ಶಾಪಿಂಗ್ ಮಾಲ್‌ಗೆ ನುಗ್ಗಿದ ಕೋತಿ, ಸುಂದರ ಯುವತಿಗೆ ಮಾಡಿದ್ದೇನು? ಆಕೆಯ ಕೆನ್ನೆ, ಕಾಲು ಜಸ್ಟ್ ಮಿಸ್!

ಉತ್ತರ ಪ್ರದೇಶದ ಝಾನ್ಸಿಯ ಸಿಟಿ ಕಾರ್ಟ್ ಮಾಲ್‌ನಲ್ಲಿ ಯುವತಿಯೊಬ್ಬಳ ಮೇಲೆ ಕೋತಿಯೊಂದು ದಾಳಿ ಮಾಡಿದೆ. ಕೋತಿಯು ಯುವತಿಯ ತಲೆಕೂದಲು ಎಳೆದು, ಕಾಲು ಕಚ್ಚಲು ಯತ್ನಿಸಿದ್ದು, ಯುವತಿ ತನ್ನ ಶೂ ಕಳಚಿ ಕೊಟ್ಟಿದ್ದಾಳೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

monkey enter to shopping mall and attacked on beautiful young woman Just miss her cheek sat

ಎಂದಿನಂತೆ ಬೆಳಗ್ಗೆ ಬಾಗಿಲು ತೆರೆದು ಕಾರ್ಯ ನಿರ್ವಹಿಸುತ್ತಿದ್ದ ಶಾಪಿಂಗ್ ಮಾಲ್ ಒಂದಕ್ಕೆ ಕೆಲ ವಸ್ತುಗಳ ಖರೀದಿಗೆ ಹೋಗಿದ್ದ ಯುವತಿಯ ಮೇಲೆ ಕೋತಿಯೊಂದು ದಾಳಿ ಮಾಡಿದೆ. ಇಲ್ಲಿ ಕಪಿ ಚೇಷ್ಟೆಯನ್ನಷ್ಟೇ ಮಾಡಿದ್ದಲ್ಲದೇ ತನ್ನ ಭಯಂಕರ ಸ್ವರೂಪ ಏನೆಂದು ತೋರಿಸಿದ್ದು, ಯುವತಿ ಬೆಚ್ಚಿ ಬಿದ್ದಿದ್ದಾಳೆ. ನಂತರ, ಯುವತಿ ಕೋತಿಯಿಂದ ತಪ್ಪಿಸಿಕೊಳ್ಳಲು ಏನು ಮಾಡಿದ್ದಾಳೆಂಬ ವಿಡಿಯೋ ವೈರಲ್ ಆಗಿದೆ.

