Asianet Suvarna News Asianet Suvarna News

Sunanda Pushkar Death: ಶಶಿ ತರೂರ್‌ಗೆ ಮತ್ತೆ 'ಸುನಂದಾ' ಉರುಳು, ಹೈಕೋರ್ಟ್‌ಗೆ ದೆಹಲಿ ಪೊಲೀಸರ ಅರ್ಜಿ!

ತಿರುವನಂತಪುರ ಸಂಸದ ಶಶಿ ತರೂರ್‌ ಅವರ ಪತ್ನಿಯಾಗಿದ್ದ ಸುನಂದಾ ಪುಷ್ಕರ್‌, 2014ರ ಜನವರಿ 17 ರಂದು ನವದೆಹಲಿಯ ಐಷಾರಾಮಿ ಲೀಲಾ ಪ್ಯಾಲೇಸ್‌ನ ಕೋಣೆಯಲ್ಲಿಅನುಮಾನಾಸ್ಪದವಾಗಿ ಸಾವು ಕಂಡಿದ್ದರು. ಆ ಬಳಿಕ ದೆಹಲಿ ಪೊಲೀಸ್‌ ಶವ ಸಿಕ್ಕಿದ್ದ ಕೋಣೆಯಲ್ಲಿ ಸೀಲ್‌ ಮಾಡಿ ಎಫ್‌ಐಆರ್‌ ದಾಖಲು ಮಾಡಿದ್ದರು.

MP Shashi Tharoor release in Sunanda Pushkar death case Delhi Police reaches High Court san
Author
First Published Dec 1, 2022, 1:20 PM IST

ನವದೆಹಲಿ (ಡಿ.1): ಅಂದಾಜು 8 ವರ್ಷದ ಹಿಂದೆ ನವದೆಹಲಿಯ ಲೀಲಾ ಪ್ಯಾಲೇಸ್‌ ಹೋಟೆಲ್‌ನ ಕೋಣೆಯಲ್ಲಿ ಅನುಮಾನಾಸ್ಪದವಾಗಿ ಸಂಸದ ಶಶಿ ತರೂರ್‌ ಅವರ ಪತ್ನಿ ಸುನಂದಾ ಪುಷ್ಕರ್‌ ಸಾವು ಕಂಡಿದ್ದರು. ಈ ವಿಚಾರವಾಗಿ ಸುದೀರ್ಘ ವಿಚಾರಣೆ ನಡೆದ ಬಳಿಕ ವಿಚಾರಣಾ ನ್ಯಾಯಾಲಯ ಶಶಿ ತರೂರ್‌ಗೆ ಕ್ಲೀನ್‌ ಚಿಟ್‌ ನೀಡಲಾಗಿತ್ತು. ಕಳೆದ ಆಗಸ್ಟ್‌ನಲ್ಲಿ ನೀಡಿದ್ದ ಕ್ಲೀನ್‌ಚಿಟ್‌ಅನ್ನು ಪ್ರಶ್ನಿಸಿ ದೆಹಲಿ ಪೊಲೀಸ್‌ ಗುರುವಾರ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದೆ. ನ್ಯಾಯಮೂರ್ತಿ ದಿನೇಶ್‌ ಕುಮಾರ್‌ ಶರ್ಮ ಅವರ ಪೀಠದ ಮುಂದೆ ಈ ಅರ್ಜಿ ಹಾಕಲಾಗಿದೆ. 2014ರ ಜನವರಿ 17 ರಂದು ಸುನಂದಾ ಪುಷ್ಕರ್‌ ಐಷಾರಾಮಿ ಹೋಟೆಲ್‌ನಲ್ಲಿ ಸಾವು ಕಂಡಿದ್ದರು. ಈ ಸಾವಿಗೆ ಶಶಿ ತರೂರ್‌ ಅವರೇ ಕಾರಣ ಎಂದು ಆರೋಪಿಸಿ ಅವರ ಕುರಿತು ತನಿಖೆ ನಡೆಸಲಾಗಿತ್ತು. ಆಗಸ್ಟ್ 2021 ರಲ್ಲಿ, ಪಟಿಯಾಲಾ ವಿಚಾರಣಾ ನ್ಯಾಯಾಲಯವು ತರೂರ್ ಅವರನ್ನು ಅವರ ಪತ್ನಿಯ ಆತ್ಮಹತ್ಯೆಗೆ ಪ್ರಚೋದನೆಯ ಆರೋಪದಿಂದ ಬಿಡುಗಡೆ ಮಾಡಿತ್ತು. ಸಂಸದರೇ ಆತ್ಮಹತ್ಯೆಗೆ ಪ್ರಚೋದನೆ ಮಾಡಿದ್ದಾರೆ ಎನ್ನುವುದಕ್ಕೆ ಯಾವುದೇ ಸೂಕ್ತ ಸಾಕ್ಷವಿಲ್ಲ ಎಂದು ಹೇಳಿತ್ತು. ಪಟಿಯಾಲಾ ಹೌಸ್‌ ಕೋರ್ಟ್‌ನ ನಿರ್ಧಾರ ಪ್ರಶ್ನಿಸಿ ದೆಹಲಿ ಪೊಲೀಸ್‌ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ದೆಹಲಿ ಹೈಕೋರ್ಟ್‌ ಈ ವಿಚಾರವಾಗಿ ಶಶಿ ತರೂರ್‌ ಅವರಿಗೆ ನೋಟಿಸ್‌ ಜಾರಿ ಮಾಡಿದೆ.


