Asianet Suvarna News Asianet Suvarna News

ರಾಜನಾಥ್‌ ಸಿಂಗ್‌ಗೆ ಕುದುರೆ ಗಿಫ್ಟ್ ನೀಡಿದ ಮಂಗೋಲಿಯಾ ಸರ್ಕಾರ

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಮೊದಲ ಬಾರಿ ಮಂಗೋಲಿಯಾಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಈ ಭೇಟಿಯ ನೆನಪಿಗಾಗಿ ಮಂಗೋಲಿಯಾ ಅಧ್ಯಕ್ಷ ಉಖ್ನಾಗಿನ್‌ ಖುರೇಲ್‌ಸುಖ್‌ ಅವರು ಬಿಳಿ ಕುದುರೆಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

Mongolia govt gifted horse to defence Minister Rajnath singh akb
Author
First Published Sep 8, 2022, 9:17 AM IST

ಉಲಾನ್‌ಬಾತರ್‌: ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಮೊದಲ ಬಾರಿ ಮಂಗೋಲಿಯಾಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಈ ಭೇಟಿಯ ನೆನಪಿಗಾಗಿ ಮಂಗೋಲಿಯಾ ಅಧ್ಯಕ್ಷ ಉಖ್ನಾಗಿನ್‌ ಖುರೇಲ್‌ಸುಖ್‌ ಅವರು ಬಿಳಿ ಕುದುರೆಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. 7 ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೂ ಮಂಗೋಲಿಯಾ (Mongolia), ಕುದುರೆಯನ್ನು (Horse) ಉಡುಗೊರೆಯನ್ನಾಗಿ (Gift)ನೀಡಿತ್ತು. ‘ಮಂಗೋಲಿಯಾದಲ್ಲಿರುವ ಸ್ನೇಹಿತರಿಂದ ವಿಶೇಷವಾದ ಉಡುಗೊರೆಯನ್ನು ಪಡೆದುಕೊಂಡಿದ್ದೇನೆ. ಇದಕ್ಕೆ ತೇಜಸ್‌ ಎಂದು ನಾಮಕರಣ ಮಾಡಿದ್ದೇನೆ. ಧನ್ಯವಾದಗಳು ಮಂಗೋಲಿಯಾ ಎಂದು ರಾಜನಾಥ್‌ ಸಿಂಗ್‌ (Rajanath Singh) ಟ್ವೀಟ್‌ ಮಾಡಿದ್ದಾರೆ.

ರಾಜನಾಥ್ ಸಿಂಗ್ ಅವರು, ಪೂರ್ವ ಏಷ್ಯಾದ ದೇಶಗಳೊಂದಿಗೆ ವ್ಯೂಹಾತ್ಮಕ ಪಾಲುದಾರಿಕೆ ಮತ್ತು ರಕ್ಷಣಾ ಸಹಕಾರವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಐದು ದಿನಗಳ ಮಂಗೋಲಿಯಾ ಪ್ರವಾಸ ಕೈಗೊಂಡಿದ್ದರು. ನಿನ್ನೆ ಮಂಗೋಲಿಯಾದ ರಕ್ಷಣಾ ಸಚಿವ ಸೈಖನ್‌ಬಾಯರ್ ಗುರ್ಸೆಡ್ ಜೊತೆ ಉಲನ್‌ಬಾತರ್‌ನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದ ರಾಜನಾಥ್‌ ಸಿಂಗ್ , ಹಲವು ಪ್ರಾದೇಶಿಕ ಹಾಗೂ ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಮಂಗೋಲಿಯಾದ ರಕ್ಷಣಾ ಸಚಿವ ಸೈಖನ್‌ಬಾಯರ್ ಗುರ್ಸೆಡ್ (Saikhanbayar Gursed) ಜೊತೆ ಉಲನ್‌ಬಾತರ್‌ನಲ್ಲಿ ಫಲಪ್ರದವಾದ ಮಾತುಕತೆ ಎಂದು ರಾಜನಾಥ್ ಸಿಂಗ್ ಅವರು ಟ್ವಿಟ್ ಮಾಡಿದ್ದರು. 

ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಶತ್ರುರಾಷ್ಟ್ರದಲ್ಲಿ ತಳಮಳ ಸೃಷ್ಟಿಸಿದ ರಾಜನಾಥ್ ಹೇಳಿಕೆ!

ಇದೇ ವೇಳೆ ರಾಜನಾಥ್ ಸಿಂಗ್ ಅವರು, ಉಲನ್‌ಬಾತರ್‌ನಲ್ಲಿರುವ (Ulaanbaatar) ನ್ಯಾಷನಲ್ ಡಿಫೆನ್ಸ್‌ ವಿಶ್ವವಿದ್ಯಾಲಯದಲ್ಲಿ ಸೈಬರ್ ಸೆಕ್ಯೂರಿಟಿ ಟ್ರೈನಿಂಗ್ ಸೆಂಟರ್ ಅನ್ನು ಉದ್ಘಾಟಿಸಿದರು. ಇದು ಭಾರತದ ಸರ್ಕಾರದ ನೆರವಿನಿಂದ ನಿರ್ಮಿಸಲ್ಪಟ್ಟಿದೆ.  ಇದೊಂದು ಸೈಬರ್ ಸಂಬಂಧಿ ಅಂತಾರಾಷ್ಟ್ರೀಯ ಸಹಕಾರದ ಯೋಜನೆಯಾಗಿದೆ. ಇದು ಮಂಗೋಲಿಯನ್ ಶಸ್ತ್ರಾಸ್ತ್ರ ಪಡೆಗಳಿಗೆ (Mongolian Armed Forces) ಸೈಬರ್ ಭದ್ರತೆಯ ಬಗ್ಗೆ ತರಬೇತಿ ನೀಡುವ ಉದ್ದೇಶ ಹೊಂದಿದೆ. ಅಲ್ಲದೇ ಮಂಗೋಲಿಯನ್ ಸಂಸತ್‌ನ ಸ್ಪೀಕರ್ ಗೊಬೊಜವ್ಯಾಬ್ ಝಂದಶತರ್ ಅವರನ್ನು ಕೂಡ ಭೇಟಿ ಮಾಡಿದ್ದು, ಬೌದ್ಧಧರ್ಮದ  ಪರಂಪರೆಯನ್ನು ಉತ್ತೇಜಿಸಲು ಮತ್ತು ವಿಸ್ತರಿಸಲು ಅವರು ನೀಡಿದ ನಿರಂತರ ಬೆಂಬಲಕ್ಕಾಗಿ ಅವರನ್ನು ಅಭಿನಂದಿಸಿದರು.

ಅಗ್ನಿಪಥ್‌ ಜಾರಿಗೆ ಮೊದಲೇ ಚಿಂತನೆ ನಡೆಸಿಲ್ಲವೇ? ರಾಜನಾಥ್ ಸಿಂಗ್ ಹೇಳಿದ್ದೇನು?

 

Follow Us:
Download App:
  • android
  • ios