ಉತ್ತರ ಪ್ರದೇಶದ ಝಾನ್ಸಿಯಲ್ಲಿರುವ ಸಿಟಿ ಕಾರ್ಟ್ ಮಾಲ್‌ನಲ್ಲಿರುವ ಶಾಪಿಂಗ್ ಮಾಲ್‌ನಲ್ಲಿ ಈ ಘಟನೆ ನಡೆದಿದೆ. ಎಂದಿನಂತೆ ಶಾಪಿಂಗ್ ಮಾಲ್ ಆರಂಭವಾದಾಗ ಶಾಂತವಾಗಿತ್ತು. ಆದರೆ, ಅನಿರೀಕ್ಷಿತವಾಗಿ ಒಳಗೆ ಬಂದ ಕೋತಿಯಿಂದಾಗಿ ಎಲ್ಲವೂ ಅಸ್ತವ್ಯಸ್ತವಾಗಿದೆ. ಕೋತಿಯು ತನಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡಿದೆ. ಮೊದಮೊದಲು ಕೋತಿಯನ್ನು ನೋಡಿದಾಗ ಜನರು ಅದೇನು ಮಾಡುತ್ತದೆ ನೋಡೋಣವೆಂದು ಕುತೂಹಲದಿಂದ ವೀಕ್ಷಣೆ ಮಾಡುತ್ತಿದ್ದರು. ಆದರೆ, ಈ ಕೋತಿ ತಾವಂದುಕೊಂಡಂತೆ ತನಗೆ ಬೇಕಾಗಿದ್ದನ್ನು ತೆಗೆದುಕೊಂಡು ಹೋಗದೇ ಅಲ್ಲಿದ್ದವರ ಮೇಲೆ ದಾಳಿ ಮಾಡಲು ಮುಂದಾಗಿದೆ. ಈ ವೇಳೆ ಪಕ್ಕದಲ್ಲಿ ಶಾಪಿಂಗ್‌ಗೆ ತೆರಳುತ್ತಿದ್ದ ಯುವತಿಯೊಬ್ಬಳ ಮೇಲೆ ಮಂಗ ದಾಳಿ ಮಾಡಿದೆ. ಆಕೆಯ ತಲೆ ಮೇಲೆ ಕುಳಿತು ಕೂದಲು ಎಳೆದಾಡಿದ್ದಲ್ಲದೇ ಕಾಲನ್ನು ಕಚ್ಚಲು ಹೋಗಿ ಆಕೆ ಹಾಕಿದ್ದ ಶೂ ಕಚ್ಚಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೈರಲ್ ವೀಡಿಯೋ ನೋಡಿದ ನೋಡಿದ ನೆಟ್ಟಿಗರು 'ಮಂಗಗಳು ನಿಜವಾಗಿಯೂ ಇಷ್ಟು ಭಯಾನಕವಾಗಿ ವರ್ತಿಸುತ್ತವೆಯೇ' ಎಂದು ಶಾಕ್ ಆಗಿ ಕಾಮೆಂಟ್ ಮಾಡಿದ್ದಾರೆ. 

ಇನ್ನು ಈ ವೈರಲ್ ವೀಡಿಯೊದ ಆರಂಭದಲ್ಲಿ, ಕೋತಿಯು ಬಟ್ಟೆಗಳನ್ನು ನೇತುಹಾಕಿರುವ ಸ್ಟ್ಯಾಂಡ್‌ಗಳ ಮೇಲೆ ಜಿಗಿಯುವುದನ್ನು ಕಾಣಬಹುದು. ಸುತ್ತಲೂ ಜನರು ಜಮಾಯಿಸುತ್ತಿದ್ದಂತೆ, ಗಾಬರಿಗೊಂಡ ಕೋತಿ ಅಲ್ಲಿದ್ದವರಿಗೆ ತೊಂದರೆ ಕೊಡಲು ಮುಂದಾಯಿತು. ತಕ್ಷಣ ಬಟ್ಟೆಯ ಸ್ಟ್ಯಾಂಡ್‌ನಿಂದ ಹಾರಿ ಹತ್ತಿರದ ಯುವತಿಯ ಭುಜದ ಮೇಲೆ ಕುಳಿತಿತು. ನಂತರ, ಯುವತಿ ಭಯದಿಂದ ನೆಲದ ಮೇಲೆ ಕುಳಿತುಕೊಂಡಳು. ಯುವತಿಯ ದೇಹದಿಂದ ಕೋತಿಯನ್ನು ಓಡಿಸಲು ಸುತ್ತ ಮುತ್ತಲಿದ್ದ ಜನರು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೆಲವರು ಹಣ್ಣು ತೋರಿಸಿ ಕೋತಿಯನ್ನು ಬೇರೆಡೆ ಸಾಗಹಾಕಲು ಯತ್ನಿಸಿದರೂ, ಬಾಳೆಹಣ್ಣು ತಿಂದು ಪುನಃ ಅದೇ ಯುವತಿಯ ತಲೆ ಮೇಲೆ ಹೋಗಿ ಕುಳಿತುಕೊಂಡಿದೆ.

ಇದನ್ನೂ ಓದಿ: ಭಾರೀ ರಿಯಾಯಿತಿ ಘೋಷಿಸಿದ ಏರ್‌ಇಂಡಿಯಾ, ₹1,500ಕ್ಕೆ ವಿಮಾನ ಟಿಕೆಟ್! ಮಿಸ್ ಮಾಡ್ಬೇಡಿ!