ಪ್ರಾಸಿಕ್ಯೂಷನ್ ಸಿದ್ಧಪಡಿಸಿದ ಸಾಕ್ಷ್ಯವು "ಅವರೇ ತಪ್ಪಿತಸ್ಥ ಎಂದು ಹೇಳಲು ಸಂಪೂರ್ಣವಾಗಿ ಸಾಕಾಗುವುದುಲ್ಲ" ಎಂದು ನ್ಯಾಯಾಲಯವು ಹೇಳಿತ್ತು. ಆ ಕಾರಣಕ್ಕಾಗಿ ಅವರಿಗೆ ಕೇಸ್‌ನಲ್ಲಿ ಕ್ಲೀನ್‌ ಚಿಟ್‌ ನೀಡಿತ್ತು. ಸುನಂದಾ ಪುಷ್ಕರ್‌ ಅವರಿಗೆ ಮಾನಸಿಕವಾಗಿ ಶಶಿ ತರೂರ್‌ ಕ್ರೌರ್ಯ ಮಾಡಿದ್ದರು. ಇದರಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು ಇದರಿಂದಾಗಿ ಆಕೆಯ ಸಾವಿಗೆ ಶಶಿ ತರೂರ್‌ ಅವರೇ ಕಾರಣ ಎಂದು ದೆಹಲಿ ಪೊಲೀಸ್‌ ವಾದ ಮಾಡಿತ್ತು.

ಪಾಕಿಸ್ತಾನಿ ಪತ್ರಕರ್ತೆ ಮೆಹರ್ ತರಾರ್ ಅವರೊಂದಿಗೆ ತರೂರ್ ಅವರ ಆಪಾದಿತ ಸಂಬಂಧದಿಂದಾಗಿ ಸುನಂದಾ ಪುಷ್ಕರ್‌ ಅವರಿಗೆ ತಮಗೆ ಮೋಸವಾದಂತೆ ಅನಿಸಿತ್ತು. ಮಾಜಿ ಸಚಿವರಾಗಿರುವ ಶಶಿ ತರೂರ್‌ ಇದೇ ಕಾರಣಕ್ಕಾಗಿ ಸುನಂದಾ ಪುಷ್ಕರ್‌ ಅವರ ಆತ್ಮಹತ್ಯೆಗೆ ಪ್ರಚೋದನೆ ಮಾಡಿದ್ದರು ಎಂದು ತನಿಖೆ ಸಂಸ್ಥೆ ಕೂಡ ವಾದ ಮಾಡಿತ್ತು. ಯಾವುದೇ ವೈದ್ಯಕೀಯ ಮಂಡಳಿಗಳು ಆತ್ಮಹತ್ಯೆಯಿಂದ ಸಾವು ಸಂಭವಿಸಿದೆ ಎಂದು ತೀರ್ಮಾನಿಸಿಲ್ಲ ಎಂದೂ ಕೂಡ ಹೇಳಿತ್ತು.

'ಒಂದು ಜೀವ ಹೋಗಿದೆ ಎನ್ನುವುದನ್ನು ಯಾವುದೇ ಅನುಮಾನವಿಲ್ಲ. ಆದರೆ, ತನಿಖಾ ಸಂಸ್ಥೆ ಮಾಡಿರುವ ಆರೋಪಗಳನ್ನು ದೃಢಪಡಿಸಲು ಯಾವುದೇ ಸಾಕ್ಷಿಗಳಿಲ್ಲ. ಊಹಾಪೋಹಗಳ ಆಧಾರದಲ್ಲಿ ಅವರೇ ಅಪರಾಧ ಮಾಡಿದ್ದಾರೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಕ್ರಿಮಿನಲ್‌ ಪ್ರಕರಣ ದಾಖಲು ಮಾಡಲು ಪ್ರಮುಖವಾಗಿ ಸಾಕ್ಷ್ಯಗಳಿರಬೇಕು ಎಂದು ಕೋರ್ಟ್‌ ಹೇಳಿತ್ತು.

