ಅಧಿವೇಶನದಲ್ಲಿ ಬಯಲಾದ ವಿಪಕ್ಷಗಳ ಬಣ್ಣ

ತನ್ನ ನಾಗರಿಕರೊಂದಿಗೆ ನೇರ ಸಂಪರ್ಕವನ್ನು ಸಾಧಿಸಿಕೊಳ್ಳುವಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರಲ್ಲಿ ಜಗತ್ತಿನ ಮುಂಚೂಣಿ ನಾಯಕ ಪ್ರಧಾನಿ ಮೋದಿ. ಅವರು ವ್ಯಾಪಕವಾಗಿ ರೇಡಿಯೋ (ಮನ್‌ ಕಿ ಬಾತ್‌) ಮತ್ತು ಡಿಜಿಟಲ್‌ ವೇದಿಕೆ ಎರಡನ್ನೂ ಬಳಸಿಕೊಳ್ಳುತ್ತಾರೆ. 

MP Rajeev Chandrasekhar writes about PM modi and ordinance hls

ನವದೆಹಲಿ (ಅ. 20): ಸಂಸತ್ತಿನ ಇತ್ತೀಚಿನ ಅಧಿವೇಶನ ಚಿಕ್ಕದಾಗಿತ್ತು. ಆದರೆ ಕೋವಿಡ್‌ ಸಂದರ್ಭದಲ್ಲಿಯೂ ಜನಪ್ರತಿನಿಧಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದು ಮಹತ್ವದ ಸಂಕೇತವಾಗಿ ಕಂಡಿತು. ದಿನಗಳ ಸಂಖ್ಯೆಯಲ್ಲಿ ಸಣ್ಣದು, ಆದರೆ ಫಲಪ್ರದದ ದೃಷ್ಟಿಯಿಂದ ದೊಡ್ಡದು. ಸಂಸತ್ತಿನ ಕಲಾಪವನ್ನು ಹಳಿತಪ್ಪಿಸುವ ಮತ್ತು ಹಾಳುಗೆಡಹುವ ಹಲವು ಪ್ರಯತ್ನಗಳ ಹೊರತಾಗಿಯೂ ಇತ್ತೀಚಿನ ದಿನಗಳಲ್ಲಿ ದೊಡ್ಡ ಫಲವನ್ನು ಈ ಅಧಿವೇಶನ ನೀಡಿತು.

ಆರಂಭದಿಂದಲೂ ಸದನದ ಕಲಾಪವನ್ನು ಹಾಳುಮಾಡುವ ಪ್ರಯತ್ನಗಳನ್ನು ಮಾಡಲಾಯಿತು- ಅದು ಅಸಂಬದ್ಧದಿಂದ ವಿಚ್ಛಿದ್ರಕಾರಕತೆಯವರೆಗೆ ಇತ್ತು. ಸಂಸತ್ತಿನ ಪ್ರಶ್ನೋತ್ತರ ಅವಧಿಯನ್ನು ಅಮಾನತು ಮಾಡಿದ್ದನ್ನು ‘ಪ್ರಜಾಪ್ರಭುತ್ವದ ಮೇಲೆ ಹಲ್ಲೆ’ ಎಂದು ಬಣ್ಣಿಸಲಾಯಿತು. ಆದರೆ, ಪುಟ್ಟಅಧಿವೇಶನವನ್ನು ಫಲಪ್ರದಗೊಳಿಸುವ ಒಂದು ಸರಳ ಪ್ರಯತ್ನ ಇದಾಗಿತ್ತು.

