ಪ್ರಾಣಿಗಳು ಮೊಬೈಲ್ ಗೀಳಿಗೆ ಒಳಗಾಗಿರುವುದನ್ನು ಎಲ್ಲಾದರೂ ನೋಡಿದ್ದೀರಾ. ಇಲ್ಲ ಎಂದಾದರೆ ಇಲ್ಲಿದೆ ನೋಡಿ, ಕೋತಿಯೊಂದು ಮೊಬೈಲ್ ಫೋನ್ ಅನ್ನು ಮನುಷ್ಯರಿಗಿಂತ ಫಾಸ್ಟ್ ಆಗಿ ಹೇಗೆ ಸ್ಕ್ರಾಲ್ ಮಾಡುತ್ತಿದೆ ಅಂತ ನೀವಿಲ್ಲಿ ನೋಡಬಹುದು.
ಸ್ಮಾರ್ಟ್‌ಫೋನ್ ಗೀಳು ಈಗ ತೊಟ್ಟಿಲ ಕೂಸಿನಿಂದ ಹಿಡಿದು ವೃದ್ಧರವರೆಗೂ ಎಲ್ಲರನ್ನು ಕಾಡುತ್ತಿದೆ. ಒಂದು ಕ್ಷಣ ಮೊಬೈಲ್ ಕೈಲಿಲ್ಲದಿದ್ದರೆ ಜನ ತರಗುಟ್ಟುತ್ತಾರೆ. ಎಲ್ಲವನ್ನು ಕಳೆದುಕೊಂಡಂತೆ ಚಡಪಡಿಸುತ್ತಾರೆ. ಊಟ ಮಾಡುವುದರಿಂದ ಹಿಡಿದು ಟಾಯ್ಲೆಟ್‌ಗೆ ಹೋಗುವವರೆಗೂ ಕೈಯಲ್ಲಿ ಮೊಬೈಲ್ ಇರಲೇಬೇಕು. ಅಷ್ಟರ ಮಟ್ಟಿಗೆ ಮೊಬೈಲ್ ಫೋನ್ ಜನರನ್ನು ಆವರಿಸಿದೆ. ಆದರೆ ಪ್ರಾಣಿಗಳು ಮೊಬೈಲ್ ಗೀಳಿಗೆ ಒಳಗಾಗಿರುವುದನ್ನು ಎಲ್ಲಾದರೂ ನೋಡಿದ್ದೀರಾ. ಇಲ್ಲ ಎಂದಾದರೆ ಇಲ್ಲಿದೆ ನೋಡಿ, ಕೋತಿಯೊಂದು ಮೊಬೈಲ್ ಫೋನ್ ಅನ್ನು ಮನುಷ್ಯರಿಗಿಂತ ಫಾಸ್ಟ್ ಆಗಿ ಹೇಗೆ ಸ್ಕ್ರಾಲ್ ಮಾಡುತ್ತಿದೆ ಅಂತ ನೀವಿಲ್ಲಿ ನೋಡಬಹುದು.
ಉದ್ಯಮಿ ಆನಂದ್ ಮಹೀಂದ್ರಾ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 25 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಬೆಡ್ ಮೇಲೆ ಮಲಗಿದ್ದರೆ, ಪಕ್ಕದಲ್ಲೇ ಕೋತಿಯೊಂದು ಕುಳಿತುಕೊಂಡು ಮೊಬೈಲ್‌ನ್ನು ಸ್ಕ್ರಾಲ್ ಮಾಡುತ್ತಾ ಒಂದೊಂದೇ ವೀಡಿಯೋವನ್ನು ನೋಡುತ್ತಿದೆ. ಇಷ್ಟವಾದುದನ್ನು ನೋಡಿ ಇಷ್ಟವಿಲ್ಲದನ್ನು ಮುಂದಕ್ಕೆ ಸ್ಕ್ರಾಲ್ ಮಾಡುತ್ತಾ ಮತ್ತೊಂದು ಕೈಯಲ್ಲಿ ಏನನ್ನೋ ತಿಂದುಕೊಳ್ಳುತ್ತಾ ಕೋತಿ ತನ್ನ ಕ್ವಾಲಿಟಿ ಟೈಮ್ ಅನ್ನ ಎಂಜಾಯ್ ಮಾಡ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋವನ್ನು ಮೂರು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.
ಈ ಮೊಬೈಲ್‌ನಿಂದ ಮಕ್ಕಳು ಮಾತ್ರವಲ್ಲ, ದಾಂಪತ್ಯವೂ ಹಾಳು!
ಈ ಬಡ ಕೋತಿಯನ್ನು ಇಂತಹ ಮಾನವೀಯತೆಯಿಂದ (Humanity) ರಕ್ಷಿಸಿ ಎಂದು ಬರೆದು ಈ ವಿಡಿಯೋವನ್ನು ಆನಂದ್ ಮಹೀಂದ್ರಾ ಟ್ವಿಟ್ ಮಾಡಿದ್ದಾರೆ. ಈ ವಿಡಿಯೋಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಇಂದು ಇನ್ಸ್ಟಾಗ್ರಾಮ್ ವೀಡಿಯೋಗಳ ಹುಚ್ಚು ಇಲ್ಲದವರು ತೀರಾ ಕಡಿಮೆ. ಮಾಡಲು ಕೆಲಸವಿಲ್ಲ, ಸಮಯ ಹೋಗುತ್ತಿಲ್ಲ ಎಂದಾದರೆ ಕೂಡಲೇ ಮೊಬೈಲ್ ಹಿಡಿದು ಇನ್ಸ್ಟಾಗ್ರಾಮ್ ನೋಡಲು ಶುರು ಮಾಡುತ್ತಾರೆ. ಈ ಇನ್ಸ್ಟಾಗ್ರಾಮ್‌ನಲ್ಲಿ(Instagram) ಇಲ್ಲದ ವಿಚಾರಗಳಿಲ್ಲ. ಎಲ್ಲ ರೀತಿಯ ಮನೋರಂಜನಾ ಕಂಟೆಂಟ್‌ಗಳು ಇಲ್ಲಿ ಲಭ್ಯವಿರುವುದರಿಂದ ಸಮಯ ಹೋಗುವುದೇ ತಿಳಿಯುವುದಿಲ್ಲ. ಅದೇ ರೀತಿ ಇಲ್ಲಿ ಕೋತಿ ಇನ್ಸ್ಟಾಗ್ರಾಮ್ ನೋಡುವಂತೆ ಕಾಣುತ್ತಿದ್ದು, ಒಂದೊಂದೇ ವೀಡಿಯೋವನ್ನು ಸ್ಕ್ರಾಲ್ ಮಾಡುವುದನ್ನು ನೋಡಬಹುದಾಗಿದೆ.
ಈ ವಿಡಿಯೋ ನೋಡಿದ ಒಬ್ಬರು ಅಂತೂ ಕೋತಿಯನ್ನು ಕೂಡ ಮೊಬೈಲ್ ಫೋನ್ (Mobile phone) ಹಾಳು ಮಾಡಿತು ಎಂದು ಕಾಮೆಂಟ್ ಮಾಡಿದ್ದಾರೆ. ಡಿಜಿಟಲ್ ಡ್ರಗ್‌ನಿಂದ ಮನುಷ್ಯರು ಈಗಾಗಲೇ ಹಾಳಾಗಿ ಹೋಗಿದ್ದಾರೆ. ಕನಿಷ್ಠ ಪ್ರಾಣಿಗಳನ್ನಾದರು ಕಾಪಾಡಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬರು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮತ್ತೊಂದು ಹಂತ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಸ್ವಲ್ಪ ಹೊತ್ತು ಕೋತಿ ಕೈಲಿ ಮೊಬೈಲ್ ಇದ್ರೆ ಮುಂದೆ ರೈಲು ಹಾಗೂ ವಿಮಾನ ಟಿಕೆಟ್ ಕೂಡ ಅದೇ ಬುಕ್ ಮಾಡ್ಬಹುದು ಎಂದು ಕಾಮೆಂಟ್ ಮಾಡಿದ್ದಾರೆ.
ಮಕ್ಕಳನ್ನು ಫೋನ್‌ನಿಂದ ದೂರವಿಡಲು ಈ ಟಿಪ್ಸ್ ಟ್ರೈ ಮಾಡಿ!
ಒಟ್ಟಿನಲ್ಲಿ ಈ ವಿಡಿಯೋ ಮೊಬೈಲ್ ಹುಚ್ಚು ಹೊಂದಿರುವ ಜನರನ್ನು ಬೆರಗುಗೊಳಿಸಿದೆ. ಉದ್ಯಮಿ ಆನಂದ್ ಮಹೀಂದ್ರಾ (Anand Mahindra) ಅವರು ಇಂತಹ ಹಲವು ಕುತೂಹಲಕಾರಿ ವಿಡಿಯೋಗಳನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಹಲವು ಸ್ಮಾರ್ಟ್ ಜುಗಾಡ್ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡ ಅಥವಾ ನಿರ್ಮಿಸಿದ ಹಳ್ಳಿ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಕೂಡ ಮಹೀಂದ್ರಾ ಮಾಡುತ್ತಿದ್ದಾರೆ.