ಸುನಂದಾ ಪುಷ್ಕರ್ ಸಾವು ಪ್ರಕರಣ: ಶಶಿ ತರೂರ್‌ಗೆ ಬಿಗ್ ರಿಲೀಫ್, ನಿರ್ದೋಷಿ ಎಂದ ಕೋರ್ಟ್!

2014 ರ ಜನವರಿ 17 ರ ರಾತ್ರಿ ಐಷಾರಾಮಿ ಹೋಟೆಲ್‌ನ ಕೋಣೆಯಲ್ಲಿ ಪುಷ್ಕರ್ ಶವವಾಗಿ ಪತ್ತೆಯಾಗಿದ್ದರು. ನಂತರ ಪೊಲೀಸರು ಕೊಠಡಿಯನ್ನು ಸೀಲ್ ಮಾಡಿ ಎಫ್‌ಐಆರ್ ದಾಖಲು ಮಾಡಿದ್ದರು. ತರೂರ್ ಅವರ ಅಧಿಕೃತ ಬಂಗಲೆಯನ್ನು ನವೀಕರಣ ಮಾಡುತ್ತಿದ್ದ ಕಾರಣಕ್ಕೆ ದಂಪತಿಗಳು ಐಷಾರಾಮಿ ಹೋಟೆಲ್‌ನಲ್ಲಿ ವಾಸವಾಗಿದ್ದರು. ಈ ಪ್ರಕರಣ ಕ್ಷಣಮಾತ್ರದಲ್ಲಿಯೇ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಅದಲ್ಲದೆ, ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳುಗಳ ಮುನ್ನಡೆ ನಡೆದ ಘಟನೆ ಇದಾಗಿದ್ದ ಕಾರಣಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದ ನಡುವೆ ದೊಡ್ಡ ಮೊಟ್ಟದ ರಾಜಕೀಯ ಸಮರಕ್ಕೆ ಈ ವಿಚಾರ ಕಾರಣವಾಗಿತ್ತು.

ಸುನಂದಾ ಸಾವಿನ ಕೇಸ್‌ : ಶಶಿ ತರೂರ್‌ ಗೆ ಷರತ್ತುಬದ್ಧ ಜಾಮೀನು

2015ರ ಜನವರಿ 1 ರಂದು ಅನಾಮಿಕ ವ್ಯಕ್ತಿಗಳ ಮೇಲೆ ಪ್ರಕರಣದಲ್ಲಿ ಮೊದಲ ಎಫ್‌ಐಆರ್‌ಅನ್ನು ದೆಹಲಿ ಪೊಲೀಸ್‌ ದಾಖಲು ಮಾಡಿತ್ತು. ಪ್ರಕರಣದ ವಿಚಾರವಾಗಿ ಶಶಿ ತರೂರ್‌ ಯಾಗಿ ಇತರರ ವಿಚಾರಣೆಯನ್ನೂ ಮಾಡಲಾತ್ತು. ಸಚಿವರ ಆಪ್ತ ಸಹಾಯಕರು ಹಾಗೂ ಸಿಬ್ಬಂದಿ ಸೇರಿದಂತೆ 6 ಜನರ ಪಾಲಿಗ್ರಾಫಿ ಟೆಸ್ಟ್‌ ಕೂಡ ಮಾಡಲಾಗಿತ್ತು. 2018ರ ಮೇ 15 ರಂದು ದೆಹಲಿ ಪೊಲೀಸ್‌ ಶಶಿ ತರೂರ್‌ ಅವರ ವಿರುದ್ಧ 3 ಸಾವಿರ ಪುಟಗಳ ಚಾರ್ಜ್‌ಶೀಟ್‌ ದಾಖಲು ಮಾಡಿದ್ದಲ್ಲದೆ, 10 ವರ್ಷಗಳ ಗರಿಷ್ಠ ಶಿಕ್ಷೆಗೆ ಬೇಡಿಕೆ ಇಟ್ಟಿತ್ತು.

Follow Us:
Download App:
  • android
  • ios