ಚುಕ್ಕೆರಹಿತ ಪ್ರಶ್ನೆಗಳನ್ನು ಕೇಳುವುದಕ್ಕೆ ಅಥವಾ ವಿಶೇಷ ಸೂಚನೆ ಮತ್ತು ಶೂನ್ಯ ಅವಧಿಯನ್ನು ಬಳಸಿಕೊಳ್ಳುವುದಕ್ಕೆ ಸದಸ್ಯರಿಗೆ ನಿರ್ಬಂಧವಿರಲಿಲ್ಲ. ಟಿಎಂಸಿ ಪ್ರೇರಿತವಾಗಿದ್ದ ಈ ಆಕ್ರೋಶವು ಅವುಗಳ ಆಡಳಿತವಿರುವ ರಾಜ್ಯಗಳ ಸರ್ಕಾರಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದು ಬಹಿರಂಗವಾದಾಗ ತಮ್ಮವೇ ಆದ ವಿರೋಧಾಭಾಸಗಳಿಂದಾಗಿ ಬಿದ್ದುಹೋಗಿದ್ದು ನಿರೀಕ್ಷಿತವೇ ಆಗಿತ್ತು.

ಯುಪಿಎ ಕಾಲದಲ್ಲಿ ತಾನು ಎಸಗಿದ ಅವ್ಯವಹಾರವೆಲ್ಲಾ ಬೆಳಕಿಗೆ ಬರುತ್ತೆಂದು ಕಾಲ್ಕಿತ್ತ ಅಮ್ನೆಸ್ಟಿ!

ಪ್ರಧಾನಿ ಬಗ್ಗೆ ಆಕ್ಷೇಪ ನಿರಾಧಾರ

ಒಂದೇ ಸುಳ್ಳನ್ನು ಸಾವಿರ ಸಲ ಹೇಳಿದಾಗ ಅದು ಸತ್ಯವಾಗಿಬಿಡುತ್ತದೆ ಎಂಬ ಗೋಬೆಲ್ಸ್‌ರ ತಂತ್ರದಿಂದ ಸ್ಫೂರ್ತಿಯನ್ನು ಪಡೆದ ಕತೆಗಳಂತೆ ಇವು ತೋರುತ್ತಿವೆ. ‘ಸಂಸತ್ತಿನ ಸಾವು’ ಎಂಬ ಕಥಾನಕದ ಹೊಸ ತಿರುವು ನಮ್ಮ ಪ್ರಧಾನ ಮಂತ್ರಿಯು ಸಂಸತ್ತನ್ನು ನಿರ್ಲಕ್ಷಿಸುತ್ತಾರೆ ಎಂಬುದು. ಅವರು ಸಂಸತ್ತಿನಲ್ಲಿ ಮೇಲಿಂದ ಮೇಲೆ ಮಾತನಾಡದೆ ಇರುವುದು ಮತ್ತು ಭಾರತದ ಜನತೆಯೊಂದಿಗೆ ನೇರವಾಗಿ ಸಂಪರ್ಕ ಹೊಂದಲು ಟ್ವೀಟರ್‌ ಮತ್ತು ರೇಡಿಯೋದಂಥ ಮಾಧ್ಯಮವನ್ನು ಬಳಸುತ್ತಿರುವ ಸಂಗತಿಯನ್ನು ಆಧರಿಸಿ ಇದನ್ನು ಕಟ್ಟಲಾಗಿದೆ.

ಮೊದಲನೆಯದಾಗಿ, ಪ್ರಧಾನಿ ನರೇಂದ್ರ ಮೋದಿಯವರು 90 ಕೋಟಿ ಬಲವಾದ ಮತದಾರರಿಂದ ಎರಡು ಬಾರಿ ಜನಾದೇಶವನ್ನು ಪಡೆದಿದ್ದಾರೆ. ಇದಕ್ಕೂ ಮೊದಲು ಯಾವುದೇ ಒಬ್ಬ ಪ್ರಧಾನಿಯು ಅಥವಾ ಸರ್ಕಾರವು ಸಂಸತ್ತಿನಲ್ಲಿ ಸಂಪೂರ್ಣ ಬಹುಮತವನ್ನು ಪಡೆದದ್ದು ಮತ್ತು ಮರು ಆಯ್ಕೆಯಾದದ್ದು 1969ರಲ್ಲಿ, ಅರ್ಧ ಶತಮಾನದ ಹಿಂದೆ.

ಮುಚ್ಚುಮರೆ ಇಲ್ಲದೆ ಹೇಳಬೇಕೆಂದರೆ, ಪ್ರಧಾನಿಯೊಬ್ಬರು ಸಂಸತ್ತಿನಲ್ಲಿ ಎಷ್ಟುಬಾರಿ ಮಾತನಾಡಿದರು ಎಂಬುದು ಅವರ ರಾಜಕೀಯ ಅಥವಾ ಸರ್ಕಾರದ ಪರಿಣಾಮಕತೆಯ ಮಾನದಂಡವಲ್ಲ. ಇಲ್ಲವೆ ಅದು ಒಂದು ಸಂಸ್ಥೆಯಾಗಿರುವ ಸಂಸತ್ತಿನ ಸಾವಿನ ಸೂಚನೆಯೂ ಅಲ್ಲ. ಸಂಸತ್ತು ಎಂಬುದು ಸಂಸದೀಯಪಟುಗಳ ವೇದಿಕೆಯಾಗಿದೆ- ಕೇವಲ ಪ್ರಧಾನಿ ಮತ್ತು ಸರ್ಕಾರದ್ದಲ್ಲ. ಪ್ರತಿಪಕ್ಷಗಳ ಈ ಸಿದ್ಧಾಂತವು ಧಾಷ್ಟ್ರ್ಯದ ಅಪ್ಪಳಿಕೆಯಾಗಿದೆ.

ಮತ್ತು ಸಣ್ಣದಾದ ಅಧಿವೇಶನದ ಚರ್ಚೆಯಲ್ಲಿ ಅನೇಕ ಸಚಿವರು ಮತ್ತು ಸಂಸದರು ಭಾಗವಹಿಸಿದ್ದು, ಸಂವಾದ ನಡೆಸಿದ್ದು ಅಪ್ರಸ್ತುತ ಎಂದು ಹೇಳಿದಂತಾಗುತ್ತದೆ. ಸಂಸತ್ತಿನಲ್ಲಿ ಮತ್ತು ಸಂಸತ್‌ ಸಮಿತಿಯ ಸಭೆಗಳಲ್ಲಿ ಹಲವು ಸಂಸದರು ಬಹಳ ಪ್ರಯತ್ನಪಟ್ಟು ತಮ್ಮ ಕೊಡುಗೆಗಳನ್ನು ನೀಡಿದವರಿಗೆ ಇದರಿಂದ ಅಪಮಾನ ಮಾಡಿದಂತಾಗುತ್ತದೆ. ಕೆಲವರ ವಿರೋಧದಿಂದ ಅವರ ಕೆಲಸ ಮತ್ತು ಕೊಡುಗೆ ಪ್ರಧಾನಿ ಮಾತನಾಡುವವರೆಗೆ ಅಪ್ರಸ್ತುತವಾಗುತ್ತವೆ.

ಕೃಷಿ ಮಸೂದೆ ಕೋಲಾಹಲ; ವಿಪಕ್ಷ ಸಂಸದರ ವರ್ತನೆಗೆ ರಾಜೀವ್ ಚಂದ್ರಶೇಖರ್ ಆಕ್ರೋಶ

ಅಡ್ಡಿಪಡಿಸುವುದೇ ವಿಪಕ್ಷಗಳ ಉದ್ದೇಶ

ಈ ಪುಟ್ಟಅಧಿವೇಶನವು ಉಳಿದ ಯಾವುದೇ ಅಧಿವೇಶನದಂತೆ ಫಲಪ್ರದವಾಗಿದೆ. ನಾವು ಅದನ್ನು ಪ್ರಜಾಪ್ರಭುತ್ವದ ಸಂಭ್ರಮದಂತೆ ಆಚರಿಸಬೇಕು. ಅದರ ಬದಲಾಗಿ ಈ ಸಂಭ್ರಮಕ್ಕೆ ಪ್ರತಿಪಕ್ಷಗಳು ಮೈಪರಚಿಕೊಳ್ಳುತ್ತ ಕಾಲ್ಪನಿಕ ಆಕ್ರೋಶ ಮತ್ತು ಅಡಚಣೆಗಳನ್ನು ಉಂಚುಮಾಡಿವೆ. ಇದರ ಕಾರಣ ಸರಳ- ತಾವು ನಿಜವಾಗಿ ಅಂದುಕೊಂಡಂತೆ ಮಾಡಲು ಆಗದೆ ಇದ್ದದ್ದು. ಅಂದರೆ ನರೇಂದ್ರ ಮೋದಿ ಸರ್ಕಾರದ ಶಾಸನಾತ್ಮಕ ಕಾರ್ಯಕ್ರಮಗಳಿಗೆ ಅಡ್ಡಿಯನ್ನುಂಟುಮಾಡುವುದು ಅವರ ಉದ್ದೇಶ.

