ಭೋಪಾಲ್ (ಜೂ.12)ಕೊರೋನಾ ಸಂದರ್ಭದಲ್ಲಿಯೂ ಜನ ಬಾಬಾಗಳ ಕಾಲಿಗೆ ಬೀಳುವುದನ್ನು ಬಿಟ್ಟಿಲ್ಲ. ಇಲ್ಲೊಬ್ಬ ಬಾಬಾ ತಾನು ಕೊರೋನಾದಿಂತ ಸತ್ತಿದ್ದು ಅಲ್ಲದೇ ಅನೇಕರಿಗೆ ವೈಸರ್ ಹರಡಿ ಹೋಗಿದ್ದಾನೆ.

ಬಾಬಾ ತನ್ನ ಬಳಿ ಬರುವ ಭಕ್ತರ ಕೈ ಕಿಸ್ ಮಾಡುತ್ತಿದ್ದ. ಇದೇ ಚಿಕಿತ್ಸೆ ಎಂದು ಹೇಳುತ್ತಿದ್ದ. ಅವನು ಕಿಸ್ ಮಾಡಿದಂತೆ ವೈರಸ್ ಸಹ ಅಂಟಿಕೊಂಡಿದೆ. ಜೂನ್ 4 ರಂದು ಬಾಬಾ ಕೊರೋನಾಕ್ಕೆ ಬಲಿಯಾಗಿದ್ದಾನೆ.

ಮಹಾರಾಷ್ಟ್ರದ ಮತ್ತೊಬ್ಬ ಸಚಿವರಿಗೆ ಕೊರೋನಾ

ಕಿಸ್ ಮಾಡುವುದರಿಂದ ಕೊರೋನಾ ಸೇರಿದಂತೆ ಎಲ್ಲ ರೋಗವೂ ದೂರ ಓಡುತ್ತದೆ ಎಂದು ನಂಬಿಸುತ್ತಿದ್ದ.  ಈತನ ಮಾತು ನಂಬಿಕೊಂಡು ಕೊರೋನಾ ಸೋಂಕಿಗೆ ಗುರಿಯಾದವರು ಬಂದಿದ್ದರು. ಪರಿಣಾಮ ವೈರಸ್ ಬಹಳ ಬೇಗ ಆಕ್ರಮಿಸಿಕೊಂಡಿದೆ.

ಬಾಬಾನಿಂದಾಗಿ ಬರೋಬ್ಬರಿ 85ಕ್ಕೂ ಹೆಚ್ಚು ಜನರಿಗೆ ಕೊರೋನಾ ವೈರಸ್​ ಹರಡಿರುವುದು ದೃಢಪಟ್ಟಿದೆ.  ಎಷ್ಟು ಜನ ಬಾಬಾ ಬಳೀ ಬಂದಿದ್ದರು ಎಂದು ಲೆಕ್ಕ ಹಾಕುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.