ಗಂಡು ಮಗು ಹೆರಲಿಲ್ಲ ಎಂದು ಅತ್ತೆ ಮನೆಯವರ ನಿರಂತರ ಕಿರುಕುಳದಿಂದ ಬೇಸತ್ತು 27 ವರ್ಷ ಮಹಿಳೆಯೊಬ್ಬರು ಸಾವಿನ ಹಾದಿ ಹಿಡಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ  ನವೀ ಮುಂಬೈನಲ್ಲಿ ನಡೆದಿದೆ.

ಮುಂಬೈ: ಗಂಡು ಮಗು ಹೆರಲಿಲ್ಲ ಎಂದು ಅತ್ತೆ ಮನೆಯವರ ನಿರಂತರ ಕಿರುಕುಳದಿಂದ ಬೇಸತ್ತು 27 ವರ್ಷ ಮಹಿಳೆಯೊಬ್ಬರು ಸಾವಿನ ಹಾದಿ ಹಿಡಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ನವೀ ಮುಂಬೈನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ಪತಿ, ಅತ್ತೆ ಮಾವ, ಹಾಗೂ ಮೂವರು ನಾದಿನಿಯರ ವಿರುದ್ಧ ಕಲಂಬೊಲಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ಗಂಡು ಮಗು ಹೆರಲಿಲ್ಲ ಎಂಬ ಕಾರಣಕ್ಕೆ ಮಹಿಳೆಗೆ ಅತ್ತೆ ಮನೆಯವರಿಂದ ನಿರಂತರ ಕಿರುಕುಳವಿತ್ತು ಎಂದು ತಿಳಿದು ಬಂದಿದೆ. ಮೃತ ಮಹಿಳೆಯನ್ನು ರಾಜೇಶ್ವರಿ ಎಂದು ಗುರುತಿಸಲಾಗಿದ್ದು, ಅಹ್ಮದ್‌ನಗರದ ನಿವಾಸಿಯಾದ ಈಕೆಯನ್ನು ಕಲಂಬೊಲಿ ನಿವಾಸಿಯಾದ ನಾಥ್ ಪವಾರ್ ಎಂಬಾತನಿಗೆ 2011ರಲ್ಲಿ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾಗಿ 2 ವರ್ಷ ಕಳೆದರು ಗಂಡು ಮಗುವಿಗೆ ಜನ್ಮ ನೀಡಿಲ್ಲ ಎಂಬ ಕಾರಣಕ್ಕೆ ಆಗಿನಿಂದಲೇ ರಾಜೇಶ್ವರಿಗೆ ಕಿರುಕುಳ ಶುರುವಾಗಿತ್ತು. ಇದರ ಜೊತೆಗೆ ತವರಿನಿಂದ 3 ಲಕ್ಷ ರೂಪಾಯಿ ಹಣ ತರುವಂತೆ ರಾಜೇಶ್ವರಿಗೆ ಅತ್ತೆ ಮನೆಯವರು ಕಿರುಕುಳ ನೀಡಲು ಶುರು ಮಾಡಿದ್ದರು. ಇತ್ತೀಚೆಗೆ ರಾಜೇಶ್ವರಿ ಗಂಡನ ಸೋದರಿಯರಾದ ಮಂಗಲ್ ಓತ್ರೆ, ಸವಿತ ಪಟ್ರೆ ಹಾಗೂ ಸುನಿತಾ ಧೋತ್ರೆ ಹಾಗೂ ಮಾವ ದಶರಥ್ ಕೂಡ ಕಳುಹಿಸಿದ್ದರು. ಇದರಿಂದ ಮಾನಸಿಕವಾಗಿ ತೀವ್ರ ಆಘಾತಕ್ಕೊಳಗಾಗಿದ್ದ ರಾಜೇಶ್ವರಿ ಈ ಆಘಾತಕಾರಿ ನಿರ್ಧಾರ ಕೈಗೊಂಡಿದ್ದಾರೆ. 

ಗುಂಡು ಹಾರಿಸಿಕೊಂಡು ಸಾವಿಗೆ ಶರಣಾದ ಡಿಐಜಿ ಸಿ ವಿಜಯ್‌ಕುಮಾರ್

ಜುಲೈ ಒಂದರಂದು ವಿಷ ಸೇವಿಸಿದ್ದ ಆಕೆಯನ್ನು ಮನೆಯವರೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವಿನ ಹಾದಿ ಹಿಡಿದಿದ್ದಾಳೆ. ಮಗಳ ಸಾವಿನ ನಂತರ ರಾಜೇಶ್ವರಿ ಪೋಷಕರು ಅತ್ತೆ ಮನೆಯವರ ವಿರುದ್ಧ ಕಲಂಬೊಲಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಅತ್ತೆ ಮನೆಯವರು ತಮ್ಮ ಮಗಳು ಆತ್ಮಹತ್ಯೆ ಹಾದಿ ಹಿಡಿಯಲು ಪ್ರೇರೆಪಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗ ಪೊಲೀಸರು ರಾಜೇಶ್ವರಿ ಪತಿ ನಾಥ್ ಪವಾರ್, ಮಾವ ದಶರಥ್ ಪವಾರ್, ನಾದಿನಿಯರಾದ ಮಂಗಲ್ ಧೋತ್ರೆ, ಸವಿತಾ ಪಾತ್ರೆ, ಸುನೀತಾ ಧೋತ್ರೆ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಹಫ್ತಾ ವಸೂಲಿಗೆ ಒತ್ತಡ: ಕಲಬುರಗಿಯಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳ ವಿರುದ್ಧ ಸಿಡಿದೆದ್ದ ಕಾನ್​ಸ್ಟೇಬಲ್​​ಗಳು