ತನ್ನ ನಾಗರಿಕರೊಂದಿಗೆ ನೇರ ಸಂಪರ್ಕವನ್ನು ಸಾಧಿಸಿಕೊಳ್ಳುವಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರಲ್ಲಿ ಜಗತ್ತಿನ ಮುಂಚೂಣಿ ನಾಯಕ ಪ್ರಧಾನಿ ಮೋದಿ. ಅವರು ವ್ಯಾಪಕವಾಗಿ ರೇಡಿಯೋ (ಮನ್‌ ಕಿ ಬಾತ್‌) ಮತ್ತು ಡಿಜಿಟಲ್‌ ವೇದಿಕೆ ಎರಡನ್ನೂ ಬಳಸಿಕೊಳ್ಳುತ್ತಾರೆ. ಬಹುಶಃ ಸಂಸತ್ತನ್ನು ನಿರ್ಲಕ್ಷಿಸುತ್ತಾರೆ ಎಂಬ ಕಥಾನಕದ ಹಿಂದೆ ಇರುವ ಕ್ಷುಲ್ಲಕವಾದ ಸಂಗತಿ ಈ ಹೊರಚಾಚುವಿಕೆಯೇ ಸಂಸತ್ತಿಗೆ ಪರ್ಯಾಯ ಎಂದು ಸೂಚಿಸುವುದಾಗಿರಬಹುದು.

ಇದನ್ನು ಮಾಡಲು ಸೂಚಿಸಿದವರು ಯಾರೋ ಸ್ಪಷ್ಟವಾಗಿಲ್ಲ. ನಮ್ಮ ಪ್ರಧಾನಿ (ಅಥವಾ ಯಾವುದೇ ರಾಜಕೀಯ ನಾಯಕ) ಸೋಷಿಯಲ್‌ ಮೀಡಿಯಾ ಅಥವಾ ರೇಡಿಯೋವನ್ನು ಜನರೊಂದಿಗೆ ಸಂವಹನ ನಡೆಸಲು ಬಳಸಿಕೊಂಡರೆ ಅದು ತನ್ನಷ್ಟಕ್ಕೆ ತಾನೇ ಸಂಸತ್ತಿನ ಪ್ರಾಮುಖ್ಯತೆಯನ್ನು ನಿರ್ಲಕ್ಷಿಸಿದಂತೆ ಆಗುವುದಿಲ್ಲ. ಆದರೂ ಅವರು ಆ ವಿವರಿಸಲಾಗದ ಗೆರೆಯೊಳಗೇ ಇರುತ್ತಾರೆ!

ವಿರಾಟ್ ಉಳಿಸಲು ಆರ್‌ಸಿ ಯತ್ನ: ರಿಲಯನ್ಸ್, ಟಾಟಾ ವಿಪ್ರೋಗೆ ಸಂಸದ ಮೊರೆ!

