ಜಗತ್ತಿನ ಎತ್ತರದ ಪರ್ವತಗಳಲ್ಲಿ ಒಂದಾದ ಮೌಂಟ್ ಎವರೆಸ್ಟ್ ಏರುವ ಶುಲ್ಕವನ್ನು ನೇಪಾಳ ಸರ್ಕಾರ ಶೇ.36ರಷ್ಟು ಏರಿಕೆ ಮಾಡಿದೆ. ಅರ್ಥಾತ್ ಈವರೆಗೆ 9 ಲಕ್ಷ ರು. ಇದ್ದ ಶುಲ್ಕ 13 ಲಕ್ಷ ರು.ಗೆ ಏರಿಕೆ ಆಗಿದೆ.
ಕಠ್ಮಂಡು (ಜ.23): ಜಗತ್ತಿನ ಎತ್ತರದ ಪರ್ವತಗಳಲ್ಲಿ ಒಂದಾದ ಮೌಂಟ್ ಎವರೆಸ್ಟ್ ಏರುವ ಶುಲ್ಕವನ್ನು ನೇಪಾಳ ಸರ್ಕಾರ ಶೇ.36ರಷ್ಟು ಏರಿಕೆ ಮಾಡಿದೆ. ಅರ್ಥಾತ್ ಈವರೆಗೆ 9 ಲಕ್ಷ ರು. ಇದ್ದ ಶುಲ್ಕ 13 ಲಕ್ಷ ರು.ಗೆ ಏರಿಕೆ ಆಗಿದೆ. ಪರ್ವತ ಏರುವ ಅನುಮತಿ ಶುಲ್ಕ ಹಾಗೂ ವಿದೇಶಿ ಪರ್ವತಾರೋಹಿಗಳು ಮಾಡುವ ಖರ್ಚೇ ನೇಪಾಳದ ಮೂಲ ಆದಾಯವಾಗಿದೆ. ಹೀಗಾಗಿ ಸುಮಾರು ದಶಕದ ಬಳಿಕ ಎವರೆಸ್ಟ್ ಏರುವ ಶುಲ್ಕವನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರಿಂದಾಗಿ, 8,849 ಮೀ. ಮೌಂಟ್ ಎವರೆಸ್ಟ್ ಏರಲು 13 ಲಕ್ಷ ರು. ಶುಲ್ಕ ವಿಧಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ನಾರಾಯಣ್ ಪ್ರಸಾದ್ ರೆಗ್ಮಿ ತಿಳಿಸಿದ್ದಾರೆ. ಈ ಮೊದಲು ಇದು 9 ಲಕ್ಷ ರು. ಇತ್ತು. ಸಾಮಾನ್ಯವಾರಿ ಏಪ್ರಿಲ್‌ನಿಂದ ಮೇ ವರೆಗೆ ಅನೇಕರು ಪರ್ವತಾರೋಹಣ ಕೈಗೊಳ್ಳುತ್ತಾರೆ. ಈ ಅವಧಿಗೆ ಶುಲ್ಕ ಅನ್ವಯವಾಗಲಿದೆ. ಹೊಸ ದರವು ಸೆಪ್ಟೆಂಬರ್‌ನಿಂದ ಜಾರಿಗೆ ಬರಲಿದೆ. ಅಂತೆಯೇ, ಕಡಿಮೆ ಪರ್ವತಾರೋಹಿಗಳು ಬರುವ ಸೆಪ್ಟೆಂಬರ್- ನವೆಂಬರ್, ಡಿಸೆಂಬರ್-ಫೆಬ್ರವರಿ ಅವಧಿಯಲ್ಲಿ ವಿಧಿಸಲಾಗುವ ಶುಲ್ಕವನ್ನೂ ಶೇ.36ರಷ್ಟು ಏರಿಸಿ, 6 ಲಕ್ಷ ರು. ಹಾಗೂ 3 ಲಕ್ಷ ರು. ಮಾಡಲಾಗಿದೆ.
