Asianet Suvarna News Asianet Suvarna News

ಮಂಗಗಳ ಮಾರಣ ಹೋಮದ ಬೆನ್ನಲ್ಲೇ 300 ನಾಯಿಗಳಿಗೆ ವಿಷವುಣಿಸಿ ಕೊಂದ ಘಟನೆ ಬೆಳಕಿಗೆ!

  • ಮಂಗಗಳ ಮಾರ ಹೋಮಕ್ಕೆ ಗರಂ ಆಗಿದ್ದ ಹೈಕೋರ್ಟ್, ಕಠಿಣ ಕ್ರಮಕ್ಕೆ ಆಗ್ರಹ
  • ಈ ಘಟನೆ ಬೆನ್ನಲ್ಲೇ ಇದೀಗ 300ಕ್ಕೂ ಹೆಚ್ಚು ನಾಯಿಗಳ ಕೊಂದ ಘಟನೆ ಬೆಳಕಿಗೆ
  • ಬೀದಿ ನಾಯಿಗಳಿಗೆ ವಿಷವುಣಿಸಿ ಕೊಂಡು ಹೊಂಡದಲ್ಲಿ ಹೂತು ಹಾಕಲಾಗಿದೆ ಎಂದ ಕಾರ್ಯಕರ್ತೆ
More than 300 stray dogs were poisoned to death in Andhra pradesh alleges Animals activist ckm
Author
Bengaluru, First Published Aug 1, 2021, 6:11 PM IST
  • Facebook
  • Twitter
  • Whatsapp

ಆಂಧ್ರ ಪ್ರದೇಶ(ಆ.01): ಮೂಕ ಪ್ರಾಣಿಗಳ ಮೇಲಿನ ದೌರ್ಜನ್ಯ, ಹಿಂಸೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಒಂದೆಡೆ ಕಾಡು ಪ್ರಾಣಿಗಳು ಹಾಗೂ ಮನುಷ್ಯರ ನಡುವಿನ ಹೋರಾಟವಾದರೆ, ಮತ್ತೊಂದೆಡೆ ಸಾಕು ಪ್ರಾಣಿಗಳ ಮೇಲೆ ನಡೆಯುತ್ತಿರುವ ಹಿಂಸೆಗಳು ಹೆಚ್ಚಾಗುತ್ತಿದೆ. ಇತ್ತೀಚೆಗೆ ಹಾಸನದಲ್ಲಿ 30ಕ್ಕೂ ಹೆಚ್ಚು ಮಂಗಗಳನ್ನು ಕೊಲ್ಲಲಾಗಿದೆ. ಈ ಘಟನೆಗೆ ಹೈಕೋರ್ಟ್ ಚಾಟಿ ಬೀಸಿತ್ತು. ಈ ಘಟನೆ ಬೆನ್ನಲ್ಲೇ ಇದೀಗ ಆಂಧ್ರ ಪ್ರದೇಶದಲ್ಲಿ ಬರೋಬ್ಬರಿ 300 ಬೀದಿ ನಾಯಿಗಳನ್ನು ಕೊಲ್ಲಲಾಗಿದೆ.

ಹೈಕೋರ್ಟ್ ಚಾಟಿ, ಮಂಗಗಳ ಮಾರಣ ಹೋಮ ಸ್ಥಳಕ್ಕೆ ಅಧಿಕಾರಿಗಳ ಭೇಟಿ

ಪಶ್ಚಿಮ ಗೋದಾವರಿ ಜಿಲ್ಲೆಯ ಲಿಂಗಪಾಲೆಮ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಲಿಂಗಪಾಲೆಮ್ ಗ್ರಾಮದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿತ್ತು. ಗ್ರಾಮಸ್ಥರು ಹಲವು ಬಾರಿ ಪಂಚಾಯಿತಿಗೆ ದೂರು ನೀಡಿದ್ದಾರೆ. ಗ್ರಾಮಸ್ಥರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಪಂಚಾಯತ್ ಬೀದಿ ನಾಯಿಗೆ ವಿಷವುಣಿಸಿ ಕೊಂದಿದ್ದಾರೆ. ಬಳಿಕ ಹೊಂಡದಲ್ಲಿ ಹೂತು ಹಾಕಿದ್ದಾರೆ ಎಂದು ಪ್ರಾಣಿ ಹೋರಾಟಗಾರ್ತಿ ಲಲಿತಾ ಆರೋಪಿಸಿದ್ದಾರೆ.

ಬೀದಿ ನಾಯಿಗೆ ವಿಷಣವುಣಿಸಿ ಕೊಲ್ಲಲಾಗಿದೆ. ಕೆಲವು ನಾಯಿಗಳನ್ನು ಹೊಂಡದಲ್ಲಿ ಹೂತು ಹಾಕಿದ್ದರೆ, ಕೆಲ ನಾಯಿಗಳ ಕಳೆಬರವನ್ನು ಎಸೆಯಲಾಗಿದೆ. ಲಿಂಗಪಾಲೆಮ್ ಗ್ರಾಮದ ಅಂಚಿನಲ್ಲಿರುವ ಕಾಡಿಗೆ ಎಸೆಯಲಾಗಿದೆ. ಈ ಕುರಿತು ಧರ್ಮಜಿಗುಡೆಮ್ ಪೊಲೀಸ್ ಠಾಣೆಲ್ಲಿ ಲಲಿತಾ  ದೂರು ನೀಡಿದ್ದಾರೆ.

ಬೆಕ್ಕಿನ ಮರಿಗಳದ್ದು ಜೀವವೇ ಅಲ್ಲವೆ? ಬೆಳಗಾವಿ ಅಜ್ಜಿಯ ಕಣ್ಣೀರ ಕತೆ

ಗ್ರಾಮ ಪಂಚಾಯತ್ ಕಾರ್ಯದರ್ಶಿ, ಅಧ್ಯಕ್ಷ ಸೇರಿದಂತೆ ಹಲವು ಸಿಬ್ಬಂದಿಗಳ ಮೇಲೆ ದೂರು ದಾಖಲಾಗಿದೆ.  ಇತ್ತ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Follow Us:
Download App:
  • android
  • ios