ನವದೆಹಲಿ(ಡಿ.30): ಕೇಂದ್ರದ ಕೃಷಿ ಕಾನೂನು ವಿರೋಧಿಸಿರುವ ಅನ್ನದಾತ ರಾಷ್ಟ್ರ ರಾಜಧಾನಿ ದೆಹಲಿಯ ಗಡಿ ಭಾಗ ಟಿಕ್ರಿಗೆ ತಲುಪಿ ಬರೋಬ್ಬರಿ ಒಂದು ತಿಂಗಳಾಗಿದೆ. ಈ ನಡುವೆ ಇಲ್ಲಿ 12ಕ್ಕೂ ಅಧಿಕ ಮಂದಿ ರೈತರು ಮೃತಪಟ್ಟಿದ್ದಾರೆ. ಲಭ್ಯವಾದ ಮಾಹಿತಿ ಅನ್ವಯ ಮೃತರಲ್ಲಿ ಅನೇಕ ಮಂದಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮಂಗಳವಾರದಂದೂ ಇಲ್ಲಿ ಓರ್ವ ವೃದ್ಧ ಚಳಿಯಿಂದಾಗಿ ಮೃತಪಟ್ಟಿದ್ದಾರೆ.

ತಾವು ದಿನಗಳೆದಂತೆ ರೈತರನ್ನು ಕಳೆದುಕೊಳ್ಳುತ್ತಿದ್ದೇವೆ, ಇದರಿಂದ ಕೇಂದ್ರ ಸರ್ಕಾರದ ವಿರುದ್ಧ ರೈತರ ಆಕ್ರೋಶವೂ ಹೆಚ್ಚುತ್ತಿದೆ. ತೀವ್ರ ಚಳಿ ಇದ್ದರೂ ನಾವಿಲ್ಲಿ ನಮ್ಮ ಹಕ್ಕಿಗಾಗಿ ಕುಳಿತಿದ್ದೇವೆ. ನಾನು ರೈತರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ಕೃಷಿಇ ಕಾನೂನು ಹಿಂಪಡೆದರಷ್ಟೇ ಇಲ್ಲಿಂದ ಮರಳುತ್ತೇವೆಂದಿದ್ದಾರೆ.

ಸರ್ಕಾರ ನಮ್ಮ ಬೇಡಿಕೆ ಒಪ್ಪಿಕೊಳ್ಳುತ್ತಿಲ್ಲ. ಪ್ರತಿದಿನ ಚಳಿಯಿಂದಾಗಿ ರೈತರು ಕೊನೆಯುಸಿರೆಳೆಯುತ್ತಿದ್ದಾರೆ. ಇಲ್ಲಿಯವರೆಗೆ ಒಟ್ಟು ಸುಮಾರು ನಲ್ವತ್ತು ಮಂದಿ ರೈತರು ಮೃತಪಟ್ಟಿದ್ದಾರೆ. ಇದು ರೈತರನ್ನು ಮತ್ತಷ್ಟು ಕೆರಳಿಸಿದೆ.