Hydrogen Balloon Blast: ಗೋರೆಗಾಂವ್ (ಪಶ್ಚಿಮ) ದಲ್ಲಿರುವ ಪೆಟ್ರೋಲ್ ಪಂಪ್‌ನ ಎದುರಿನ ಕಟ್ಟಡವಾದ ಅನ್ಮೋಲ್ ಟವರ್‌ನ ಲಿಫ್ಟ್‌ನಲ್ಲಿ ಹೈಡ್ರೋಜನ್ ಅನಿಲ ತುಂಬಿದ ಬಲೂನ್‌ಗಳ ಬೃಹತ್ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಮೂವರಿಗೆ ಸುಟ್ಟ ಗಾಯಗಳಾಗಿವೆ.
ಮುಂಬೈ (ಫೆ.4): ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಗೋರೆಗಾಂವ್ (ಪಶ್ಚಿಮ) ದಲ್ಲಿರುವ ಪೆಟ್ರೋಲ್ ಪಂಪ್ ಮುಂಭಾಗದಲ್ಲಿರುವ ಅನ್ಮೋಲ್ ಟವರ್ ಕಟ್ಟಡದ ಲಿಫ್ಟ್‌ನಲ್ಲಿ ಹೈಡ್ರೋಜನ್ ಅನಿಲ ತುಂಬಿದ ಬಲೂನ್ ಸ್ಫೋಟಗೊಂಡಿದೆ. ಸ್ಫೋಟದಲ್ಲಿ ಮೂವರಿಗೆ ಗಂಭೀರ ಪ್ರಮಾಣದ ಸುಟ್ಟ ಗಾಯಗಳಾಗಿವೆ. ಶಾಕಿಂಗ್ ಘಟನೆಯ ಇಡೀ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗಿದೆ. ಈ ಘಟನೆಯಲ್ಲಿ ಇಬ್ಬರು ಯುವಕರು ಹಾಗೂ ಒಬ್ಬ ಯುವರಿಗೆ ಸುಟ್ಟ ಗಾಯಗಳಾಗಿವೆ.
ಮಾಹಿತಿಯ ಪ್ರಕಾರ, ಈ ಘಟನೆ ಫೆಬ್ರವರಿ 2 ರಂದು ಮುಂಬೈನ ಗೋರೆಗಾಂವ್ ಪಶ್ಚಿಮದಲ್ಲಿ ನಡೆದಿದೆ. ಗೋರೆಗಾಂವ್ ಪಶ್ಚಿಮದಲ್ಲಿ ಅನ್ಮೋಲ್ ಟವರ್ ಕಟ್ಟಡದಲ್ಲಿ ಹುಟ್ಟುಹಬ್ಬದ ಪಾರ್ಟಿ ನಡೆಯುತ್ತಿತ್ತು, ಇದಕ್ಕಾಗಿ ಡೆಕೋರೇಷನ್ ಕೆಲಸ ನಡೆಯುತ್ತಿತ್ತು. ಈ ಹಂತದಲ್ಲಿ ಒಬ್ಬ ಮಹಿಳೆ ಲಿಫ್ಟ್ ಮೂಲಕ ಮೇಲೆ ಹೋಗುವ ಪ್ರಯತ್ನದಲ್ಲಿದ್ದಳು. ಆಗ ಡೆಕೋರೇನಷ್ ಮಾಡುತ್ತಿದ್ದ ಯುವಕ, ಹೈಡ್ರೋಜನ್ ತುಂಬಿದ್ದ ಬಲೂನ್‌ಗಳನ್ನು ತೆಗೆದುಕೊಂಡು ಲಿಫ್ಟ್ ಹತ್ತಲು ಬಂದಿದ್ದ. ಲಿಫ್ಟ್ ಹತ್ತಿದ ಕೆಲವೇ ಸೆಕೆಂಡ್‌ನಲ್ಲಿ ಅವನಲ್ಲಿದ್ದ ಎಲ್ಲಾ ಬಲೂನ್‌ಗಳ ಗುಂಪು ಏಕಾಏಕಿ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ.
