ತಮಿಳುನಾಡು ಸರ್ಕಾರವು ರಾಜ್ಯಾದ್ಯಂತ ಸಬ್ಸಿಡಿ ದರದಲ್ಲಿ ಔಷಧಿಗಳನ್ನು ಒದಗಿಸಲು 'ಮುದಲ್ವಾರ್ ಮರುಂಧಗಂಗಲ್' ಔಷಧ ಅಂಗಡಿಗಳನ್ನು ಪ್ರಾರಂಭಿಸಿದೆ. ಈ ಔಷಧಾಲಯಗಳು ಸಾರ್ವಜನಿಕರಿಗೆ ಶೇ.75ರವರೆಗೆ ರಿಯಾಯ್ತಿ ದರದಲ್ಲಿ ಔಷಧಿಗಳನ್ನು ಪೂರೈಸುತ್ತವೆ.
ಚೆನ್ನೈ (ಫೆ.25) : ಮೋದಿ ಸರ್ಕಾರದ ಜನೌಷಧಿ ರೀತಿಯಲ್ಲಿ ತಮಿಳುನಾಡಿನಾದ್ಯಂತ ಸಬ್ಸಿಡಿ ದರದಲ್ಲಿ ಜನರಿಗೆ ಔಷಧಿಗಳನ್ನು ಒದಗಿಸುವ ಸುಮಾರು 1 ಸಾವಿರ 'ಮುದಲ್ವಾರ್ ಮರುಂಧಗಂಗಲ್' ಔಷಧ ಅಂಗಡಿಗಳಿಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸೋಮವಾರ ಇವನ್ನು ಉದ್ಘಾಟಿಸಿದರು. ಈ ಔಷಧಾಲಯಗಳು ಸಾರ್ವಜನಿಕರಿಗೆ ಶೇ.75ರವರೆಗೆ ರಿಯಾಯ್ತಿ ದರದಲ್ಲಿ ಔಷಧಿಗಳನ್ನು ಪೂರೈಸುತ್ತವೆ. ಅಲ್ಲದೆ, ಸುಮಾರು 1,500 ಬಿ.ಫಾರ್ಮ, ಡಿ.ಫಾರ್ಮ ಪದವಿ, ಡಿಪ್ಲೊಮಾ ಮಾಡಿದವರಿಗೆ ಉದ್ಯೋಗಾವಕಾಶವನ್ನೂ ಒದಗಿಸಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ದೀರ್ಘಕಾಲದ ವರೆಗೆ ಔಷಧಗಳ ಮೇಲೆ ಅವಲಂಬಿತರಾಗಿರುವ ಅನೇಕರಿಗೆ ಈ ಔಷಧಾಲಯಗಳಿಂದ ಅನುಕೂಲವಾಗಲಿದೆ. ಅವರಿಗೆ ಆಗುತ್ತಿದ್ದ ಹಣಕಾಸಿನ ಹೊರೆಯೂ ಕಡಿಮೆಯಾಗಲಿದೆ. ಇಂಥ ಮೆಡಿಕಲ್ ಶಾಪ್ ನಡೆಸಲು ಫಾರ್ಮಸಿಸ್ಟ್‌ಗಳು ಹಾಗೂ ಕೋ-ಆಪರೇಟಿವ್ ಸೊಸೈಟಿಗಳಿಗೆ ಸರ್ಕಾರದಿಂದ ಸಬ್ಸಿಡಿ ಮತ್ತು ಹಣಕಾಸು ನೆರವು ನೀಡಲಾಗಿದೆ. ಉದ್ಯಮಿಗಳಿಗೆ 3 ಲಕ್ಷ ಹಾಗೂ ಕೋ-ಆಪರೇಟಿವ್ ಸೊಸೈಟಿಗಳಿಗೆ 2 ಲಕ್ಷ ಸಬ್ಸಿಡಿ ನೀಡಲಾಗಿದೆ. ಈ ಔಷಧಾಲಯಗಳಲ್ಲಿ ಮೂರು ತಿಂಗಳಿಗಾಗುವಷ್ಟು ಔಷಧಗಳ ದಾಸ್ತಾನು ಇರುತ್ತದೆ. ಅಲ್ಲದೆ, ರಾಜ್ಯದ ಎಲ್ಲ 38 ಜಿಲ್ಲೆಗಳಲ್ಲೂ ಔಷಧ ಉಗ್ರಾಣಗಳನ್ನು ಸ್ಥಾಪಿಸಲಾಗಿದೆ ಎಂದು ಸ್ಟಾಲಿನ್ ಮಾಹಿತಿ ನೀಡಿದರು.
ಬೆಂಗಳೂರಲ್ಲಿ ಜನೌಷಧಿ ಮಳಿಗೆ ಆರಂಭಿಸಲು ನಿರುದ್ಯೋಗಿಗಳಿಂದ ಬಿಬಿಎಂಪಿ ಅರ್ಜಿ ಆಹ್ವಾನ
ಜನೌಷಧಿಗೂ, ತ.ನಾಡು ಫಾರ್ಮಸಿಗೂ ವ್ಯತ್ಯಾಸವೇನು?: ಜನೌಷಧಿ ಕೇಂದ್ರಗಳಲ್ಲಿ ಪ್ರಮುಖ ಔಷಧಗಳ ಜನರಿಕ್ ಬ್ರಾಂಡ್ ಔಷಧಿಗಳು ಕಡಿಮೆ ದರದಲ್ಲಿ ಸಿಗುತ್ತಿದ್ದರೆ, ಇಲ್ಲಿ ಎಲ್ಲಾ ರೀತಿಯ ಔಷಧಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ.
ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ' ಜನ ಔಷಧಿ' ಕೇಂದ್ರ ನಿಷೇಧ; ಸಂಸದ ತೇಜಸ್ವಿ ಸೂರ್ಯ ಆಕ್ರೋಶ
