ಮಹಾಶಿವರಾತ್ರಿ ಹಬ್ಬದ ಹಿನ್ನಲೆಯಲ್ಲಿ ಉದ್ಯಮಿ ಮುಖೇಶ್ ಅಂಬಾನಿ ಗುಜರಾತ್‌ನ ಸೋಮನಾಥ್ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ವೇಳೇ ದೇವಸ್ಥಾನಕ್ಕೆ 1.51 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.

ಗುಜರಾತ್(ಫೆ.18): ದೇಶದೆಲ್ಲೆಡೆ ಮಹಾಶಿವರಾತ್ರಿ ಆಚರಣೆ ನಡೆಯುತ್ತಿದೆ. ಶಿವನ ಸ್ತ್ರೋತ್ರ,ಭಜನೆ ಮೂಲಕ ಶಿವರಾತ್ರಿ ಆಚರಣೆ ನಡೆಯುತ್ತಿದೆ. ಪವಿತ್ರ ಹಬ್ಬದ ಪ್ರಯುಕ್ತ ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಗುಜರಾತ್‌ನ ಸೋಮನಾಥ್ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಪುತ್ರ ಅಕಾಶ್ ಜೊತೆ ಮಂದಿರಕ್ಕೆ ಭೇಟಿ ನೀಡಿದ ಮುಖೇಶ್ ಅಂಬಾನಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸೋಮನಾಥ ದೇವಾಲದ ಟ್ರಸ್ಟ್‌ಗೆ ಬರೋಬ್ಬರಿ 1.51 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.

ಮುಖೇಶ್ ಅಂಬಾನಿ ಹಾಗೂ ಬಳಗವನ್ನು ಸೋಮನಾಥ್ ದೇಗುಲದ ಟ್ರಸ್ಟ್ ಮುಖ್ಯಸ್ಥ ಪಿಕೆ ಲಹಿರಿ, ಕಾರ್ಯದರ್ಶಿ ಯೋಗೇಂದ್ರ ಭಾಯಿ ದೇಸಾಯಿ ಸ್ವಾಗತಕೋರಿದರು.ಬಳಿಕ ಸೋಮನಾಥ ಮಂದಿರ ಪ್ರವೇಶಿಸಿ ಪೂಜೆ ಸಲ್ಲಿಸಿದರು. ಸೋಮನಾಥ್ ಮಂದಿರದಲ್ಲಿ ಕೆಲ ಹೊತ್ತು ಕುಳಿತು ಭಕ್ತಿಯಿಂದ ಶಿವನ ಆರಾಧನೆ ಮಾಡಿದರು. ಮುಖೇಶ್ ಅಂಬಾನಿ ಹಾಗೂ ಆಕಾಶ್ ಅಂಬಾನಿ ವಿಶೇಷ ಪೂಜೆ ನೆರವೇರಿಸಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Scroll to load tweet…

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಮುಖೇಶ್ ಅಂಬಾನಿ ಆಂಧ್ರ ಪ್ರದೇಶದ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಪುತ್ರ ಅನಂತ್ ಅಂಬಾನಿ ಹಾಗೂ ಅನಂತ್ ಪತ್ನಿ ರಾಧಿಕ ಮರ್ಚೆಂಟ್, ರಿಯಲನ್ಸ್ ನಿರ್ದೇಶಕ ಮನೋಜ್ ಮೋದಿ ಸೇರಿದಂತೆ ಕೆಲ ಕುಟುಂಬಸ್ಥರು ಭೇಟಿ ನೀಡಿದ್ದರು. ವೆಂಕಟೇಶ್ವರ ದೇಗುದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು.