* ಮಧ್ಯಪ್ರದೇಶದ ರಾಜಘರ್‌ ಜಿಲ್ಲೆಯ ಪ್ರೌಢಶಾಲೆಗೆ ಸಮವಸ್ತ್ರ ಧರಿಸದೇ ಬಂದಿದ್ದ ವಿದ್ಯಾರ್ಥಿನಿಯರು* ಸಮವಸ್ತ್ರ ಧರಿಸದ ಹುಡು​ಗಿಯರಿಗೆ ಬಟ್ಟೆಬಿಚ್ಚಿ ಎಂದ ಪ್ರಾಚಾ​ರ‍್ಯನ ವಿರುದ್ಧ ಕೇಸು

ರಾಜ್‌ಘರ್‌(ಸೆ.07): ಮಧ್ಯಪ್ರದೇಶದ ರಾಜಘರ್‌ ಜಿಲ್ಲೆಯ ಪ್ರೌಢಶಾಲೆಗೆ ಸಮವಸ್ತ್ರ ಧರಿಸದೇ ಬಂದಿದ್ದ ವಿದ್ಯಾರ್ಥಿನಿಯರಿಗೆ ಬಟ್ಟೆತೆಗೆಯುವಂತೆ ಹೇಳಿದ್ದ ಪ್ರಾಂಶುಪಾಲ ರಾಧೇ ಶ್ಯಾಂ ಮಾಳವೀಯ ವಿರುದ್ಧ ಪ್ರಕರಣ ದಾಖಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಶಾಲೆಗಳು ಈಗಷ್ಟೇ ಆರಂಭಗೊಂಡಿವೆ. ಸಮವಸ್ತ್ರಗಳನ್ನು ಹೊಲಿಸಿಕೊಳ್ಳಲು ಆಗಿಲ್ಲ’ ಎಂದ ವಿದ್ಯಾರ್ಥಿನಿಯರಿಗೆ ರಾಧೇಶ್ಯಾಂ ಧರಿಸಿರುವ ಬಟ್ಟೆತೆಗೆಯುವಂತೆ ಹೇಳಿದ್ದರು. ಈ ಘಟನೆಯ ಕುರಿತು ಮೂವರು ವಿದ್ಯಾರ್ಥಿನಿಯರು ಮಾಚಲಪುರ ಠಾಣೆಯಲ್ಲಿ ದೂರು ನೀಡಿದ್ದರು. ವಿದ್ಯಾರ್ಥಿಗಳು ಠಾಣೆಯ ಎದುರು ಪ್ರತಿಭಟನೆ ನಡೆಸಿದ ನಂತರ ಪ್ರಾಂಶುಪಾಲನ ವಿರುದ್ಧ ಪೋಕ್ಸೋ ಕಾಯಿದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

‘ವಿದ್ಯಾರ್ಥಿನಿಯರ ಹೇಳಿಕೆ ಪಡೆದ ನಂತರ ಆತನನ್ನು ಬಂಧಿಸಲು ಮನೆಯ ಬಳಿ ಹೋಗಿದ್ದೆವು. ಆದರೆ ಆತ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀ​ಸರು ಹೇಳಿ​ದ್ದಾ​ರೆ.