Asianet Suvarna News Asianet Suvarna News

ಕೋಚಿಂಗ್‌ಗೆ ಬಂದ ಬಾಲಕಿಗೆ ಲೈಂಗಿಕ ಕಿರುಕುಳ: ಶಿಕ್ಷಕನಿಗೆ ರಕ್ತ ಬರುವಂತೆ ಥಳಿಸಿದ ಜನ

ಕೋಚಿಂಗ್ ಕ್ಲಾಸ್‌ಗೆ ಬಂದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ ಜನ ರಕ್ತ ಬರುವಂತೆ ಬಾರಿಸಿದ ಘಟನೆ ಮಹಾರಾಷ್ಟ್ರದ ಮುಂಬೈನ ವಿರಾರ್‌ನಲ್ಲಿ ನಡೆದಿದೆ. 36 ವರ್ಷದ ಶಿಕ್ಷಕನಿಗೆ ಜನ ಬಟ್ಟೆ ಬಿಚ್ಚಿ ಬಾರಿಸಿದ್ದಾರೆ. 

Mumbai Parents assault male teacher after girl who was coming to coaching accusing him of sexual Harassment akb
Author
First Published Aug 29, 2024, 2:57 PM IST | Last Updated Aug 29, 2024, 3:04 PM IST

ಮುಂಬೈ: ಕೋಚಿಂಗ್ ಕ್ಲಾಸ್‌ಗೆ ಬಂದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ ಜನ ರಕ್ತ ಬರುವಂತೆ ಬಾರಿಸಿದ ಘಟನೆ ಮಹಾರಾಷ್ಟ್ರದ ಮುಂಬೈನ ವಿರಾರ್‌ನಲ್ಲಿ ನಡೆದಿದೆ. 36 ವರ್ಷದ ಶಿಕ್ಷಕನಿಗೆ ಜನ ಬಟ್ಟೆ ಬಿಚ್ಚಿ ಬಾರಿಸಿದ್ದಾರೆ. ಬುಧವಾರ ಈ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿರಾರ್‌ನ ಕೋಚಿಂಗ್ ಸೆಂಟರ್‌ನಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕ ಇಲ್ಲಿಗೆ ಕೋಚಿಂಗ್‌ಗೆ ಬರುತ್ತಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎನ್ನಲಾಗಿದೆ.

ವಿಚಾರ ತಿಳಿದು ಸಿಟ್ಟಿಗೆದ್ದ ಜನ ಆತನನ್ನು ಕೋಚಿಂಗ್ ಸೆಂಟರ್‌ನಿಂದ ರಸ್ತೆಗೆಳೆದು ಆತನ ಶರ್ಟ್ ಬಿಚ್ಚಿ ರಕ್ತ ಬರುವಂತೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. 

ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶಗಳು!

ವರದಿಗಳ ಪ್ರಕಾರ ಈ ಶಿಕ್ಷಕ ವಿರಾರ್‌ನ ಮನ್ವೆಲ್‌ಪಡದಲ್ಲು ತನ್ನದೇ ಕೋಚಿಂಗ್ ಸೆಂಟರ್‌ನ್ನು ಹೊಂದಿದ್ದು ವಾರದಿಂದ ಕೋಚಿಂಗ್ ಸೆಂಟರ್‌ಗೆ ಬರುತ್ತಿದ್ದ ಬಾಲಕಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈತನ ಕಿರುಕುಳದಿಂದಾಗಿ ಆತ ಕೋಚಿಂಗ್ ಸೆಂಟರ್‌ಗೆ ಹೋಗಲು ಒಪ್ಪುತ್ತಿರಲಿಲ್ಲ, ಕಳೆದ ಸೋಮವಾರದಿಂದ ಆಕೆ ಕೋಚಿಂಗ್‌ಗೆ ಹೋಗದೇ ಇರುವುದು ಪೋಷಕರ ಗಮನಕ್ಕೆ ಬಂದಿದ್ದು, ಈ ಬಗ್ಗೆ ಬಾಲಕಿಯನ್ನು ವಿಚಾರಿಸಿದಾಗ ಬಾಲಕಿ ವಿಚಾರ ಬಾಯ್ಬಿಟ್ಟಿದ್ದಾಳೆ. ಕೋಚಿಂಗ್ ಸೆಂಟರ್‌ನಲ್ಲಿ ಶಿಕ್ಷಕ ಅಸಭ್ಯವಾಗಿ ತನ್ನನ್ನು ಸ್ಪರ್ಶಿಸುತ್ತಿದ್ದಾನೆ ಎಂದು ಬಾಲಕಿ ದೂರಿದ್ದಾಳೆ. 

ಇದರಿಂದ ಸಿಟ್ಟಿಗೆದ್ದ ಬಾಲಕಿಯ ತಂದೆ ಹಾಗೂ ಮನೆಯವರು ಕೋಚಿಂಗ್ ಸೆಂಟರ್‌ಗೆ ಬಂದು ಶಿಕ್ಷಕನ ಕಾಲರ್ ಹಿಡಿದು ಹೊರಗೆ ಎಳೆದುಕೊಂಡು ಬಂದು ಆತನಿಗೆ ಬಾರಿಸಲು ಶುರು ಮಾಡಿದ್ದಾರೆ. 7ರಿಂದ 8 ಜನರಿದ್ದ ತಂಡ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಬಾರಿಸಿದ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ವೇಳೆ ಇನ್ನೂ ಮೂರು ಬಾಲಕಿಯರು ಹತ್ತಿರ ಬಂದು ತಮಗೂ ಇದೇ ರೀತಿ ಆತ ಕಿರುಕುಳ ನೀಡಿದ್ದಾಗಿ ಹೇಳಿದ್ದಾರೆ. ಇದಾದ ನಂತರ ಈ ಕೋಚಿಂಗ್ ಕ್ಲಾಸ್‌ಗೆ ಬರುತ್ತಿದ್ದ 7 ಹಾಗೂ 8ನೇ ತರಗತಿಯಲ್ಲಿ ಓದುತ್ತಿದ್ದ ಮಕ್ಕಳ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಮಕ್ಕಳು ಅಪ್ರಾಪ್ತರಾಗಿರುವುದರಿಂದ ಶಿಕ್ಷಕನ ವಿರುದ್ಧ ಪೋಸ್ಕೋ ಕಾಯ್ದೆಯಡಿ ಕೇಸ್ ದಾಖಲಾಗಿದ್ದು ಆತನ ಬಂಧನವಾಗಿದೆ. ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಎದುರಾಗಿದ್ದು, ಆತನ ವಿರುದ್ಧ ಕಠಿಣ ಕ್ರಮಕ್ಕೆ ಪೋಷಕರು ಆಗ್ರಹಿಸಿದ್ದಾರೆ. 

'ಅಣ್ಣ ನನ್ನ ಬಟ್ಟೆ ಬಿಚ್ಚಿದರು..' ಬದ್ಲಾಪುರದಲ್ಲಿ ಲೈಂಗಿಕ ಶೋಷಣೆಗೆ ಒಳಗಾದ ಬಾಲಕಿಯ ಮಾತು!

 

Latest Videos
Follow Us:
Download App:
  • android
  • ios