ಎವರೆಸ್ಟ್ ಬಳಿ ಭೂಕಂಪ: ಟಿಬೆಟ್-ನೇಪಾಳ ಗಡಿಯಲ್ಲಿರುವ ಜಗತ್ತಿನ ಅತಿ ಎತ್ತರದ ಶಿಖರ ಹಿಮಾಲಯದ ಮೌಂಟ್ ಎವರೆಸ್ಟ್ ತಪ್ಪಲಿನ ಕ್ಸಿಗಾಝೆ ಪಟ್ಟಣದಲ್ಲಿ ಸಂಭವಿಸಿದ ಭೂಕಂಪದಲ್ಲಿ 95ಕ್ಕೂ ಹೆಚ್ಚು ಮಂದಿ ಬಲಿಯಾದ್ದು, 130ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭೂಕಂಪದ ತೀವ್ರತೆಗೆ ನೆರೆಯ ನೇಪಾಳ, ಭಾರತದ ಬಿಹಾರ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲೂ ಕಂಪನದ ಅನುಭವ ಆಗಿದ್ದು, ಜನ ಆತಂಕದಿಂದ ಮನೆಯಿಂದ ಹೊರಗೋಡಿ ಬಂದಿದ್ದಾರೆ.
ಪತ್ನಿ ಜತೆಗಿನ ಸೆಲ್ಫಿಯಿಂದಾಗಿ ಹತನಾದ ಕುಖ್ಯಾತ ನಕ್ಸಲೀಯ ನಾಯಕ ಛಲಪತಿ
ಟಿಬೆಟ್ ಗಡಗಡ: ಹಿಮಾಲಯದ ತಪ್ಪಲಲ್ಲಿರುವ ಟಿಬೆಟ್‌ನ ಡಿಂಗ್ರಿ ಕೌಂಟಿ ಅಥವಾ ಶಿಂಗಸ್ಟೆಯ ಕ್ಸಿಗಾಝೆಯಲ್ಲಿ ಬೆಳಗ್ಗೆ 9.5ಕ್ಕೆ ಸಂಭವಿಸಿದ ಈ ಭೂಕಂಪದ ತೀವ್ರತೆ 6.8 ತೀವ್ರತೆ ಇತ್ತು ಎಂದು ಚೀನಾ ಹೇಳಿಕೊಂಡರೆ, 7.1 ಆಗಿತ್ತು ಎಂದು ಅಮೆರಿಕದ ಭೂವಿಜ್ಞಾನ ಸೇವೆಗಳು ತಿಳಿಸಿವೆ. ಭೂಕಂಪ ಸಂಭವಿಸಿದ ಕೆಲ ಗಂಟೆಗಳ ಅವಧಿಯಲ್ಲಿ 40ಕ್ಕೂ ಹೆಚ್ಚು ಕಂಪನಗಳ ಅನುಭವ ಆಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಪರಿಹಾರ ಕಾರ್ಯ ಚುರುಕು: ಡಿಂಗ್ರಿಕೌಂಟಿಯ ತಾಪಮಾನ ಸದ್ಯ -8 ಡಿಗ್ರಿ ಸೆಲ್ಸಿಯಸ್ ಇದ್ದು, ಸಂಜೆ ವೇಳೆಗೆ -18ಡಿಗ್ರಿ ಸೆಲ್ಸಿಯಸ್ ವರೆಗೆ ಕುಸಿಯುತ್ತದೆ ಎಂದು ಚೀನಾದ ಹವಾಮಾನ ಇಲಾಖೆ ತಿಳಿಸಿದೆ. ಭೂಕಂಪನದಿಂದಾಗಿ ಈ ಗಡಿ ಪ್ರದೇಶದಲ್ಲಿ ಹಲವು ಮನೆಗಳು ಧರಾಶಾಹಿಯಾಗಿದ್ದು, ಅವಶೇಷಗಳಡಿ ಜನರನ್ನು ಮೇಲೆತ್ತುವ ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಿದೆ, ವಿದ್ಯುತ್ ಮತ್ತು ನೀರಿನ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
