗಿತ್ತು. ಕಾರಣ ವಿದೇಶಗಳಲ್ಲಿ ಕೋವಿಡ್ ಗಣನೀಯ ಹೆಚ್ಚಳವಾಗಿತ್ತು. ಆದರೆ ಭಾರತದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಕೊಂಚ ಏರಿಕೆಯಾಗಿದ್ದರೂ, ಆಸ್ಪತ್ರೆ ದಾಖಲಾಗುವ ಸಂಖ್ಯೆಯಲ್ಲಿ ಏರಿಕೆಯಾಗಿರಲಿಲ್ಲ. ಕೋವಿಡ್ ಕಾಣಿಸಿಕೊಂಡವರಲ್ಲಿ ಯಾವುದೇ ಗುಣಲಕ್ಷಣಗಳಿರಲಿಲ್ಲ. ಜೊತೆಗೆ ಚೇತರಿಕೆ ಪ್ರಮಾಣವೂ ಹೆಚ್ಚಾಗಿತ್ತು. ಹೀಗಾಗಿ ಭಾರತದಲ್ಲಿ ಯಾವುದೇ ಕೋವಿಡ್ ಅಲೆ ಸೃಷ್ಟಿಯಾಗಲಿಲ್ಲ.

ಈ ಬಾರಿ ಮುಂಬೈನಲ್ಲಿ ಕೋವಿಡ್ ಸೋಂಕಿತರ ಆಸ್ಪತ್ರೆ ದಾಖಲಾಗುವ ಪ್ರಮಾಣ ಶೇಕಡಾ 231ಕ್ಕೆ ಏರಿಕೆಯಾಗಿದೆ. ಏಪ್ರಿಲ್ ತಿಂಗಳಲ್ಲಿ ಕೋವಿಡ್ ಕಾರಣ ಆಸ್ಪತ್ರೆ ದಾಖಲಾದವರ ಸಂಖ್ಯೆ 61. ಇದೀಗ ಈ ಸಂಖ್ಯೆ 215ಕ್ಕೆ ಏರಿಕೆಯಾಗಿದೆ.  ಕಳೆದ 24 ಗಂಟೆಯಲ್ಲಿ ಮುಂಬೈನಲ್ಲಿ 506 ಕೋವಿಡ್ ಪ್ರಕರಣ ದಾಖಲಾಗಿತ್ತು.  ಫೆಬ್ರವರಿ ಬಳಿಕ ಮುಂಬೈನಲ್ಲಿ 500ರ ಗಡಿ ದಾಟಿಲ್ಲ.
 
178 ಮಂದಿಯಲ್ಲಿ ಸೋಂಕು ಪತ್ತೆ
ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಮಂಗಳವಾರ 178 ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿವೆ. ಪಾಸಿಟಿವಿಟಿ ದರ ಶೇ.1.35ಕ್ಕೆ ಹೆಚ್ಚಾಗಿದೆ. 250 ಮಂದಿ ಚೇತರಿಸಿಕೊಂಡಿದ್ದಾರೆ. ಕೋವಿಡ್‌ ಸಾವು ದಾಖಲಾಗಿಲ್ಲ. ಸದ್ಯ ನಗರದಲ್ಲಿ ಒಟ್ಟು 1,937 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ ಇಬ್ಬರು ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆ ಆರೈಕೆಯಲ್ಲಿದ್ದಾರೆ.

ಮತ್ತೆ ಕೊರೋನಾತಂಕ, ರಾಜ್ಯದಲ್ಲಿ ಪಾಸಿವಿಟಿ ದರ ಏರಿಕೆ, 3 ತಿಂಗಳ ಗರಿಷ್ಠ!

ಮಂಗಳವಾರ ಮಹದೇವಪುರ ವಲಯದಲ್ಲಿ ಹೊಸದಾಗಿ ಒಂದು ಕಂಟೈನ್ಮೆಂಟ್‌ ವಲಯ ಸೃಷ್ಟಿಯಾಗಿದ್ದು, ದಕ್ಷಿಣ ವಲಯದಲ್ಲಿ ಒಂದು ಪ್ರದೇಶ ಕಂಟೈನ್ಮೆಂಟ್‌ನಿಂದ ಮುಕ್ತವಾಗಿದೆ. ಒಟ್ಟು ಐದು ಕಂಟೈನ್ಮೆಂಟ್‌ ವಲಯಗಳಿವೆ. 13,612 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 1888 ಮಂದಿ ಮೊದಲ ಡೋಸ್‌, 7019 ಮಂದಿ ಎರಡನೇ ಡೋಸ್‌ ಮತ್ತು 4705 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ.​​​ ಒಟ್ಟು 14,546 ಮಂದಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 11,431 ಆರ್‌ಟಿಪಿಸಿಆರ್‌ ಹಾಗೂ 3115 ರಾರ‍ಯಪಿಡ್‌ ಆ್ಯಂಟಿಜನ್‌ ಪರೀಕ್ಷೆ ನಡೆಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ದ.ಕ.ದಲ್ಲಿ ನಾಲ್ವರಿಗೆ ಕೊರೋನಾ ಸೋಂಕು
ದ.ಕ. ಜಿಲ್ಲೆಯಲ್ಲಿ ಸೋಮವಾರ 4 ಮಂದಿಗೆ ಕೊರೋನಾ ಪಾಸಿಟಿವ್‌ ದೃಢಪಟ್ಟಿದೆ. 7 ಮಂದಿ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 16ಕ್ಕೆ ಇಳಿದಿದೆ. ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ 1,35,600 ಆಗಿದ್ದು, ಅವರಲ್ಲಿ 1,33,734 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 1,850 ಮಂದಿ ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಬುಲೆಟಿನ್‌ ತಿಳಿಸಿದೆ.

Follow Us:
Download App:
  • android
  • ios