ಪೇಪರ್‌ಲೆಸ್‌ ಟಿಕೆಟ್‌ ವ್ಯವಸ್ಥೆ: ಆ.1ರಿಂದ ಸುರಕ್ಷಿತ ಚಿತ್ರ ಪ್ರದರ್ಶನ..?

ಕೊರೋನಾ ಅನ್‌ಲಾಕ್‌ 3ಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ದೇಶಾದ್ಯಂತ ಇರುವ ಮಲ್ಟಿಪ್ಲೆಕ್ಸ್‌ಗಳು ಕಳೆದ 4 ತಿಂಗಳನಿಂದ ಸ್ಥಗಿತಗೊಂಡಿರುವ ಸಿನಿಮಾ ಮಂದಿರಗಳನ್ನು ಪುನಾರಂಭಿಸಲು ಸಿದ್ಧತೆ ಆರಂಭಿಸಿವೆ.

Multiplex writes to central govt requesting permission to reopen theater from August 1st

ನವದೆಹಲಿ(ಜು.24): ಕೊರೋನಾ ಅನ್‌ಲಾಕ್‌ 3ಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ದೇಶಾದ್ಯಂತ ಇರುವ ಮಲ್ಟಿಪ್ಲೆಕ್ಸ್‌ಗಳು ಕಳೆದ 4 ತಿಂಗಳನಿಂದ ಸ್ಥಗಿತಗೊಂಡಿರುವ ಸಿನಿಮಾ ಮಂದಿರಗಳನ್ನು ಪುನಾರಂಭಿಸಲು ಸಿದ್ಧತೆ ಆರಂಭಿಸಿವೆ.

ಒಂದು ವೇಳೆ ಪುನಾರಂಭಕ್ಕೆ ಅನುಮತಿ ಸಿಕ್ಕರೆ ಯಾವ್ಯಾವ ರೀತಿಯಲ್ಲಿ ಸಿನಿಮಾ ಹಾಲ್‌ಗಳಲ್ಲಿ ಕೋವಿಡ್‌ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗುವುದು ಎಂಬ ಮಾಹಿತಿಯನ್ನು ಅವು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿವೆ.

ಬೆಂಗಳೂರಿನಲ್ಲಿ ಡ್ರೈವ್‌ ಇನ್‌ ಥೇಟರ್‌;ನಿಮ್ಮ ಕಾರಿನಲ್ಲೇ ಕೂತು, ನೀವು ಬಯಸಿದ ಚಿತ್ರ ನೋಡಿ!

ಆಗಸ್ಟ್‌ 1ರಿಂದ ಆರಂಭವಾಗಲಿರುವ ಅನ್‌ಲಾಕ್‌ 3 ವೇಳೆ ಸಿನಿಮಾ ಮಂದಿರಗಳ ಪುನಾರಂಭಕ್ಕೆ, ಪರಿಸ್ಥಿತಿ ನೋಡಿಕೊಂಡು ಅನುಮತಿ ನೀಡುವ ಬಗ್ಗೆ ಈ ಹಿಂದೆಯೇ ಕೇಂದ್ರ ಸರ್ಕಾರ ಸುಳಿವು ನೀಡಿತ್ತು.

ಈ ಹಿನ್ನೆಲೆಯಲ್ಲಿ ಒಂದು ವೇಳೆ ಸಿನಿಮಾ ಹಾಲ್‌ ಪುನಾರಂಭಕ್ಕೆ ಅವಕಾಶ ಸಿಕ್ಕರೆ ಯಾವ್ಯಾವ ಸುರಕ್ಷತಾ ಕ್ರಮ ಕೈಗೊಳ್ಳಲಾಗುವುದು ಎಂಬ ಮಾಹಿತಿಯನ್ನು ‘ಭಾರತೀಯ ಮಲ್ಟಿಪ್ಲೆಕ್ಸ್‌ ಸಂಘಟನೆ’ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಪ್ರಧಾನಿ ಕಚೇರಿ ಮತ್ತು ನೀತಿ ಆಯೋಗಕ್ಕೆ ಸಲ್ಲಿಕೆ ಮಾಡಿವೆ. ಜೊತೆಗೆ ಕೇಂದ್ರದಿಂದ ಸಕಾರಾತ್ಮಕ ಉತ್ತರದ ನಿರೀಕ್ಷೆಯಲ್ಲಿ ಇರುವುದಾಗಿ ತಿಳಿಸಿವೆ.

ಚಿತ್ರಮಂದಿರಗಳು ಮತ್ತೆ ಹೌಸ್‌ಫುಲ್‌ ಆಗುತ್ತವೆ; ಭರವಸೆ ಇಟ್ಟುಕೊಂಡಿರುವ ಚಿತ್ರೋದ್ಯಮ!

ಭಾರತದ ಸಿನಿಮಾ ರಂಗ ವಾರ್ಷಿಕ 12000 ಕೋಟಿ ರು. ವಹಿವಾಟು ನಡೆಸುತ್ತಿದ್ದು, ಕೊರೋನಾ ಲಾಕ್ಡೌನ್‌ ಹಿನ್ನೆಲೆಯಲ್ಲಿ ಮಾ.25ರಿಂದ ತನ್ನ ಚಟುವಟಿಕೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ.

Latest Videos
Follow Us:
Download App:
  • android
  • ios