Asianet Suvarna News Asianet Suvarna News

ಮತ್ತೆ ಕೊರೋನಾತಂಕ, ರಾಜ್ಯದಲ್ಲಿ ಪಾಸಿವಿಟಿ ದರ ಏರಿಕೆ, 3 ತಿಂಗಳ ಗರಿಷ್ಠ!

* 241 ಕೋವಿಡ್‌ ಕೇಸ್‌ ಪತ್ತೆ: ರಾಜ್ಯದಲ್ಲಿ 3 ತಿಂಗಳ ಗರಿಷ್ಠ

* 2000 ಸಕ್ರಿಯ ಕೇಸ್‌ ಪಾಸಿಟಿವಿಟಿ ಶೇ.0.95ಕ್ಕೇರಿಕೆ

* ಸತತ 11ನೇ ದಿನ ಸೋಂಕಿತರ ಸಾವು ವರದಿಯಾಗಿಲ್ಲ

Covid Positivity Rate Increasing In Karnataka pod
Author
Bangalore, First Published May 30, 2022, 5:08 AM IST

ಬೆಂಗಳೂರು(ಮೇ.30): ರಾಜ್ಯದಲ್ಲಿ ಕೊರೋನಾ ಸೋಂಕು ಹೊಸ ಪ್ರಕರಣಗಳು 3 ತಿಂಗಳ ಬಳಿಕ 250 ಆಸುಪಾಸಿಗೆ ಹೆಚ್ಚಳವಾಗಿದ್ದು, ಸಕ್ರಿಯ ಸೋಂಕು ಪ್ರಕರಣಗಳು ಎರಡು ಸಾವಿರ ಗಡಿದಾಟಿವೆ.

ಭಾನುವಾರ 241 ಮಂದಿಗೆ ಸೋಂಕು ತಗುಲಿದ್ದು, 98 ಮಂದಿ ಗುಣಮುಖರಾಗಿದ್ದಾರೆ. ಸತತ 11ನೇ ದಿನ ಸೋಂಕಿತರ ಸಾವು ವರದಿಯಾಗಿಲ್ಲ. ಗುಣಮುಖರ ಸಂಖ್ಯೆ ಕುಸಿತದ ಕಾರಣ ಸಕ್ರಿಯ ಪ್ರಕರಣ ಸಂಖ್ಯೆ 2041ಕ್ಕೇರಿದೆ. ಇವರು ಈಗ ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಮನೆ ಆರೈಕೆಯಲ್ಲಿದ್ದಾರೆ.

ಸೋಂಕು ಪರೀಕ್ಷೆಗಳು 18 ಸಾವಿರ ನಡೆದಿದ್ದು, ಪಾಸಿಟಿವಿಟಿ ದರ ಶೇ 0.95 ದಾಖಲಾಗಿದೆ. ಶನಿವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು ಎರಡೂವರೆ ಸಾವಿರ ಇಳಿಕೆಯಾಗಿವೆ. ಆದರೂ, ಹೊಸ ಪ್ರಕರಣಗಳು 45 ಹೆಚ್ಚಳವಾಗಿವೆ. (ಶನಿವಾರ 196 ಪ್ರಕರಣಗಳು, ಸಾವು ಶೂನ್ಯ). ಬೆಂಗಳೂರು 232, ದಕ್ಷಿಣ ಕನ್ನಡ 4, ತುಮಕೂರು 3, ಬೆಳಗಾವಿ ಇಬ್ಬರಿಗೆ ಸೋಂಕು ತಗುಲಿದೆ. 26 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.

ಮಾ.4ರ ನಂತರದ ಗರಿಷ್ಠ:

ಮಾಚ್‌ರ್‍ 4ರಂದು 278 ಕೊರೋನಾ ಪ್ರಕರಣಗಳು ವರದಿಯಾಗಿದ್ದವು. ಬಳಿಕೆ ಕಡಿಮೆಯಾಗುತ್ತಾ 50 ಆಸುಪಾಸಿಗೆ ಬಂದಿತ್ತು. ನಂತರ ತುಸು ಏರಿಕೆ ಕಂಡು ಕಳೆದ ಒಂದು ವಾರದಿಂದ 150-200 ಆಸುಪಾಸಿನಲ್ಲಿದ್ದವು. ಸದ್ಯ ಒಮ್ಮೆಗೆ 241ಕ್ಕೆ ಹೆಚ್ಚುವ ಮೂಲಕ ಮೂರು ತಿಂಗಳಲ್ಲಿಯೇ ಅಧಿಕ ಪ್ರಕರಣಗಳು ಪತ್ತೆಯಾದಂತಾಗಿದೆ. 2041 ಸಕ್ರಿಯ ಕೇಸಲ್ಲಿ 1943 ಸೋಂಕಿತರು ಬೆಂಗಳೂರಿನಲ್ಲೇ ಇದ್ದಾರೆ.

ರಾಜ್ಯದಲ್ಲಿ ಈವರೆಗೆ 39.49 ಲಕ್ಷ ಮಂದಿಗೆ ಸೊಂಕು ತಗುಲಿದೆ. 39.09 ಲಕ್ಷ ಮಂದಿ ಗುಣಮುಖರಾಗಿದ್ದು, 40,064 ಮಂದಿ ಸಾವಿಗೀಡಾಗಿದ್ದಾರೆ.

Follow Us:
Download App:
  • android
  • ios