ಬ್ರೆಜಿಲ್ ವಿಮಾನ ಪತನದಲ್ಲಿ 61 ಜನರು ಬಲಿಯಾಗಿದ್ದಾರೆ. ಕೊನೆ ಕ್ಷಣದಲ್ಲಿ ವಿಮಾನ ತಪ್ಪಿಸಿಕೊಂಡಿದ್ದರಿಂದ ಬದುಕುಳಿದ ವ್ಯಕ್ತಿ ನೀಡಿದ ಸಂದರ್ಶನದ ವಿಡಿಯೋ ವೈರಲ್ ಆಗಿದೆ. ಬದುಕುಳಿದ ವ್ಯಕ್ತಿ ಭಾವುಕರಾಗಿ ಮಾತನಾಡಿದ್ದಾರೆ.
ಬ್ರೆಜಿಲ್: ಬ್ರೆಜಿಲ್‌ನ ಸಾವೋ ಪಾಲೋದಲ್ಲಿ ಪತನಗೊಂಡ ವಿಮಾನದಲ್ಲಿ ಹತ್ತಲು ಬಿಡದ ಭದ್ರತಾ ಸಿಬ್ಬಂದಿಗೆ ಪ್ರಯಾಣಿನೋರ್ವ ಧನ್ಯವಾದ ಹೇಳಿದ್ದಾರೆ. ಬ್ರೆಜಿಲ್‌ನ ಪ್ರಾದೇಶಿಕ ವಿಮಾನಯಾನ ಸಂಸ್ಥೆ ವೊಯಿಪಾಸ್‌ಗೆ ಸೇರಿದ ವಿಮಾನ ಪತನಗೊಂಡಿದ್ದು, ನಾಲ್ವರು ಸಿಬ್ಬಂದಿ ಸೇರಿದಂತೆ 61 ಜನರು ಮೃತರಾಗಿದ್ದಾರೆ. ಆಡ್ರಿನೋ ಆಸಿಸ್ ಎಂಬ ವ್ಯಕ್ತಿ ಇದೇ ವಿಮಾನದಲ್ಲಿ ಪ್ರಯಾಣ ಬೆಳೆಸಬೇಕಿತ್ತು. ವಿಮಾನ ಟೇಕಾಫ್ ಸಂದರ್ಭದಲ್ಲುಂಟಾದ ಸಣ್ಣ ಗೊಂದಲದಿಂದಾಗ ಏರ್‌ಪೋರ್ಟ್ ಸಿಬ್ಬಂದಿ ಆಡ್ರಿನೋ ಆಸಿಸ್ ಅವರಿಗೆ ತಡೆದಿದ್ದರು. ವಿಮಾನ ಪತನದ ಸುದ್ದಿ ತಿಳಿಯುತ್ತಿದ್ದಂತೆ ತನ್ನ ಜೀವವನ್ನು ಉಳಿಸಿದ ಸಿಬ್ಬಂದಿಗೆ ಆಡ್ರಿನೋ ಆಸಿಸ್ ಧನ್ಯವಾದ ತಿಳಿಸಿದ್ದಾರೆ.
ಬ್ರೆಜಿಲ್‌ನ ಟಿವಿ ಗ್ಲೋಬೋಗೆ ಆಡ್ರಿನೋ ಆಸಿಸ್ ಸಂದರ್ಶನ ನೀಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಸಂದರ್ಶನದ ಕೆಲ ಕ್ಲಿಪ್‌ಗಳನ್ನು ಜನರು ಶೇರ್ ಮಾಡಿಕೊಂಡು ನೀವು ಅದೃಷ್ಟವಂತ ಎಂದು ಕಮೆಂಟ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದ ಎಲ್ಲಾ ವೇದಿಕೆಯಲ್ಲಿ ಆಡ್ರಿನೋ ಆಸಿಸ್ ಸಂದರ್ಶನದ ವಿಡಿಯೋ ತುಣುಕುಗಳು ಹಂಚಿಕೆಯಾಗುತ್ತಿವೆ.
ತಡವಾಗಿ ಬಂದ ಹಿನ್ನೆಲೆ ಆಡ್ರಿನೋ ಆಸಿಸ್ ಅವರನ್ನು ಬೋರ್ಡಿಂಗ್ ಗೇಟ್‌ನಲ್ಲಿಯೇ ತಡೆಯಲಾಗಿತ್ತು. ವಿಮಾನದಲ್ಲಿ ಹತ್ತುವ ಅವಕಾಶ ನೀಡುವಂತೆ ಆಡ್ರಿನೋ ಅಲ್ಲಿಯ ಸಿಬ್ಬಂದಿ ಜೊತೆ ಜಗಳ ಸಹ ಮಾಡಿದ್ದರು. ಟೇಕಾಫ್ ಬಳಿಕ ವಿಮಾನ ಪತನವಾದ ವಿಷಯ ತಿಳಿಯುತ್ತಿದ್ದಂತೆ ತನ್ನನ್ನು ತಡೆದ ಸಿಬ್ಬಂದಿ ಬಳಿ ತೆರಳಿ ಅಪ್ಪಿಕೊಂಡೆ ಎಂದು ಆಡ್ರಿನೋ ಆಸಿಸ್ ಹೇಳಿಕೊಂಡಿದ್ದಾರೆ.
ಟೇಕಾಫ್ ಆಗ್ತಿದ್ದಂತೆ ಧರೆಗುರುಳಿದ ಶೌರ್ಯ ಏರ್‌ಲೈನ್ಸ್ ವಿಮಾನ; ಪತನದ ಭಯಾನಕ ವಿಡಿಯೋ ಸೆರೆ
ನಾನು ಏರ್‌ಪೋರ್ಟ್‌ಗೆ ತೆರಳಿದಾಗ ಲಾಥಮ್‌ಗೆ ತೆರಳುವ ವಿಮಾನ ಹತ್ತಬೇಕಿತ್ತು. ನಾನು ಚೆಕ್ ಇನ್ ಆಗಿ ಬೋರ್ಡಿಂಗ್ ಗೇಟ್ ನಲ್ಲಿ ಕುಳಿತು ಅನೌನ್ಸ್‌ಮೆಂಟ್‌ಗಾಗಿ ಕಾಯುತ್ತಿದ್ದೆ. ತುಂಬಾ ಸಮಯದ ಬಳಿಕ ತಾನು ಬೇರೆ ಸ್ಥಳದಲ್ಲಿ ಕುಳಿತಿರೋದು ನನಗೆ ಅರಿವಾಯ್ತು. ಕೂಡಲೇ ನಾನು ಬೋರ್ಡಿಂಗ್ ಗೇಟ್ ಬಳಿ ತೆರಳಿದಾಗ ತಡವಾದ ಹಿನ್ನೆಲೆ ನನ್ನನ್ನು ತಡೆಯಲಾಯ್ತು ಎಂದು ಅಡ್ರಿನೋ ಆಸಿಸ್ ಸಂದರ್ಶನದಲ್ಲಿ ನಡೆದ ಘಟನೆಯನ್ನು ವಿವರಿಸಿ ಭಾವುಕರಾಗಿದ್ದಾರೆ.
ಅಡ್ರಿನೋ ಆಸಿಸ್ ಜೊತೆಯಲ್ಲಿ ಹಲವು ಪ್ರಯಾಣಿಕರು ಬೋರ್ಡಿಂಗ್ ಪಾಯಿಂಟ್‌ನಲ್ಲಿ ಉಂಟಾದ ಗೊಂದಲದಿಂದ ವಿಮಾನ ತಪ್ಪಿಸಿಕೊಂಡಿದ್ದರು. ವಿಮಾನ ತಪ್ಪಿದ್ದರಿಂದ ಬೇಸರದಲ್ಲಿ ಮತ್ತೊಂದು ಫ್ಲೈಟ್ ಕಾಯುತ್ತಿದ್ದ ಸಂದರ್ಭದಲ್ಲಿಯೇ ಪತನದ ಸುದ್ದಿ ಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆ ತಮ್ಮ ಜೀವ ಹೇಗೆ ಉಳಿಯಿತು ಎಂಬುದರ ಬಗ್ಗೆ ಬರೆದುಕೊಂಡಿದ್ದಾರೆ.
ಬ್ರೆಜಿಲ್‌ನಲ್ಲಿ 61 ಜನರಿದ್ದ ವಿಮಾನ ಪತನ: ಎಲ್ಲರೂ ಸಾವು, ಕೊನೆಕ್ಷಣ ಕ್ಯಾಮರಾದಲ್ಲಿ ಸೆರೆ