ಸುಗ್ರೀವಾಜ್ಞೆಗಳ ಬಗ್ಗೆ ವ್ಯರ್ಥ ಟೀಕೆ

ಸಂಸತ್ತನ್ನು ತಪ್ಪಿಸಲು ಸುಗ್ರೀವಾಜ್ಞೆಗಳ ದುರ್ಬಳಕೆಯನ್ನು ಸರ್ಕಾರ ಮಾಡಿಕೊಳ್ಳುತ್ತಿದೆ ಎಂಬ ಇನ್ನೊಂದು ಟೀಕೆ ಇದೆ. ಇದು ಎಂಥ ವಾದ್ಯಗೋಷ್ಠಿಯಾಗಿದೆ ಎಂದರೆ ಇದನ್ನು ಕೇಳಿ ಕೇಳಿ ನಿದ್ದೆಯೇ ಬರುತ್ತದೆ. ಇದರಲ್ಲಿ ಸ್ಪಷ್ಟತೆಯೇ ಇಲ್ಲ. ಸರ್ಕಾರವು ಹೊರಡಿಸುವ ಯಾವುದೇ ಸುಗ್ರೀವಾಜ್ಞೆ ಇದ್ದರೂ ಅದನ್ನು ಒಂದು ಮಸೂದೆಯಾಗಿ ಸಂಸತ್ತಿನ ಮುಂದೆ ತರಲೇಬೇಕು. ಯಾವುದಾದರೂ ಸುಗ್ರೀವಾಜ್ಞೆ ಅಸಂಗತವಾಗಿದೆ, ಅದು ರದ್ದಾಗಲಿ ಎಂಬುದಿದ್ದರೆ ಅದನ್ನು ಸಂಸತ್ತಿನ ಮುಂದೆ ತರುವುದಿಲ್ಲ.

ಈ ಸರ್ಕಾರವು ಹೊರಡಿಸಿದ ಸುಗ್ರೀವಾಜ್ಞೆಗಳು ಪ್ರತಿಯೊಂದೂ ತುರ್ತು ನೀತಿ ಜಾರಿಗೆ ಅಗತ್ಯವಾಗಿ ಬೇಕಾಗಿದ್ದವುಗಳೇ. ಮೂರು ಕೃಷಿ ಸುಧಾರಣೆ ಕಾಯ್ದೆಗಳೂ ಸೇರಿದಂತೆ ಸರ್ಕಾರದ ಪ್ರಮುಖ ಕ್ರಿಯೆಗಳ ಸಂಬಂಧದಲ್ಲಿ ಯಾವುದೇ ಸಮಯವನ್ನು ಹಾಳುಮಾಡುವುದರಲ್ಲಿ ನರೇಂದ್ರ ಮೋದಿಯವರ ಸರ್ಕಾರವು ನಂಬಿಕೆಯನ್ನು ಇಟ್ಟಿಲ್ಲ ಎಂಬದು ಅವರ ಆಡಳಿತವನ್ನು ನೋಡಿದರೇ ತಿಳಿಯುತ್ತದೆ. ಈ ಮೂರು ಸುಗ್ರೀವಾಜ್ಞೆಗಳನ್ನು ಜೂನ್‌ ತಿಂಗಳಿನಲ್ಲಿಯೇ ಹೊರಡಿಸಲಾಗಿದ್ದರೂ ಯಾವುದೇ ಪ್ರತಿಪಕ್ಷವು ವಿರೋಧ ಮಾಡದೆ ಸೆಪ್ಟೆಂಬರಿನಲ್ಲಿ ಸಂಸತ್ತಿನಲ್ಲಿ ಮಸೂದೆ ಮಂಡಿಸುವಾಗ ಒಮ್ಮೆಲೇ ದೊಡ್ಡ ಗಂಟಲಿನಲ್ಲಿ ಕೂಗಾಡಿದವು. ಇದು ಪ್ರತಿಪಕ್ಷಗಳಲ್ಲಿಯ ಕೆಲವರ ರಾಜಕೀಯ ಸಮಯಸಾಧಕತನದ ಮೇಲೆ ಬೆಕಳು ಚೆಲ್ಲುತ್ತದೆ.

