ಉದ್ಧವ್ ಠಾಕ್ರೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್| ಹೀರಾಮಯ್ ತಿವಾರಿ ಎಂಬಾತನ ತಲೆ ಬೋಳಿಸಿದ ಶಿವಸೇನೆ ಕಾರ್ಯಕರ್ತರು| ಜಾಮಿಯಾ ವಿವಿ ಗಲಾಟೆಯನ್ನು ಜಲಿಯನ್ ವಾಲಾಬಾಗ್ ಘಟನೆಗೆ ಹೋಲಿಸಿದ್ದ ಮಹಾ ಸಿಎಂ| ಉದ್ಧವ್ ಹೇಳಿಕೆ ವಿರೋಧಿಸಿ ಪೋಸ್ಟ್ ಮಾಡಿದ್ದ ಹೀರಾಮಯ್ ತಿವಾರಿ| ಹಲ್ಲೆ ಮಾಡಿ ಹೀರಾಮಯ್ ತಿವಾರಿ ತಲೆ ಬೋಳಿಸಿದ ಸೇನಾ ಕಾರ್ಯಕರ್ತರು|
ಮುಂಬೈ(ಡಿ.24): ಪಕ್ಷದ ನಾಯಕನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ವ್ಯಕ್ತಿ ವಿರುದ್ಧ ಶಿವಸೇನೆ ಕಾರ್ಯಕರ್ತರು ಗೂಂಡಾಗಿರಿ ನಡೆಸಿದ್ದಾರೆ.
ಮುಂಬೈ ನ ವಡಾಲಾ ನಿವಾಸಿ ಹೀರಾಮಯ್ ತಿವಾರಿ ಎಂಬುವರು ಮಹಾರಾಷ್ಟ್ರ ನೂತನ ಸಿಎಂ ಶಿವಸೇನಾ ನಾಯಕ ಉದ್ಧವ್ ಠಾಕ್ರೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಇದರಿಂದ ಕೆರಳಿದ ಶಿವಸೇನೆ ಕಾರ್ಯಕರ್ತರು ತಿವಾರಿ ತಲೆ ಬೋಳಿಸಿದ್ದಲ್ಲದೇ ವಿಡಿಯೋ ಕೂಡ ಮಾಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಹೀರಾಮಯ್ ತಿವಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಶಿವಸೇನೆಯ ಕಾರ್ಯಕರ್ತರು ನನ್ನನ್ನು ಥಳಿಸಿ, ನನ್ನ ತಲೆ ಬೋಳಿಸಿ ಅವಮಾನ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಉದ್ಧವ್ ಮೇಲಿನ ಬೇಸರ: ಶಿವಸೇನೆ ತ್ಯಜಿಸಿ ಬಿಜೆಪಿ ಸೇರಿದ 400 ಕಾರ್ಯಕರ್ತರು!
ಜಾಮಿಯಾ ವಿವಿ ಬಳಿ ನಡೆದ ಗಲಾಟೆಯನ್ನು ಜಲಿಯನ್ ವಾಲಾಬಾಗ್ ಘಟನೆಗೆ ಸಿಎಂ ಉದ್ಧವ್ ಠಾಕ್ರೆ ಹೋಲಿಸಿದ್ದರು. ಇದನ್ನು ವಿರೋಧಿಸಿ ತಿವಾರಿ ಉದ್ಧವ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
