Asianet Suvarna News Asianet Suvarna News

Road Renamed: ಆಗ್ರಾದ ಮೊಘಲ್‌ ರಸ್ತೆ ಇನ್ಮುಂದೆ ಮಹಾರಾಜ ಅಗ್ರಸೇನ ರಸ್ತೆ

ಆಗ್ರಾ: ಉತ್ತರಪ್ರದೇಶದ ಆಗ್ರಾದಲ್ಲಿರುವ ಮೊಘಲ್‌ ರಸ್ತೆ(Mughal Road)ಯ ಹೆಸರು ಬದಲಾಯಿಸಲಾಗಿದೆ. ಇನ್ಮುಂದೆ ಮೊಘಲ್‌ ರಸ್ತೆ ಮಹಾರಾಜ ಅಗ್ರಸೇನ ರಸ್ತೆ(Maharaja Agrasen Road) ಎಂದು ಬದಲಾಗಲಿದೆ. ಮಹಾರಾಜ ಅಗ್ರಸೇನ ಪುರಾತನ ಅಗ್ರೋಹ(Agroha)ದ ರಾಜನಾಗಿದ್ದ, ಈ ಅಗ್ರೋಹ ನಗರವೂ ವ್ಯಾಪಾರಕ್ಕೆ ಹೆಸರುವಾಸಿಯಾಗಿದ್ದು, ವ್ಯಾಪಾರಿಗಳ ನಗರ ಎಂದೇ ಖ್ಯಾತಿ ಗಳಿಸಿತ್ತು.

Mughal Road name changed as Maharaja Agrasen Road in Agra
Author
Uttar Pradesh, First Published Nov 26, 2021, 12:28 PM IST

ಮುಂದಿನ ಪೀಳಿಗೆಯೂ ನಮ್ಮ ಹಳೆಯ ತಲೆಮಾರಿನ ಪ್ರಮುಖ ವ್ಯಕ್ತಿಗಳಿಂದ ಸ್ಪೂರ್ತಿ ಪಡೆಯಬೇಕಾಗಿದೆ ಈ ಹಿನ್ನೆಲೆಯಲ್ಲಿ ಈ ರಸ್ತೆಗೆ ಮಹಾರಾಜ ಅಗ್ರಸೇನನ ಹೆಸರನ್ನು ಇಡಲಾಗುತ್ತಿದೆ ಎಂದು ಆಗ್ರಾದ ಮೇಯರ್‌(Agra Mayor)ನವೀನ್‌ ಜೈನ್‌ ಹೇಳಿದ್ದಾರೆ. ಆಗ್ರಾದ ಮೊಘಲ್‌ ರಸ್ತೆಯನ್ನು ಮಹಾರಾಜ ಅಗ್ರಸೇನಾ ರಸ್ತೆ ಎಂದು ಮರುನಾಮಕರಣ ಮಾಡಲಾಗುತ್ತಿದೆ. ಮಹಾರಾಜ ಅಗ್ರಸೇನನಿಗೆ  ಕಮಲಾ ನಗರ(Kamla Nagar), ಗಾಂಧಿನಗರ  ವಿಜಯನಗರ ಕಾಲೋನಿ(Vijaynagar Colony), ನ್ಯೂ ಆಗ್ರಾ ಜೋನ್‌, ಬಲ್ಕೇಶ್ವರ(Balkeshwar) ಪ್ರದೇಶಗಳಲ್ಲಿ ಸಾವಿರಾರು ಅಭಿಮಾನಿಗಳಿದ್ದಾರೆ. ಅವರೆಲ್ಲರೂ  ರಸ್ತೆ ಮರುನಾಮಕರಣದ ಕಾರ್ಯಕ್ರಮಕ್ಕೆ ಆಗಮಿಸಿ ಮಹಾರಾಜ ಅಗ್ರಸೇನನಿಗೆ ತಮ್ಮ ಗೌರವವನ್ನು ಸಲ್ಲಿಸಲಿದ್ದಾರೆ ಎಂದು ಮೇಯರ್‌ ನವೀನ್‌ ಜೈನ್‌ ಇದೇ ಸಂದರ್ಭದಲ್ಲಿ ಹೇಳಿದರು. 