ಸುಗ್ರೀವಾಜ್ಞೆಗಳ ಅತಿಯಾದ ಬಳಕೆಯಾಗುತ್ತಿದೆ ಎಂಬ ಕತೆಯು ಸಂಪೂರ್ಣ ವಾಸ್ತವಾಂಶಗಳಿಲ್ಲದೆ ಅಪೂರ್ಣವಾದುದು. ಸಂಸತ್ತನ್ನು ತಪ್ಪಿಸುವುದಕ್ಕಾಗಿ ಸುಗ್ರೀವಾಜ್ಞೆಗಳನ್ನು ಮತ್ತೆ ಮತ್ತೆ ಜಾರಿಮಾಡುವುದರ ಮೇಲೆ ಕಾನೂನಿನ- ಸಾಂವಿಧಾನಿಕ ಸಮಸ್ಯೆಗಳು ಇವೆ. ಈ ಸರ್ಕಾರ ಅದರ ಮೇಲೆ ಅವಲಂಬಿತವಾಗಿಲ್ಲ. ಇಂಥ ಯಾವುದೇ ಪ್ರಕರಣವಿದ್ದರೂ ಇದು ಸಂವಿಧಾನಕ್ಕೆ ಮಾಡುವ ಮೋಸ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಪ್ರತಿಪಕ್ಷಗಳ ಕಥಾನಕವು ಸುಗ್ರೀವಾಜ್ಞೆಗಳನ್ನು ಈ ಮೊದಲಿನ ಸರ್ಕಾರಗಳೂ ಬಳಸಿಕೊಂಡಿವೆ ಎಂಬುದನ್ನು ಒಪ್ಪಿಕೊಳ್ಳುತ್ತವೆ.

ಆದರೆ ಮೋದಿ ಸರ್ಕಾರ ಅತಿಯಾಗಿ ಅದನ್ನು ಬಳಸಿದೆ ಎಂದು ಹೇಳುತ್ತದೆ. ಇದೂ ಕೂಡ ಮತ್ತೆ ವಾಸ್ತವಾಂಶಗಳಿಲ್ಲದ ದುರ್ಬಲ ಹೆಜ್ಜೆಗಳೊಂದಿಗೆ ವೇಗವಾಗಿ ಆಟವಾಡಿದಂತೆ. ಹಿಂದಿನ ಸರ್ಕಾರಗಳು ಈಗಿನ ಸರ್ಕಾರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸುಗ್ರೀವಾಜ್ಞೆಗಳ ಮೇಲೆ ಅವಲಂಬಿತವಾಗಿದ್ದವು. ಉದಾಹರಣೆಗೆ, 1975ರಲ್ಲಿ 29 ಸುಗ್ರೀವಾಜ್ಞೆಗಳು ಮತ್ತು 1993 ಹಾಗೂ 1997ರಲ್ಲಿ 34 ಸುಗ್ರೀವಾಜ್ಞೆಗಳು ಬಂದವು. ವಾಸ್ತವ ಏನೆಂದರೆ ಎಲ್ಲ ಸರ್ಕಾರಗಳೂ ತುರ್ತು ಶಾಸನಗಳಿಗಾಗಿ ಸಂಸತ್ತಿನ ಅಧಿವೇಶನ ಇಲ್ಲದೆ ಇದ್ದಾಗ ಸುಗ್ರೀವಾಜ್ಞೆಗಳನ್ನು ಬಳಸಿಕೊಂಡಿವೆ. ಈ ಸರ್ಕಾರ ಕೊಡ ಅದಕ್ಕೆ ಹೊರತಲ್ಲ.

ಅಡ್ಡಿಪಡಿಸುವ ತಂತ್ರಗಾರಿಕೆ ನಡೆಯದು

ಕೆಲವರು ಹಳೆಯ ವಿವಾದವನ್ನೆ ಮತ್ತೆ ಮತ್ತೆ ಸುತ್ತುತ್ತಿದ್ದಾರೆ. ಅವುಗಳಲ್ಲಿ ಒಂದನ್ನು ಸುಪ್ರೀಂಕೋರ್ಟು ಚೆನ್ನಾಗಿಯೇ ಇತ್ಯರ್ಥಮಾಡಿದೆ. ಹಣಕಾಸು ಮಸೂದೆಗಳ ದುರುಪಯೋಗದ ಬಗ್ಗೆ ಈ ಹಿಂದೆ ಆರೋಪ ಬಂದಿತ್ತು. ವಾಸ್ತವವೆಂದರೆ ಅಂಥ ಯಾವುದೇ ದುರ್ಬಳಕೆ ನಡೆದೇ ಇರಲಿಲ್ಲ. ಆಧಾರ್‌ ಮಸೂದೆಯನ್ನು 2016ರಲ್ಲಿ ಹಣಕಾಸು ಮಸೂದೆ ಎಂದು ಮಂಡಿಸುವುದಕ್ಕೆ ಸಕಾರಣಗಳಿದ್ದವು. ಅದರ ಸಾಂವಿಧಾನಿಕತೆಯನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿದಿದೆ. ಇನ್ನೇನಾದರೂ ಇದ್ದರೆ, ಅತ್ಯಂತ ಪಾರದರ್ಶಕವಾದ ಶಾಸನಾತ್ಮಕ ಬದಲಾವಣೆಗಳನ್ನು ಈ ಸರ್ಕಾರವು ತಂದಿದ್ದು ಸಾಮಾನ್ಯ ಮಸೂದೆಗಳ ಮೂಲಕವೇ.

