ಏನ್ ಕೆಲಸ ಅಂತೀರಾ.. ಸೂಪರಾಗಿ ಪಾತ್ರೆ ತೊಳೆಯೋ ಕೋತಿ ಎಲ್ಲೆಡೆ ವೈರಲ್ ಆಗ್ತಿದೆ ಚಾಯ್ ಅಂಗಡಿ ವಿಡಿಯೋ

ನೋಯ್ಡಾ(ಜು.04): ನೀವು ಎಂದಾದರೂ ಸಾಕುಪ್ರಾಣಿಗಳು ಕೆಲಸ ಮಾಡೋದನ್ನು ನೋಡಿದ್ದೀರಾ ? ಅವರು ಅತ್ಯಂತ ಐಷಾರಾಮಿ ಜೀವನವನ್ನು ಆನಂದಿಸುತ್ತಾರೆ ಎಂದು ಭಾವಿಸಿದ್ದೀರಾ ? ಪ್ರಾಣಿಗಳಿಗೂ ಬೇಕಾದ್ದು ಆಹಾರ ನಿದ್ದೆ ಮಾತ್ರ. ಈ ಸಾಕು ಕೋತಿಯನ್ನು ಮನೆಯ ಕೆಲಸಗಳಿಗೆ ಸಹಾಯ ಮಾಡಲು ಆಯ್ಕೆ ಮಾಡಿಕೊಂಡಿದ್ದು ಎಲ್ಲೆಡೆ ವೈರಲ್ ಆಗಿದೆ.

ಚಹಾ ಅಂಗಡಿಯ ಹೊರಗೆ ಮನುಷ್ಯ ಕುಳಿತುಕೊಳ್ಳುವಂತೆಯೇ ಮಂಗಗಳು ಪಾತ್ರೆ ತೊಳೆಯೋ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ವೀಡಿಯೊ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್‌ ಆಗಿದ್ದು, ಮೊದಲು "ಎಲ್ಲರೂ ಕಷ್ಟಪಟ್ಟು ಕೆಲಸ ಮಾಡಬೇಕು" ಎಂಬ ಶೀರ್ಷಿಕೆಯೊಂದಿಗೆ ಘಂಟಾ ಎಂಬ ಪುಟದಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಈ ವೀಡಿಯೊದಲ್ಲಿ ಬಾಲಿವುಡ್ ಸಿನಿಮಾ ರಯೀಸ್‌ನಲ್ಲಿ ಶಾರೂಖ್ ಖಾನ್ ಅವರ ಧ್ವನಿಯಲ್ಲಿ ನೋಡಬಹುದು. ಅದೇನೆಂದರೆ "ಅಮ್ಮಿ ಜಾನ್ ಕೆಹ್ತಿ ಥಿ ಕಿ ಕೊಯಿ ಭಿ ಧಂಡಾ ಚೋಟಾ ನಹಿ ಹೋತಾ, ದಂಧೆ ಸೆ ಬಾದಾ ಕೊಯಿ ಧರಮ್ ನಹಿ ಹೋತಾ" ಎಂಬ ಆಡಿಯೋ ಸೇರಿಸಲಾಗಿದೆ. ಯಾವ ಕೆಲಸವೂ ಕೀಳಲ್ಲ, ಕೆಲಸವನ್ನು ಮೀರಿದ ಧರ್ಮವಿಲ್ಲ ಎಂದು ನನ್ನಮ್ಮ ಹೇಳುತ್ತಿದ್ದರು ಎಂಬುದು ಇದರರ್ಥ.

ಕೋಳಿ ಮರಿಗೆ ಸಿಹಿ ಮುತ್ತು ನೀಡಿ ಬಿಗಿದಪ್ಪಿದ ಕೋತಿ ಮರಿ; ಹೃದಯಸ್ಪರ್ಶಿ ವಿಡಿಯೋ ವೈರಲ್!.

ಕ್ಯಾಮೆರಾ ನಮಗೆ ಚಹಾ ಅಂಗಡಿಯೊಂದನ್ನು ತೋರಿಸುತ್ತದೆ. ಅದರ ಸುತ್ತಲೂ ಜನರು ನಿಂತಿದ್ದಾರೆ. ಅದರಲ್ಲಿ ಕೋತಿ ಪ್ಲೇಟ್ ತೊಳೆಯೋದನ್ನು ಬಹಳ ಆಸಕ್ತಿಯಿಂದ ನೋಡುತ್ತಾರೆ. ನೀರಿನ ಟಬ್‌ನ ಪಕ್ಕ ಕುಳಿತು ಕೋತಿ ಜಾಲಿಯಾಗಿ ಪಾತ್ರೆ ತೊಳಯೋದನ್ನು ಕಾಣಬಹುದು.

View post on Instagram

ವೀಡಿಯೊದ ಕೊನೆಯಲ್ಲಿ, ಸರಿಯಾಗಿ ಪ್ಲೇಟ್ ಸ್ವಚ್ಛವಾಗಿದೆಯೇ ಎಂದು ಪರೀಕ್ಷಿಸಲು ಕೋತಿಯು ತಟ್ಟೆಯನ್ನು ವಾಸನೆ ಮಾಡುವುದನ್ನು ಸಹ ನೋಡಬಹುದು.