ವಿಶ್ವದ ಅತ್ಯಂತ ಜನಪ್ರಿಯ ನಾಯಕರ ಪಟ್ಟಿ ಬಿಡುಗಡೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ 75% ರೇಟಿಂಗ್ ಪಡೆಯುವ ಮೂಲಕ ಪ್ರಧಾನಿ ಮೋದಿ ಮತ್ತೆ ಮೊದಲ ಸ್ಥಾನ ಉಳಿಸಿಕೊಂಡಿದ್ದಾರೆ. ಇತ್ತ ಮೋದಿಗೂ ನಂತರದ ಸ್ಥಾನದಲ್ಲಿರುವ ನಾಯಕರಿಗೂ ಅಜಗಜಾಂತರ ವ್ಯತ್ಯಾಸವಿದೆ.
ನವದೆಹಲಿ(ಆ.26): ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ ಮಾತ್ರವಲ್ಲ, ವಿಶ್ವದಲ್ಲೇ ಅತ್ಯಂತ ಜನಪ್ರಿಯ ನಾಯಕ. ಇದು ಮತ್ತೊಮ್ಮೆ ಸಾಬೀತಾಗಿದೆ. ಅಮೆರಿಕದ ಮಾರ್ನಿಂಗ್ ಕನ್ಸೆಲ್ಟೆನ್ಸಿ ನಡೆಸಿದ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅತ್ಯಂತ ಜನಪ್ರಿಯ ನಾಯಕ ಸ್ಥಾನ ಉಳಿಸಿಕೊಂಡಿದ್ದಾರೆ . ವಿಶ್ವದ ಅತ್ಯಂತ ಜನಪ್ರಿಯ ನಾಯಕರ ಪೈಕಿ ಮೋದಿ ಶೇಕಡಾ 75 ರೇಟಿಂಗ್ ಪಡೆದಿದ್ದಾರೆ. ಈ ಮೂಲಕ ಮೋದಿ ಮತ್ತೆ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್, ಕೆಡನಾ ಅಧ್ಯಕ್ಷ ಜಸ್ಟಿನ್ ಟ್ರುಡೋ ಸೇರಿ ಹಲವು ನಾಯಕರಿಗಿಂತ ಮೋದಿ ರೇಟಿಂಗ್ ಅಜಗಜಾಂತರ ವ್ಯತ್ಯಸವಿದೆ. ಮೋದಿ ನಂತರ ಸ್ಥಾನವನ್ನು ಮೆಕ್ಸಿಕೋ ಅಧ್ಯಕ್ಷ ಆ್ಯಂಡ್ರೆಸ್ ಮಾನ್ಯುಯೆಲ್ ಲೊಪೆಜ್ ಒಬ್ರಾಡೋರ್ ಪಡೆದುಕೊಂಡಿದ್ದಾರೆ. ಇನ್ನು ಇಟೆಲಿ ಪ್ರಧಾನಿ ಮರಿಯೋ ಡ್ರಾಘಿ ಮೂರನೇ ಸ್ಥಾನದಲ್ಲಿದ್ದಾರೆ.
ಅಮೆರಿಕದಲ್ಲಿರುವ ಮಾರ್ನಿಂಗ್ ಕನ್ಸೆಲ್ಟೆನ್ಸಿ ಆಗಸ್ಟ್ 17 ರಿಂದ ಆಗಸ್ಟ್ 23ರ ವರೆಗೆ ವಿಶ್ವದ ಅತ್ಯಂತ ಜನಪ್ರಿಯ ನಾಯಕ ಯಾರು ಅನ್ನೋ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ ಮೋದಿ ಶೇಕಡಾ 75 ರಷ್ಟು ರೇಟಿಂಗ್ಸ್ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ 5ನೇ ಸ್ಥಾನದಲ್ಲಿದ್ದಾರೆ. ಇನ್ನು ಬೈಡೆನ್ ರೇಟಿಂಗ್ಸ್ 41%. ಮೋದಿ ಹಾಗೂ ಬೈಡೆನ್ ನಡುವೆ ಶೇಕಡಾ 34 ರಷ್ಟು ರೇಟಿಂಗ್ಸ್ ಅಂತರವಿದೆ. ಕೆನಡಾ ಅಧ್ಯಕ್ಷ ಜಸ್ಟಿನ್ ಟ್ರುಡೋ ಶೇಕಡಾ 39 ರಷ್ಟು ರೇಟಿಂಗ್ಸ್ ಪಡೆಯುವ ಮೂಲಕ ಜನಪ್ರಿಯ ನಾಯಕರ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ.
Global Leader Approval: ಬಿಡೆನ್, ಜಾನ್ಸನ್‌ರನ್ನೇ ಹಿಂದಿಕ್ಕಿ ಸತತ ಮೂರನೇ ವರ್ಷ ಮೋದಿ ವಿಶ್ವದ ನಂ.1 ನಾಯಕ!
ಜಪಾನ್ ಪ್ರಧಾನಿ ಫ್ಯುಮಿಯೋ ಕಿಶಿದಾ ಶೇಕಡಾ 38 ರಷ್ಟು ರೇಟಿಂಗ್ಸ್ ಪಡೆಯುವ ಮೂಲಕ ವಿಶ್ವದ ಅತ್ಯಂತ ಜನಪ್ರಿಯ ನಾಯಕರ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದ್ದಾರೆ. ಮಾರ್ನಿಂಗ್ ಕನ್ಸಲ್ಟೆನ್ಸಿ ಸರ್ವೇಯಲ್ಲಿ ಟಾಪ್ 10 ಸ್ಥಾನ ಪಡೆದ ಜನಪ್ರಿಯ ನಾಯಕರ ಪಟ್ಟಿ ಇಲ್ಲಿದೆ.
ಮೋದಿ: 75%
ಲೋಪೆಜ್ ಒಬ್ರಡಾರ್: 63%
ಡ್ರಾಘಿ: 54%
ಬೋಲ್ಸನಾರೊ: 42%
ಬಿಡೆನ್: 41%
ಟ್ರುಡೊ: 39%
ಕಿಶಿಡಾ: 38%
ಮ್ಯಾಕ್ರನ್: 34%
ಸ್ಕೋಲ್ಜ್: 30%
ಜಾನ್ಸನ್: 25%
ಹೈಬ್ರಿಡ್ ಮತ್ತು ವರ್ಕ್ ಫ್ರಂ ಹೋಂ ವ್ಯವಸ್ಥೆ ಭವಿಷ್ಯದ ಅಗತ್ಯ: ಪ್ರಧಾನಿ ಮೋದಿ
ನವೆಂಬರ್ 2021 ಹಾಗೂ 2022ರ ಜನವರಿಯಲ್ಲಿ ಮಾರ್ನಿಂಗ್ ಕನ್ಸಲ್ಟೆನ್ಸಿ ವಿಶ್ವದ ಅತ್ಯಂತ ಜನಪ್ರಿಯ ನಾಯಕರ ಪಟ್ಟಿ ಬಿಡುಗಡೆ ಮಾಡಿತ್ತು. ಈ ಸಂದರ್ಭದಲ್ಲೂ ಪ್ರಧಾನಿ ಮೋದಿ ವಿಶ್ವದ ಅತ್ಯಂತ ಜನಪ್ರಿಯ ನಾಯಕನಾಗಿ ಮೊದಲ ಸ್ಥಾನ ಅಲಂಕರಿಸಿದ್ದರು. ಮಾರ್ನಿಂಗ್ ಕನ್ಸಲ್ಟೆನ್ಸಿ ಸಮೀಕ್ಷೆ ವೇಳೆ ಪ್ರತಿ ದಿನ 20,000 ಮಂದಿಯನ್ನು ಸಂದರ್ಶಿಸಿ ಮಾಹಿತಿ ಕಲೆ ಹಾಕುತ್ತದೆ. ಆಸ್ಟ್ರೇಲಿಯಾ, ಆಸ್ಟ್ರಿಯಾ, ಬ್ರೆಜಿಲ್, ಜರ್ಮನಿ, ಭಾರತ, ಮೆಕ್ಸಿಕೋ, ನದರ್ಲೆಂಡ್, ಸೌತ್ ಕೊರಿಯಾ, ಸ್ಪೇನ್, ಸ್ವೀಡನ್ ಹಾಗೂ ಅಮೆರಿಕದಲ್ಲಿ ಸಮೀಕ್ಷೆ ನಡೆಸಲಾಗಿದೆ.