ಮೂರು ಕೃಷಿ ಮಸೂದೆಗಳು ಅಥವಾ ನಾಕರಿಕತ್ವ ತಿದ್ದುಪಡೆ ಕಾಯ್ದೆಯನ್ನು ಕಳೆದ ವರ್ಷವೇ ಅಂಗೀಕರಿಸಲಾಗಿತ್ತು. ಎಲ್ಲವನ್ನೂ ಸಂಸತ್ತು ಅಂಗೀಕರಿಸಿತ್ತು ಮತ್ತು ರಾಜ್ಯಸಭೆಯಲ್ಲಿ ಸರ್ಕಾರಕ್ಕೆ ಬಹುಮತ ಇಲ್ಲದಿದ್ದರೂ ಎನ್‌ಡಿಎಯೇತರ ಪಕ್ಷಗಳು ಬೆಂಬಲ ನೀಡಿದ್ದವು. ವಾಸ್ತವ ಏನೆಂದರೆ, ಈ ಹಾಳುಗೆಡಹುವ ಪ್ರತಿಪಕ್ಷಗಳಿಗೆ ಈ ಮಸೂದೆಗಳ ವಿಷಯದಲ್ಲಿ ವಿಧಾಯಕ ಪರಿಹಾರಗಳನ್ನು ಸರ್ಕಾರದೊಂದಿಗೆ ಕಂಡುಕೊಳ್ಳುವ ಇಚ್ಛೆಯೂ ಇಲ್ಲ, ಈ ಮಸೂದೆಗಳನ್ನು ತಡೆಯುವುದಕ್ಕೆ ರಾಜಕೀಯ ಬೆಂಬಲವೂ ಇಲ್ಲ.

ವಿಚಾರಗಳು ಮತ್ತು ಸಿದ್ಧಾಂತಗಳ ಮೇಲೆ ಚರ್ಚೆ ನಡೆಸುವ ಮತ್ತು ಸ್ಪರ್ಧೆಯಲ್ಲಿ ತೊಡಗುವುದನ್ನು ಬಿಟ್ಟು ಅವರು ಅಡ್ಡಿಪಡಿಸುವ ಮತ್ತು ತಡೆಯೊಡ್ಡುವ ತಂತ್ರದಲ್ಲಿ ತೊಡಗಿಕೊಂಡಿದ್ದಾರೆ. ಮತ್ತು ಅತೀತವೂ ಕಾಲ್ಪನಿಕವೂ ಆದ ಆಕ್ರೋಶದ ಮೂಲಕ ಸರ್ಕಾರವು ಸಂಸತ್ತಿನಲ್ಲಿ ಚರ್ಚೆಯನ್ನು ನಿರುತ್ಸಾಹಗೊಳಿಸುತ್ತಿದೆ ಎಂದು ಹೇಳಿ ಮರೆಮಾಚುತ್ತಿವೆ.

ನಮೋ 70 : ನವಭಾರತಕ್ಕೆ ನರೇಂದ್ರ ಮೋದಿ ಎಂಬ ಹೆದ್ದಾರಿ!