ಇದಕ್ಕೂ ಮೊದಲು ಸುಲ್ತಾನ್‌ಗಂಜ್‌ ಪುಲಿಯಾ(Sultanganj puliya) ರಸ್ತೆಗೆ ದಿವಂಗತ ಸತ್ಯ ಪ್ರಕಾಶ್‌ ವಿಕಲ್‌(Satya Prakash Vikal) ಅವರ ಹೆಸರನ್ನು ಮರು ನಾಮಕರಣ ಮಾಡಲಾಗಿತ್ತು. ಹಾಗೆಯೇ ಆಗ್ರಾದಲ್ಲಿರು  ಘಾಟಿಯಾ ಅಜಮ್‌ ಖಾನ್‌ ರಸ್ತೆ(Azam Khan road)ಗೆ ವಿಶ್ವ ಹಿಂದೂ ಪರಿಷತ್‌ನ ಮುಖಂಡರಾಗಿದ್ದ ದಿವಂಗತ ಅಶೋಕ್‌ ಸಿಂಘಾಲ್‌(Ashok Singhal) ಅವರ ಹೆಸರನ್ನು ಮರು ನಾಮಕರಣ ಮಾಡಲಾಗಿದೆ ಎಂದು ಮೇಯರ್‌ ನವೀನ್‌ ಜೈನ್‌ ಇದೇ ಸಂದರ್ಭದಲ್ಲಿ ತಿಳಿಸಿದರು. 

ಸದ್ದಿಲ್ಲದೇ ನಡೆಯಿತಾ ಬೆಂಗಳೂರು ರಸ್ತೆಗೆ SPB ಹೆಸರಿನ ನಾಮಕರಣ

ಅಲ್ಲದೇ ಮಹಾನ್‌ ನಾಯಕರ ಪ್ರತಿಮೆಗಳನ್ನು  ಎರಡು ಭಾಗಗಳಲ್ಲಿ ಸ್ಥಾಪಿಸಲಾಗುವುದು.  ಮಹಾನ್‌ ಯೋಧ  ಗೋಕುಲ್‌ ಜಾಟ್‌( Gokula Jat) ಅವರ ಪ್ರತಿಮೆಯನ್ನು ವಿಕ್ಟೋರಿಯಾ ಪಾರ್ಕ್‌ನ ಮುಂಭಾಗದಲ್ಲಿ ಸ್ಥಾಪಿಸಲಾಗುವುದು ಹಾಗೆಯೇ ಮಹಾರಾಣಾ ಪ್ರತಾಪ್‌(Maharana Pratap) ಅವರ ಪ್ರತಿಮೆಯನ್ನು ಯಮುನಾ ತೀರದ ರಸ್ತೆಯಲ್ಲಿ ನಿರ್ಮಾಣ ಮಾಡಲಾಗುವುದು. ಈ ಪ್ರತಿಮೆಗಳ ಉದ್ಘಾಟನೆ ಮಾಡುವಂತೆ ನಾವು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌(Yogi Adityanath) ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಷಾ( Amit Shah) ಅವರನ್ನು ಕೇಳಿದ್ದೇವೆ ಎಂದು ಅವರು ತಿಳಿಸಿದರು.

ಮೇಜರ್ ಅಕ್ಷಯ್ ಗಿರೀಶ್ ರಸ್ತೆ ಲೋಕಾರ್ಪಣೆ

ದೇಶದ ಪ್ರಮುಖ ನಾಯಕರ ಬಗ್ಗೆ ಮುಂಬರುವ ಪೀಳಿಗೆಯೂ ಅರಿತುಕೊಳ್ಳಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜೈನ್‌ ಹೇಳಿದರು. ಕೇಂದ್ರದ ಬಿಜೆಪಿ ಸರ್ಕಾರ ದೆಹಲಿಯಲ್ಲಿಯೂ ಅನೇಕ ರಸ್ತೆಗಳಿಗೆ ಮರು ನಾಮಕರಣ ಮಾಡಿದೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿಯೂ ಕೂಡ ಹಲವು ರಸ್ತೆಗಳ ಹೆಸರು ಬದಲಾಯಿಸಲಾಗಿದೆ.  ಹಳೆಯ ರಸ್ತೆಗಳಿಗೆ ಮರು ನಾಮಕರಣ ಮಾಡುತ್ತಿರುವ ಸರ್ಕಾರದ ಕ್ರಮಕ್ಕೆ ಈ ಹಿಂದೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

Follow Us:
Download App:
  • android
  • ios