Asianet Suvarna News Asianet Suvarna News

ಆಫ್ಘನ್‌-ಪಾಕ್‌ ‘ಡ್ರಗ್ಸ್‌ ಟೆರ​ರಿ​ಸಂ': 21 ಸಾವಿರ ಕೋಟಿ ರು. ಹೆರಾ​ಯಿ​ನ್‌ ವಶ​ಕ್ಕೆ!

* ಗುಜ​ರಾತ್‌ ಬಂದ​ರಲ್ಲಿ 21 ಸಾವಿರ ಕೋಟಿ ರು. ಹೆರಾ​ಯಿ​ನ್‌ ವಶ​ಕ್ಕೆ

* ಈ ಹೆರಾ​ಯಿನ್‌ ಆಷ್ಘಾ​ನಿ​ಸ್ತಾ​ನಲ್ಲಿ ಉತ್ಪಾ​ದನೆ ಆಗಿದ್ದು ದೃಢ

* ಡ್ರಗ್ಸ್‌ ಸಾಗಣೆಯ ಹಿಂದೆ ತಾಲಿಬಾನ್‌-ಐಎಸ್‌ಐ ನಂಟಿನ ಬಗ್ಗೆ ಶಂಕೆ

* ಡ್ರಗ್ಸ್‌​ನಿಂದ ಸಂಗ್ರ​ಹ​ವಾದ ಹಣ ಉಗ್ರ ಚಟು​ವ​ಟಿ​ಕೆಗೆ ಬಳ​ಕೆ

Money Laundering Probe Into Seizure Of 3000 Kg Heroin At Gujarat Port pod
Author
Bangalore, First Published Sep 22, 2021, 8:50 AM IST

ಅಹಮದಾಬಾದ್‌(ಸೆ.22): ಗುಜರಾತ್‌ನ ಮುಂದ್ರಾ ಬಂದರಿನಲ್ಲಿ 21 ಸಾವಿರ ಕೋಟಿ ರು. ಮೌಲ್ಯದ ಹೆರಾಯಿನ್‌ ಇದ್ದ ಕಂಟೇನರ್‌ಗಳನ್ನು ಜಪ್ತಿ ಮಾಡಿದ ಪ್ರಕರಣದ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ- ಐಎಸ್‌ಐನ ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಪೂರೈಕೆ ಮಾಡುವ ಉದ್ದೇಶ ಇತ್ತು ಎಂಬ ಆತಂಕ​ಕಾ​ರಿ ಸಂಗತಿ ಬಯಲಾಗಿದೆ.

ಇರಾ​ನ್‌​ನಿಂದ ಬಂದ ಹಡ​ಗಿ​ನಲ್ಲಿ ಸಾಗಿಸಲಾಗುತ್ತಿದ್ದ ಸುಮಾರು 3 ಟನ್‌ ತೂಕದ ಹೆರಾಯಿನ್‌ ಇದ್ದ ಎರಡು ಕಂಟೇನರ್‌ಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಕಳೆದ ವಾರ ಜಪ್ತಿ ಮಾಡಿತ್ತು. ಇವನ್ನು ಮೊದಲು ಅಷ್ಘಾ​ನಿ​ಸ್ತಾ​ನ​ದಲ್ಲಿ ಲೋಡ್‌ ಮಾಡಿ ಇರಾ​ನ್‌ಗೆ ಕಳಿ​ಸ​ಲಾ​ಗಿ​ತ್ತು ಅಲ್ಲಿಂದ ಇವು ಭಾರ​ತಕ್ಕೆ ಸಾಗಣೆ ಆಗಿ​ವೆ. ಇವುಗಳ ಮಾರುಕಟ್ಟೆಮೌಲ್ಯ ಸುಮಾರು 21 ಸಾವಿರ ಕೋಟಿ ರು. ಇದ್ದಿರಬಹುದು ಎಂದು ಅಂದಾಜಿಸಲಾಗಿದೆ.

ಭಾರತವೇ ಟಾರ್ಗೆಟ್‌:

ಈ ಹಿಂದಿನ ಅಷ್ಘಾನಿಸ್ತಾನ ಸರ್ಕಾರ ಹೆರಾಯಿನ್‌ ಅನ್ನು ನಿಷೇಧಿಸಿತ್ತು. ಆದರೆ, ತಾಲಿಬಾನ್‌ ಸರ್ಕಾರ ಬಂದ ಬಳಿಕ ಮಾದಕವಸ್ತುಗಳ ಮೇಲಿನ ನಿಷೇಧವನ್ನು ರದ್ದುಪಡಿಸಿದೆ. ಹೀಗಾಗಿ ಅಷ್ಘಾನಿಸ್ತಾನದಿಂದ ರಾಜಾರೋಷವಾಗಿ ಹೆರಾಯಿನ್‌ ಅನ್ನು ಸಾಗಾಟ ಮಾಡಲಾಗುತ್ತಿದೆ. ಅದರಲ್ಲೂ ಭಾರತದಲ್ಲಿ ಪಾಕಿ​ಸ್ತಾನ ಗುಪ್ತ​ಚರ ಸಂಸ್ಥೆ ‘ಐ​ಎ​ಸ್‌​ಐ​’ ಪ್ರಚೋದಿತ ಉಗ್ರಗಾಮಿ ಚಟುವಟಿಕೆಗಳಿಗೆ ಹಣ ಪೂರೈಕೆ ಮಾಡುವ ಉದ್ದೇಶದಂದ ಹೆರಾಯಿನ್‌ ಅನ್ನು ಗುಜರಾತ್‌ ಬಂದರಿಗೆ ಸಾಗಣೆ ಮಾಡಲಾಗಿದೆ ಎಂಬ ಬಗ್ಗೆ ಗುಪ್ತಚರ ಸಂಸ್ಥೆಗಳು ಬಲವಾದ ಶಂಕೆ ವ್ಯಕ್ತಪಡಿಸಿವೆ.