ಅಪಾಯದಿಂದ ಪಾರಾದ ಮೂವರು
ಸ್ಫೋಟ ಎಷ್ಟು ಭೀಕರವಾಗಿತ್ತೆಂದರೆ ಲಿಫ್ಟ್ ತುಂಬಾ ಬೆಂಕಿ ಆವರಿಸಿತ್ತು. ಅದೃಷ್ಟವಶಾತ್, ಲಿಫ್ಟ್ ಬಾಗಿಲು ಮುಚ್ಚಿರಲಿಲ್ಲ, ಆದ್ದರಿಂದ ಲಿಫ್ಟ್‌ನಲ್ಲಿದ್ದ ಮೂವರು ಪಾರಾಗಿದ್ದಾರೆ. ಇಡೀ ಘಟನೆ ಲಿಫ್ಟ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್, ಲಿಫ್ಟ್‌ನಲ್ಲಿದ್ದ ಮೂವರು ಸಕಾಲದಲ್ಲಿ ಹೊರಬರಲು ಯಶಸ್ವಿಯಾಗಿದ್ದಾರೆ. ಆದರೂ, ಬೆಂಕಿಯಲ್ಲಿ ಮೂವರಿಗೂ ಸುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್, ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಲಿಲ್ಲ.
ಬಲೂನ್ ಸ್ಫೋಟಗೊಂಡಿದ್ದೇಕೆ?
ಹೈಡ್ರೋಜನ್ ಬಲೂನ್‌ಗಳು ಸ್ಫೋಟಗೊಳ್ಳಲು ಮುಖ್ಯ ಕಾರಣವೆಂದರೆ ಹೈಡ್ರೋಜನ್ ಹೆಚ್ಚು ದಹನಕಾರಿ ಅನಿಲ. ಇದು ಗಾಳಿಯಲ್ಲಿರುವ ಆಮ್ಲಜನಕಕ್ಕೆ ಶಾಖ ಅಥವಾ ಕಿಡಿಯಿಂದ ಒಡ್ಡಿಕೊಂಡಾಗ ತಕ್ಷಣವೇ ಉರಿಯುತ್ತದೆ. ಇದರ ನಂತರ ದೊಡ್ಡ ಸ್ಫೋಟ ಸಂಭವಿಸುತ್ತದೆ. ಹೈಡ್ರೋಜನ್ ಅನಿಲವು ಉರಿಯಲು ಬಹಳ ಕಡಿಮೆ ಶಕ್ತಿಯ ಅಗತ್ಯವಿರುತ್ತದೆ. ಬಲೂನ್ ಸಿಡಿದಾಗ, ಅದರಲ್ಲಿರುವ ಹೈಡ್ರೋಜನ್ ಗಾಳಿಯಲ್ಲಿರುವ ಆಮ್ಲಜನಕದೊಂದಿಗೆ ತಕ್ಷಣವೇ ಬೆರೆತು ಸ್ಫೋಟಕ ಮಿಶ್ರಣವು ರೂಪುಗೊಳ್ಳುತ್ತದೆ, ಇದು ದೊಡ್ಡ ಸ್ಫೋಟಕ್ಕೆ ಕಾರಣವಾಗುತ್ತದೆ. ಮೇಣದಬತ್ತಿಯಿಂದ ಬರುವ ಸಣ್ಣ ಕಿಡಿ, ಸಿಗರೇಟ್ ಕಿಡಿ ಅಥವಾ ಘರ್ಷಣೆಯು ಹೈಡ್ರೋಜನ್ ಅನ್ನು ಹೊತ್ತಿಸಲು ಸಾಕು. ಆದ್ದರಿಂದ, ಈ ಬಲೂನ್‌ಗಳನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಬೇಕಾಗುತ್ತದೆ.


