ಪ್ರಧಾನಿ ಮೋದಿ ರೋಡ್‌ಶೋ ಮೇಲೆ ಉಗ್ರರ ದಾಳಿ ಆತಂಕ, ಡ್ರೋನ್ ಸೇರಿ ಹಾರುವ ವಸ್ತುಗಳಿಗೆ ನಿಷೇಧ!
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮುಂಬೈನಲ್ಲಿ ಆಯೋಜಿಸಿರುವ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಹಾಗೂ ರ್ಯಾಲಿಗೆ ಉಗ್ರ ದಾಳಿ ಆತಂಕ ಎದುರಾಗಿದೆ. ಹೀಗಾಗಿ ಮುಂಬೈ ಪೊಲೀಸರು ಮೇ.15ರಿಂದ ಮೇ.17ರ ವರೆಗೆ ಡ್ರೋನ್, ಪ್ಯಾರಾಗ್ಲೈಡಿಂಗ್, ಬಲೂನ್ ಸೇರಿದಂತೆ ಹಾರುವ ವಸ್ತುಗಳನ್ನು ನಿಷೇಧಿಸಲಾಗಿದೆ.
ಮುಂಬೈ(ಮೇ.15) ಲೋಕಸಭಾ ಚುನಾವಣೆಗೆ ಪ್ರಧಾನಿ ಮೋದಿ ದೇಶಾದ್ಯಂತ ಪ್ರಚಾರ ಮಾಡುತ್ತಿದ್ದಾರೆ. ರೋಡ್ ಶೋ, ಅಬ್ಬರದ ಪ್ರಚಾರ, ಚುನಾವಣಾ ಭಾಷಣ ಮೂಲಕ ಮತದಾರರನ್ನು ಸೆಳೆಯುುವ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ಮುಂಬೈಲ್ಲಿ ಮೋದಿ ರೋಡ್ ಶೋ ಹಾಗೂ ಸಮಾವೇಶ ಆಯೋಜಿಸಲಾಗಿದೆ. ಆದರೆ ಮೋದಿ ಕಾರ್ಯಕ್ರಮದ ಮೇಲೆ ಉಗ್ರರ ದಾಳಿ ಆತಂಕ ಎದುರಾಗಿದೆ. ಇದರ ಬೆನ್ನಲ್ಲೇ ಮುಂಬೈ ಪೊಲೀಸರು ಅಲರ್ಟ್ ಆಗಿದ್ದು, ಮೇ 15ರಿಂದ ಮೇ17ರ ವರೆಗೆ ಮೋದಿ ಕಾರ್ಯಕ್ರಮ, ರೋಡ್ ಶೋ ಮಾರ್ಗಗಳು ಹಾಗೂ ಸುತ್ತು ಮುತ್ತ ಎಲ್ಲಾ ಡ್ರೋನ್ ಸೇರಿದಂತೆ ಎಲ್ಲಾ ರೀತಿಯ ಹಾರುವ ವಸ್ತುಗಳನ್ನು ನಿಷೇಧಿಸಲಾಗಿದೆ.
ಇಂದು(ಮೇ.15) ಮುಂಬೈ ಘಾಟ್‌ಕೂಪರ್‌ನಲ್ಲಿ ಮೋದಿ ರೋಡ್ ಶೋ ಆಯೋಜಿಸಲಾಗಿದೆ. ಇನ್ನು ಶುಕ್ರವಾರ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಆದರೆ ಈ ಕಾರ್ಯಕ್ರಮ ಹಾಗೂ ರೋಡ್ ಶೇ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆಯನ್ನು ಗುಪ್ತಚರ ಇಲಾಖೆ ಸೂಚಿಸಿದೆ. ಈ ಮಾಹಿತಿ ಬೆನ್ನಲ್ಲೇ ಅಲರ್ಟ್ ಆಗಿರುವ ಮುಂಬೈ ಪೊಲೀಸರು ಇದೀಗ ಕಠಿಣ ಕ್ರಮ ಕೈಗೊಂಡಿದ್ದಾರೆ.
ಹಿಂದೂ-ಮುಸ್ಲಿಂ ರಾಜಕೀಯ ಮಾಡಿದರೆ ನಾನು ಸಾರ್ವಜನಿಕ ಬದುಕಿಗೆ ಯೋಗ್ಯನಲ್ಲ: ಪ್ರಧಾನಿ ಮೋದಿ
ಮೇ 15ರಿಂದ 17ರ ಶುಕ್ರವಾರದ ವರಗೆ ಮೋದಿ ಕಾರ್ಯಕ್ರಮ, ರೋಡ್ ಶೋ ಸೇರಿದಂತೆ ಸುತ್ತ ಮುತ್ತಲಿನ ಪ್ರದೇಶದಲ್ಲಿ ಡ್ರೋನ್, ಪ್ಯಾರಾಗ್ಲೈಡರ್ಸ್, ಬಲೂನ್, ಗಾಳಿಪಟ, ರಿಮೂಟ್ ಕಂಟ್ರೋಲ್ ಮೈಕ್ರೋಲೈಟ್ ಏರ್‌ಕ್ರಾಫ್ಟ್ ಸೇರಿದಂತೆ ಎಲ್ಲಾ ಹಾರುವ ವಸ್ತುಗಳನ್ನು ಮುಂಬೈ ಪೊಲೀಸರು ನಿಷೇಧಿಸಿದೆ. ಮುಂಬೈ ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸು ಈ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ.
ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಹಲವು ವಿವಿಐಪಿ ಅತಿಥಿಗಳು, ನಾಯಕರು ಪಾಲ್ಗೊಳ್ಳುತ್ತಿದ್ದಾರೆ. ಮೋದಿ ಕಾರ್ಯಕ್ರಮದ ಮೇಲೆ ಉಗ್ರರು ಅಥವಾ ಭಾರತ ವಿರೋಧಿ ಶಕ್ತಿಗಳು ದಾಳಿಗೆ ಸಜ್ಜಾಗಿರುವ ಮಾಹಿತಿ ಲಭ್ಯವಾಗಿದೆ. ಶಾಂತಿ ಹಾಗೂ ಸೌಹಾರ್ಧತೆ ಕೆಡಿಸಲು ಸಂಚು ರೂಪಿಸಿರುವ ಕುರಿತು ಮಾಹಿತಿಗಳು ಬಂದಿದೆ. ಹೀಗಾಗಿ ಮೋದಿ ಕಾರ್ಯಕ್ರಮಕ್ಕೆ ಹೆಚ್ಚಿನ ಭದ್ರತೆ ಒದಗಿಸಲು ಸೂಚಿಸಲಾಗಿದೆ. ಆಗಮಿಸುವ ಜನರ ತಪಾಸಣೆ, ಭದ್ರತಾ ಪರೀಶಿಲನೆಗಳು ನಡೆಯಲಿದೆ.
ಭಾರತದ ಪ್ರಧಾನಿಗೆ ಕಾರಿಲ್ಲ, ಮನೆ ಇಲ್ಲ, 3 ಕೋಟಿ ಆಸ್ತಿ!
ಹಾರುವ ವಸ್ತುಗಳನ್ನು ನಿಷೇಧಿಸಲಾಗಿದೆ. ಎಲ್ಲೆಡೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶವಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಈ ಮೂಲಕ ಗರಿಷ್ಠ ಸುರಕ್ಷತೆ ಒದಗಿಸಲು ಮುಂಬೈ ಪೊಲೀಸರು ಮುಂದಾಗಿದ್ದಾರೆ. ನಿಯಮ ಪಾಲಿಸದಿದ್ದರೆ ಸೆಕ್ಷನ್ 188ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.