Asianet Suvarna News Asianet Suvarna News

'ಮುಂಬೈ ಪೊಲೀಸರು ವಶಪಡಿಸಿಕೊಂಡಿದ್ದು ಹೀರೊಇನ್ ಅಲ್ಲ ಹೆರಾಯಿನ್'

* ಮುಂಬೈ ಪೊಲೀಸರ ಪರ ಬ್ಯಾಟ್ ಬೀಸಿದ ಸಿಎಂ ಉದ್ಧವ್ ಠಾಕ್ರೆ
* ಮುಂಬೈ ಪೊಲೀಸರು ವಶಪಡಿಸಿಕೊಂಡಿರುವುದು ಹೆರಾಯಿನ್
* ಬಾಲಿವುಡ್ ನಾಯಕಿಯರನ್ನು ಟಾರ್ಗೆಟ್  ಮಾಡುತ್ತಿದ್ದ ಎನ್ ಸಿಬಿಗೆ ಠಕ್ಕರ್

Mumbai police caught 'heroin' and not 'heroine' Maha CM Uddhav Thackeray slams NCB mah
Author
Bengaluru, First Published Oct 23, 2021, 8:42 PM IST
  • Facebook
  • Twitter
  • Whatsapp

ಮುಂಬೈ(ಅ. 23) ಮಹಾರಾಷ್ಟ್ರ (Maharashtra)ಸಿಎಂ ಉದ್ಧವ್ ಠಾಕ್ರೆ (Uddhav Thackeray ) ಈ ಸಾರಿ   ರಾಷ್ಟ್ರೀಯ ಎನ್ ಸಿಬಿ (Narcotics Control Bureau) ಮೇಲೆ ದಾಳಿ ಮಾಡಿದ್ದಾರೆ. ಮುಂಬೈ ಪೊಲೀಸರು (Mumbai Police) ವಶಪಡಿಸಿಕೊಂಡಿರುವುದು  25  ಕೋಟಿ ರೂ. ಮೊತ್ತದ ಹೆರಾಯಿನ್.. ಹೀರೋಇನ್ (Bollywoo) ಅಲ್ಲ ಗೊತ್ತಿರಲಿ ಎಂದಿದ್ದಾರೆ.

ಮುಂಬೈ ಪೊಲೀಸರು ಕೆಲ ದಿನಗಳ ಹಿಂದೆ ಡ್ರಗ್ಸ್ ಜಾಲ ಪತ್ತೆಮಾಡಿದ್ದರು.  ಮುಂಬೈ ಪೊಲೀಸರಿಗೆ  ಪಬ್ಲಿಸಿಟಿ ಬೇಕಾಗಿಲ್ಲ ಎಂದಿದ್ದಾರೆ.

ಆರ್ಯನ್ ಗೆ ಗಾಂಜಾ ಪೂರೈಸಿದ್ದೇ ಅನನ್ಯಾ!

ಫೊರೆನ್ಸಿಕ್ ಲ್ಯಾಬ್ ಒಂದರ ಉದ್ಘಾಟನೆ ಕಾರ್ಯಕ್ರಮದ ವೇಳೆ ಮಾತನಾಡಿದರು.  ಈ ದಿನಗಳಲ್ಲಿ ಎಲ್ಲಿ ನೋಡಿದರೂ ಒಂದೇ ಮಾತು ಅದು ಡ್ರಗ್ಸ್..ಡ್ರಗ್ಸ್..ಡ್ರಗ್ಸ್..  ಇಡೀ  ಜಗತ್ತಿಗೆ ಮಹಾರಾಷ್ಟ್ರವೇ ಡ್ರಗ್ಸ್ ಸರಬರಾಜು ಮಾಡುತ್ತಿದೆ ಎನ್ನುವ ರೀತಿಯಲ್ಲಿಯೂ ಬಿಂಬಿಸಿದ್ದನ್ನು ಸಹಿಸಿಕೊಂಡಿದ್ದೇವೆ.  ಒಂದೇ ಒಂದು ತಂಡ ಇಂಥವರನ್ನು ಹೆಡೆಮುರಿ ಕಟ್ಟುತ್ತದೆ ಅದು ಎಂದರೆ ಮುಂಬೈ ಪೊಲೀಸ್ ಎಂದಿದ್ದಾರೆ.

ಎನ್ ಸಿಬಿ ಸೆಲೆಬ್ರಿಟಿಗಳನ್ನು ಮಾತ್ರ ಟಾರ್ಗೆಟ್ ಮಾಡುತ್ತಿದೆ ಎಂದು ಈ ಹಿಂದೆ ಠಾಕ್ರೆ ಹೇಳಿದ್ದರು.  ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನ ದೊಡ್ಡ ಚರ್ಚೆಗೆ ಕಾರಣವಾಗಿಯೇ ಇದೆ.  

ಬಾಲಿವುಡ್  ಮತ್ತರು ಡ್ರಗ್ಸ್ ಪ್ರಕರಣಕ್ಕೂ ಲಿಂಕ್ ಇದ್ದೇ ಇದೆ.  ಸುಶಾಂತ್ ಸಿಂಗ್ ಸಾವಿನ ನಂತರ ಹುಟ್ಟಿಕೊಂಡ ವಿಚಾರ ಅನೇಕ ತಿರುವುಗಳನ್ನು ಪಡೆದುಕೊಂಡಿತು.. ರಿಯಾ ಚಕ್ರವರ್ತಿಯಿಂದ ಹಿಡಿದು ಇದೀಗ ಅನನ್ಯಾ ಪಾಂಡೆ ವರೆಗೆ ವಿಚಾರಣೆ ನಡೆಸಲಾಗಿದೆ.

ಮುಂಬೈ ಪೊಲೀಸರ ಪರ ಸಿಎಂ ಬ್ಯಾಟ್ ಬೀಸಿದ್ದು ಎನ್ ಸಿಬಿ ಗೆ ಠಕ್ಕರ್ ಕೊಟ್ಟಿದ್ದಾರೆ. ಮುಂಬೈ ಪೊಲೀಸರು ವಶಪಡಿಸಿಕೊಂಡಿರುವುದು ಹೆರಾಯಿನ್ .. ಹೀರೊಇನ್ ಅಲ್ಲ ಗೊತ್ತಿರಲಿ! ಎಂದಿದ್ದಾರೆ. 

 

Follow Us:
Download App:
  • android
  • ios