ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮುಂಬೈನಲ್ಲಿ ಲ್ಯಾಂಡಿಂಗ್

ಇಂದು ವಿಮಾನ ಪ್ರಯಾಣದಲ್ಲಿ ವ್ಯತ್ಯಯ ಸಾಮಾನ್ಯವಾಗಿದೆ. ಇದರಿಂದ ಪ್ರಯಾಣಿಕರಿಗೆ ಅನಾನುಕೂಲತೆ ಉಂಟಾಗುತ್ತದೆ. ಲಂಡನ್‌ಗೆ ಟೇಕಾಫ್ ಆಗಿದ್ದ ಏರ್ ಇಂಡಿಯಾ ವಿಮಾನ ಮುಂಬೈನಲ್ಲಿ ಲ್ಯಾಂಡ್ ಆಗಿದೆ.

Mumbai London Air India flight returns due to technical snag mrq

ಮುಂಬೈ: ಲಂಡನ್‌ಗೆ ಟೇಕಾಫ್ ಆಗಿದ್ದ ಏರ್ ಇಂಡಿಯಾ ವಿಮಾನ ಮುಂಬೈನಲ್ಲಿ ಲ್ಯಾಂಡ್ ಆಗಿದೆ. ಟೇಕಾಫ್ ಆದ ಎರಡು ಗಂಟೆ ಬಳಿಕ ಏರ್ ಇಂಡಿಯಾ ಮುಂಬೈಗೆ ಬಂದಿಳಿದೆ. ಬುಧವಾರ ಬೆಳಗ್ಗೆ 8.30ಕ್ಕೆ  ಮುಂಬೈನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ಲೇನ್ ಲಂಡನ್‌ಗೆ ಟೇಕಾಫ್ ಆಗಿತ್ತು. ಟೇಕಾಫ್ ಆದ ಕೆಲ ಸಮಯದ ಬಳಿಕ ಪೈಲಟ್ ಸೂಚನೆ ಮೇರೆಗೆ ಪ್ರಯಾಣವನ್ನು ಮೊಟಕುಗೊಳಿಸಿ ಹಿಂದಿರುಗಿ ಬರಲಾಗಿದೆ. ಈ ವಿಮಾನದಲ್ಲಿ 354 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. 

ಪ್ರಯಾಣದ ವೇಳೆ ಕ್ಯಾಬಿನ್‌ನಲ್ಲಿ ಒತ್ತಡದ ಪರಿಸ್ಥಿತಿ ನಿರ್ಮಾಣವಾಗಿತ್ತು ಹಾಗೂ ತಾಂತ್ರಿಕ ಸಮಸ್ಯೆಗಳು ಕಂಡು ಬಂದಿವೆ. ಕೂಡಲೇ ಪೈಲಟ್ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿ ಮುಂಬೈಗೆ ಹಿಂದಿರುಗುವ ವಿಷಯವನ್ನು ರವಾನಿಸಿದ್ದಾರೆ. ಇದರ ಜೊತೆ ಪ್ರಯಾಣಿಕರಿಗೂ ಮುಂಬೈಗೆ ಮರಳುತ್ತಿರುವ ವಿಷಯವನ್ನು ಮುಂಚಿತವಾಗಿಯೇ ತಿಳಿಸಲಾಗಿತ್ತು. ಅದ್ರೂ ಕೆಲ ಪ್ರಯಾಣಿಕರು ಅನಾನುಕೂಲತೆ ಉಂಟಾದ ಹಿನ್ನೆಲೆ ಏರ್ ಇಂಡಿಯಾ ವಿರುದ್ಧ ಬೇಸರ ಹೊರ ಹಾಕಿದ್ದಾರೆ. ತಾಂತ್ರಿಕ ಸಮಸ್ಯೆಗಳು ಉಂಟಾದರೂ ಎಐ-129 ವಿಮಾನ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದ್ದು, ಯಾವುದೇ ಅಪಾಯಗಳಾಗಿಲ್ಲ ಎಂದು ವರದಿಯಾಗಿದೆ. 

ನನಗೆ ವಿಮಾನ ಹತ್ತಲು ಬಿಡಲಿಲ್ಲ, ಜೀವ ಉಳಿಸಿದ ವ್ಯಕ್ತಿ ಜೊತೆ ಜಗಳ ಮಾಡಿದ್ದೆ: ಬದುಕುಳಿದ ವ್ಯಕ್ತಿಯ ಭಾವುಕ ಮಾತು

ಈ ಕುರಿತು ಸುದ್ದಿಸಂಸ್ಥೆ ಜೊತೆ ಮಾತನಾಡಿರುವ ಏರ್ ಇಂಡಿಯಾ ವಕ್ತಾರರು, ಬೆಳಗ್ಗೆ 8.30ಕ್ಕೆ 354 ಪ್ರಯಾಣಿಕರನ್ನು ಹೊತ್ತು ಲಂಡನ್‌ಗೆ ಟೇಕಾಫ್ ಆಗಿದ್ದ ವಿಮಾನ 11.30ಕ್ಕೆ ಮರಳಿ ಬಂದಿದೆ. ಪ್ರಯಾಣಿಕರ ಸುರಕ್ಷತೆ ಹಿನ್ನೆಲೆ ಪ್ರಯಾಣವನ್ನು ಮೊಟಕುಗೊಳಿಸಲಾಗಿದ್ದು, ತಾಂತ್ರಿಕ ಸಮಸ್ಯೆಯ ಕುರಿತು ತಂತ್ರಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಟೆಕೆಟ್ ರದ್ದುಗೊಳಿಸಿದವರಿಗೆ ಪೂರ್ಣ ಹಣವನ್ನು ಹಿಂದಿರುಗಿಸಲಾಗಿದೆ. ಕೆಲ ಪ್ರಯಾಣಿಕರು ಮುಂದಿನ ವಿಮಾನ ಪ್ರಯಾಣಕ್ಕೆ ತಮ್ಮ ಟಿಕೆಟ್ ವರ್ಗಾವಣೆ ಮಾಡಿಕೊಂಡಿದ್ದರೆ ಎಂದು ಮಾಹಿತಿ ನೀಡಿದ್ದಾರೆ.

ವಿಮಾನದಲ್ಲಿ ಪಯಣಿಸುವಾಗ ಬಾಂಬು-ಗೀಂಬು ಅಂದ್ರೆ ನೀವು ಜೈಲಲ್ಲಿ ಕಂಬಿ ಎಣಿಸೋದು ಫಿಕ್ಸ್!

Latest Videos
Follow Us:
Download App:
  • android
  • ios