* ನಿಯಮ ಮೀರಿ 16 ವರ್ಷದ ಬಾಲಕನೊಬ್ಬರಿಗೆ ಕೋವಿಡ್‌ ಲಸಿಕೆ* ಮಧ್ಯಪ್ರದೇಶದ ಮೊರೇನಾ ಜಿಲ್ಲೆಯ ಅಂಬಾ ತಾಲೂಕಿನಲ್ಲಿ ಘಟನೆ* ಲಸಿಕೆ ಪಡೆದ ಕೆಲ ಕ್ಷಣಗಳಲ್ಲೇ ಬಾಲಕನ ಬಾಯಲ್ಲಿ ನೊರೆ

ಮೊರೇನಾ(ಆ.30): ನಿಯಮ ಮೀರಿ 16 ವರ್ಷದ ಬಾಲಕನೊಬ್ಬರಿಗೆ ಕೋವಿಡ್‌ ಲಸಿಕೆ ನೀಡಿದ ಘಟನೆ ಮಧ್ಯಪ್ರದೇಶದ ಮೊರೇನಾ ಜಿಲ್ಲೆಯ ಅಂಬಾ ತಾಲೂಕಿನಲ್ಲಿ ನಡೆದಿದೆ.

ಲಸಿಕೆ ಪಡೆದ ಕೆಲ ಕ್ಷಣಗಳಲ್ಲೇ ಬಾಲಕನ ಬಾಯಲ್ಲಿ ನೊರೆ ಕಾಣಿಸಿಕೊಂಡು ಆತ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಝೈಡಸ್‌-ಡಿ ಹೊರತುಪಡಿಸಿ ಉಳಿದ ಯಾವುದೇ ಲಸಿಕೆಯನ್ನೂ ಭಾರತದಲ್ಲಿ 18 ವರ್ಷದ ಒಳಗಿನವರಿಗೆ ಕೊಡುವಂತಿಲ್ಲ.

ಝೈಡಸ್‌ ಇನ್ನೂ ಬಿಡುಗಡೆಯಾಗಿಲ್ಲ. ಹೀಗಿರುವಾಗ ಇತರೆ ಲಸಿಕೆಯನ್ನು ಹೇಗೆ ಈ ಬಾಲಕನಿಗೆ ನೀಡಲಾಯಿತು ಎಂಬುದರ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.