ಪಾಕಿಸ್ತಾನ ಮತ್ತು ತಾಲಿಬಾನ್‌ನ ಭಾರತ ವಿರೋಧಿ ಗುಂಪುಗಳು ಸೇರಿಕೊಂಡು ಅಷ್ಘಾನಿಸ್ತಾನದ ಹೆರಾಯಿನ್‌ ಅನ್ನು ಉಗ್ರರ ಚಟುವಟಿಕೆಗಳಿಗೆ ಹಣ ಹೊಂದಿಸಲು ಭಾರತಕ್ಕೆ ಸಾಗಾಟ ಮಾಡಲು ಯತ್ನಿಸುತ್ತಿವೆ ಎಂದು ಗುಪ್ತಚರ ಸಂಸ್ಥೆಗಳು ಬಲವಾದ ಅನುಮಾನ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ಗುಪ್ತಚರ ಸಂಸ್ಥೆಗಳು ಮಾದಕವಸ್ತು ಸಾಗಾಟ ಜಾಲದ ಕಿಂಗ್‌ಪಿನ್‌ ಅನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಯತ್ನ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ಪತ್ತೆ ಆಗಿದ್ದು ಹೇಗೆ?:

ಆಂಧ್ರ ಪ್ರದೇಶ ಮೂಲದ ಕಂಪನಿಯೊಂದು ಆಷ್ಘಾನಿಸ್ತಾನದಿಂದ ಆಮದು ಮಾಡಿಕೊಂಡಿದ್ದ ಅರೆ ಸಂಸ್ಕರಿಸಿದ ಟಾಲ್‌್ಕ ಕಲ್ಲುಗಳ ಕಂಟೇನರ್‌ ಮಧ್ಯೆ ಹೆರಾಯಿನ್‌ ತುಂಬಿದ್ದ ಕಂಟೇನರ್‌ಗಳನ್ನು ಇಟ್ಟು ಇರಾನ್‌ನ ಅಬ್ಬಾಸ್‌ ಬಂದರಿನ ಮೂಲಕ ಸೆ. 13-14ರಂದು ಗುಜರಾತ್‌ಗೆ ರಾವಾನಿಸಲಾಗಿತ್ತು. ತಪಾಸಣೆಯ ವೇಳೆ ಅವುಗಳಲ್ಲಿ ಹೆರಾಯಿನ್‌ ಪತ್ತೆ ಆಗಿತ್ತು.

ಈ ಸಂಬಂಧ ಚೆನ್ನೈ ಮೂಲಕ ದಂಪತಿ ಹಾಗೂ ಹಲವು ಆಫ್ಘನ್‌ ನಾಗರಿಕರನ್ನು ದೆಹಲಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಂಧಿಸಲಾಗಿದೆ. ಡ್ರಗ್ಸ್‌ ಸಾಗಣೆಯ ಹಿಂದೆ ತಾಲಿಬಾನ್‌-ಐಎಸ್‌ಐ ನಂಟಿನ ಬಗ್ಗೆ ಬಂಧಿತರನ್ನು ತೀವ್ರವಾಗಿ ವಿಚಾರಣೆಗೆ ಗುರಿಪಡಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದೇ ವೇಳೆ ವಶಪಡಿಸಿಕೊಳ್ಳಲಾದ ಹೆರಾಯಿನ್‌ ಪೊಟ್ಟಣಗಳನ್ನು ಗಾಂಧಿ ನಗರ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯದ ಲ್ಯಾಬೋರೇಟರಿಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಅತ್ಯುತ್ತಮ ಗುಣಮಟ್ಟದ ಹೆರಾಯಿನ್‌ ಅನ್ನು ಅಷ್ಘಾನಿಸ್ತಾನದಲ್ಲಿ ಉತ್ಪಾ​ದಿ​ಸಿದ್ದು ಎಂದು ಗೊತ್ತಾಗಿದೆ. 1 ಕೇಜಿ ಹೆರಾಯಿನ್‌ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 7 ಕೋಟಿ ರು. ಬೆಲೆ ಇದೆ.

Follow Us:
Download App:
  • android
  • ios