ಈ ವೇಳೆ ಸುತ್ತಲೂ ಇದ್ದವರು ಕೋತಿಯನ್ನು ಒಂದು ಬೆಡ್‌ಶೀಟ್ ಹಾಕಿ ಹಿಡಿಯಲು ತುಂಬಾ ಪ್ರಯತ್ನ ಮಾಡಿದರೂ, ಯುವತಿಯಿಂದ ಬೇರೆ ಹಾರುತ್ತಾ ಪುನಃ ಯುವತಿಯ ಮೇಲೆ ಹೋಗಿ ಕುಳಿತುಕೊಂಡು ಕಚ್ಚುವುದಕ್ಕೆ ಮುಂದಾಯಿತು. ಆಗ ಯುವತಿ ಚೀರಾಡಿದಾಗ ಕೆಳಗೆ ಜಿಗಿದು ಕಾಲಿಗೆ ಕಚ್ಚಲು ಮುಂದಾಯಿತು. ಆಗ ಯುವತಿ ಕಾಲಿಗೆ ಹಾಕಿದ್ದ ಶೂ ಅನ್ನು ಬಿಚ್ಚಿ ಕೋತಿ ಕೈಗೆ ಕೊಟ್ಟಳು. ಆಗ ಕೋತಿ ಯುವತಿ ಶೂ ಅನ್ನು ಕಚ್ಚಿ ಹಾಕಿದೆ. 

ಪುನಃ ಕೋತಿಯು ಯುವತಿ ಮೇಲೆ ದಾಳಿ ಮಾಡಲು ಪ್ರಾರಂಭಿಸಿದಾಗ ಶಾಪಿಂಗ್ ಮಾಲ್‌ನಲ್ಲಿರುವ ಜನರು ಅದನ್ನು ಕೆಲವು ಹೊದಿಕೆಗಳಿಂದ ಮುಚ್ಚಿ ಕೋತಿಯನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆಗ ಯುವತಿಯನ್ನು ಕೋತಿಗೆ ಕಾಣದಂತೆ ಡ್ರೆಸಿಂಗ್ ರೂಮಿನೊಳಗೆ ಕಳುಹಿಸುತ್ತಾರೆ. ನಂತರ, ಕೋತಿಯನ್ನು ಸರೆ ಹಿಡಿಯಲು ಕೆಲವರು ಪ್ರಯತ್ನ ಮಾಡುತ್ತಾರೆ. ಆಗ ತನಗೆ ಸಿಕ್ಕಿದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಾ ಶಾಪಿಂಗ್‌ ಮಾಲ್ ತುಂಬೆಲ್ಲಾ ಓಡಾಡಿದೆ. ಕೊನೆಯಲ್ಲಿ ಈ ಕೋತಿಯ ವಿಡಿಯೋ ಮಾಡುತ್ತಿದ್ದವರ ಮೇಲೆ ಕೋತಿ ದಾಳಿ ಮಾಡಲು ಬಂದಿದ್ದು, ಅವರು ಹೆದರಿಕೊಂಡು ಓಡಿತ್ತಾ ಕೋತಿಯಿಂದ ತಪ್ಪಿಸಿಕೊಂಡು ವಿಡಿಯೋ ಕೊನೆಗೊಳಿಸಿದ್ದಾರೆ. ಆದರೆ, ಕೋತಿಯನ್ನು ಹೇಗೆ ಶಾಪಿಂಗ್ ಮಾಲ್‌ನಿಂದ ಹೊರಗೆ ಹಾಕಿದರು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: ಅಸ್ಸಾಂ ಮಾಟಮಂತ್ರ, ಮಯೊಂಗ್ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಯೂಟ್ಯೂಬರ್ ಕ್ಷಮೆ, ಏನಿದು ವಿವಾದ?

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಯುಬತಿ ಅನುಭವಿಸಿದ ಆಘಾತದ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದು, ಶಾಪಿಂಗ್ ಮಾಲ್‌ಗೆ ಕೋತಿ ಹೇಗೆ ಬಂದಿತೆಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆದರೆ ಘಟನೆಯ ಬಗ್ಗೆ ಅಂಗಡಿ ಮಾಲ್ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವರದಿಗಳು ಹೇಳುತ್ತವೆ.

Latest Videos
Follow Us:
Download App:
  • android
  • ios