ಅಸ್ಸಾಂ ಮಾಟಮಂತ್ರ, ಮಯೊಂಗ್ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಯೂಟ್ಯೂಬರ್ ಕ್ಷಮೆ, ಏನಿದು ವಿವಾದ?

Youtuber Abhishek Kar apology ಅಭಿಷೇಕ್ ಕರ್ ಅವರು ಅಸ್ಸಾಂನ ಮಯೊಂಗ್ ಮಹಿಳೆಯರ ಬಗ್ಗೆ ಮಾಟಮಂತ್ರದ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ಅಸ್ಸಾಂ ಜನತೆ ಮತ್ತು ಸರ್ಕಾರದ ಆಕ್ಷೇಪದ ನಂತರ ಕ್ಷಮೆ ಕೇಳಿದ್ದಾರೆ.

finfluencer abhishek kar issues apology for comments on assam history traditions rav

ಗುವಾಹಟಿ: ‘ಅಸ್ಸಾಂನ ಮಯೊಂಗ್ ಮಹಿಳೆಯರು ಮಾಟಮಂತ್ರದ ಮೂಲಕ ಮನುಷ್ಯರನ್ನು ಮೇಕೆಗಳಾಗಿ, ಅದೇ ಮೇಕೆಯನ್ನು ಮನುಷ್ಯರಾಗಿ ಬದಲಿಸುತ್ತಾರೆ. ಹೀಗೆ ಮಾಡಿ ಅವರ ಜತೆ ಸೆಕ್ಸ್‌ ನಡೆಸುತ್ತಾರೆ’ ಎಂದು ಯೂಟ್ಯೂಬರ್‌ ಅಭಿಷೇಕ್ ಕರ್ ನೀಡಿದ ಹೇಳಿಕೆ ವಿವಾದಕ್ಕೀಡಾಗಿದೆ.ಇದಕ್ಕೆ ಅಸ್ಸಾಂ ಜನತೆ ಮಾತ್ರವಲ್ಲ ಸರ್ಕಾರ ಕೂಡ ಆಕ್ಷೇಪ ವ್ಯಕ್ತಪಡಿಸಿದೆ. ಕೂಡಲೇ ಕರ್‌ ಕ್ಷಮೆ ಕೇಳಿದ್ದಾರೆ. ಯಾರನ್ನೂ ನೋಯಿಸುವ ಉದ್ದೇಶ ತಮಗೆ ಇರಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ: Watch | 'ಹುಣ್ಣಿಮೆಯಂದು ಗರ್ಭಧರಿಸಬೇಡಿ..': ವಿದ್ಯಾರ್ಥಿನಿಯರಿಗೆ ಸಲಹೆ ಕೊಟ್ಟ ಡಿಐಜಿ ವಿಡಿಯೋ ವೈರಲ್!

ಅಸ್ಸಾಂನ ಇತಿಹಾಸ ಮತ್ತು ಸಂಪ್ರದಾಯಗಳ ಬಗ್ಗೆ ಅವಹೇಳನ

‘ವ್ಯಾಪಾರಿ ಹೂಡಿಕೆದಾರ ಮತ್ತು ಮಾರ್ಗದರ್ಶಕ’ ಎಂದು ಗುರುತಿಸಿಕೊಳ್ಳುವ ಅಭಿಷೇಕ್ ಕರ್, ತನ್ನ ರಿಯಾ ಉಪ್ರೇತಿ ಹೆಸರಿನ ಯೂಟ್ಯೂಬ್ ಚಾನೆಲ್‌ನ ಪೋಡ್‌ಕಾಸ್ಟ್‌ನಲ್ಲಿ ಅಸ್ಸಾಂನ ಇತಿಹಾಸ ಮತ್ತು ಸಂಪ್ರದಾಯಗಳ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದರು. ಅಸ್ಸಾಂ ಮಯೋಂಗ್ ಹಳ್ಳಿಯಲ್ಲಿ ಮಹಿಳೆಯರು ತಮ್ಮ ಮಾಂತ್ರಿಕ ಶಕ್ತಿ ಬಳಸಿಕೊಂಡು ಮಾನವರನ್ನು ಮೇಕೆಗಳನ್ನಾಗಿ, ಅದೇ ಮೇಕೆಗಳನ್ನು ಮಾನವರನ್ನಾಗಿ ಪರಿವರ್ತಿಸುತ್ತಾರೆ. ಅವರ ಜತೆ ಲೈಂಗಿಕ ಕ್ರಿಯೆ ನಡೆಸುತ್ತಾರೆ ಎಂದಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Latest Videos
Follow Us:
Download App:
  • android
  • ios