ಜನರೇ ಇದಕ್ಕೆಲ್ಲ ಉತ್ತರ ಹೇಳುತ್ತಾರೆ

ನಮ್ಮ ಪ್ರಜಾಪ್ರಭುತ್ವವನ್ನು ಬಲಗೊಳಿಸುವ ಮತ್ತು ಸುಧಾರಿಸುವ ಪ್ರಾಮಾಣಿಕವಾದ ಚರ್ಚೆ ಯಾವುದೇ ಇದ್ದರೂ ಅದು ಸ್ವಾಗತಾರ್ಹವೇ. ಆದರೆ, ಪ್ರಸ್ತುತ ಸಂದರ್ಭದಲ್ಲಿ ಅದು ಕೆಲವು ಪ್ರತಿಪಕ್ಷಗಳ ನಾಯಕರ ವಿಚ್ಛಿದ್ರಕಾರಿ, ನಾಚಿಕೆಪಡುವಂಥ, ಕೆಟ್ಟನಡವಳಿಕೆಯಾಗಿದೆ. ಇದನ್ನು ನಾವು ಕೃಷಿ ಮಸೂದೆ ಅಂಗೀಕಾರದ ಸಮಯದಲ್ಲಿ ನೋಡಿದೆವು. ಅದನ್ನು ಪರೀಕ್ಷೆಗೊಳಪಡಿಸುವ ಮತ್ತು ವಿವರಿಸಬೇಕಾದ ಅಗತ್ಯವಿದೆ.

ಸಂಸತ್ತಿನ ಕುರಿತು ಇವತ್ತು ಕೂಗೆಬ್ಬಿಸುತ್ತಿರುವವರಿಗೆ ಇಲ್ಲಿದೆ ಸತ್ಯ- ಭಾರತದ ಜನತೆ ಸಂಸತ್ತಿನ ಘನತೆ ಕುಗ್ಗುವುದಕ್ಕೆ ಬಿಡುವುದಿಲ್ಲ. ಯಾರು ನಮ್ಮ ಪ್ರಜಾಪ್ರಭುತ್ವದ ಮೌಲ್ಯವನ್ನು ಒಪ್ಪಿ ಗೌರವಿಸುತ್ತಾರೋ ಮತ್ತು ತಮ್ಮ ಹೊಣೆಗಾರಿಕೆಯನ್ನು ಪ್ರಾಮಾಣಿಕತೆ ಮತ್ತು ಗೌರವದೊಂದಿಗೆ ಸಾರ್ವಜನಿಕ ಸೇವೆಗೆ ಮುಡಿಪಿಡುತ್ತಾರೋ ಅಂಥವರನ್ನು ಅವರು ಆಯ್ಕೆ ಮಾಡುತ್ತಾರೆ ಮತ್ತು ಮರು ಆಯ್ಕೆ ಮಾಡುತ್ತಾರೆ.

ಮತದಾರರು ಅದನ್ನು 2014ರಲ್ಲಿ ಮತ್ತು ಪುನಃ 2019ರಲ್ಲಿ ತೋರಿಸಿದ್ದಾರೆ. ಒರಟರು, ಹಿಂಸಾಮನೋಭಾವದವರು, ಅಡ್ಡಿಪಡಿಸುವವರ ಸಂಖ್ಯೆ ಸಂಸತ್ತಿನಲ್ಲಿ ಕಡಿಮೆಯಾಗುತ್ತಿರುವುದು ಇದರ ಸಂಕೇತ. ಆದ್ದರಿಂದ ಪ್ರತಿಪಕ್ಷಗಳು ಹತಾಶರಾಗಿ ಮೈಪರಚಿಕೊಳ್ಳುವುದನ್ನು ಮತ್ತು ಕಾಲ್ಪನಿಕ ಆಕ್ರೋಶ ಹೊರಹಾಕುವುದನ್ನು ನಿಲ್ಲಿಸಿ ಅವರಿಂದ ಜನರು ಏನನ್ನು ನಿರೀಕ್ಷಿಸುತ್ತಾರೋ ಅದನ್ನು ಮಾಡಬೇಕಿದೆ.

- ರಾಜೀವ್‌ ಚಂದ್ರಶೇಖರ್‌

ರಾಜ್ಯಸಭೆ ಸದಸ್ಯ, ಬಿಜೆಪಿ ರಾಷ್ಟ್ರೀಯ ವಕ್ತಾರ

Latest Videos
Follow Us:
Download App:
  • android
  • ios