16 ವರ್ಷದ ಬಾಲಕಿ ರಸ್ತೆಯಲ್ಲಿ ಹೋಗುವಾಗ ಕಿರುಕುಳ ನೀಡಿದ 15 ವರ್ಷದ ಹುಡುಗನಿಗೆ ಪಂಚಾಯಿತಿಯು ಚಪ್ಪಲಿಯಲ್ಲಿ ಕಪಾಳಮೋಕ್ಷ ಮಾಡಿಕೊಳ್ಳಲು ಹೇಳಿ ಬಿಟ್ಟು ಬಿಟ್ಟಿದೆ.  

ಆಗ್ರಾ: ಮಥುರಾದ ಗೋವರ್ಧನ ಎಂಬಲ್ಲಿ ಪಶ್ಚಿಮ ಬಂಗಾಳದ 16 ವರ್ಷದ ಬಾಲಕಿಗೆ 15 ವರ್ಷದ ಯುವಕನೊಬ್ಬ ಕಿರುಕುಳ ನೀಡಿದ್ದಾನೆ. ಘಟನೆಯನ್ನು ಸಿಸಿಟಿವಿ ದೃಶ್ಯಾವಳಿಗಳು ಸೆರೆ ಹಿಡಿದಿದ್ದು, ಆರೋಪಿಗೆ ಕ್ಷಮೆ ಯಾಚಿಸಲು ಮತ್ತು ಸ್ವತಃ ಚಪ್ಪಲಿಯಿಂದ ಕಪಾಳಮೋಕ್ಷ ಮಾಡಿಕೊಳ್ಳಲು ಆದೇಶಿಸಿ ಬಿಡಲಾಗಿದೆ.

Add Asianetnews Kannada as a Preferred SourcegooglePreferred

ಮಗುವನ್ನು ಕೈಲಿಟ್ಟುಕೊಂಡು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಹುಡುಗಿಗೆ ಹುಡುಗನು ಹಿಂದಿನಿಂದ ಬಂದು ಕೈ ಹಾಕಿದ್ದಾನೆ. ಘಟನೆಯು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಕೆ ಕೂಗಿಕೊಳ್ಳುವುದನ್ನು ನೋಡಿ ಸ್ಥಳೀಯರು ಸಹಾಯಕ್ಕಾಗಿ ಓಡಿಬಂದಿದ್ದಾರೆ. ಇದರ ಬಳಿಕ ಘಟನೆ ಸಂಬಂಧ ತೀರ್ಮಾನ ನೀಡಲು ಪಂಚಾಯಿತಿ ಕರೆಯಲಾಗಿದೆ.

ಜಗತ್ತಲ್ಲೇ ಅತಿ ಹೆಚ್ಚು ರೋಮಭರಿತ ಮಗು ಇದು; ಇದೇನು ಸಮಸ್ಯೆ? ಕಾರಣವೇನು?

ನಂತರ ಆರೋಪಿಗೆ ಹುಡುಗಿಯ ಬಳಿ ಕ್ಷಮೆ ಕೇಳಲು ಪಂಚಾಯಿತಿ ಆದೇಶ ನೀಡಿದೆ. ಬಳಿಕ, ಆತನಿಗೆ ತನ್ನ ಚಪ್ಪಲಿಯಿಂದಲೇ ತನ್ನ ತಲೆಗೆ 10 ಬಾರಿ ಹೊಡೆದುಕೊಳ್ಳುವಂತೆ ಹೇಳಲಾಯಿತು. ಅದಾಗುತ್ತಿದ್ದಂತೆಯೇ ಆತನನ್ನು ಹೋಗಲು ಹೇಳಲಾಗಿದೆ. 

ವಿಡಿಯೋ ನೋಡಿದ ಪೋಲೀಸರು ಸ್ವಇಚ್ಛೆಯಿಂದ ಅಪ್ರಾಪ್ತೆ ಮೇಲಿನ ಲೈಂಗಿಕ ಕಿರುಕುಳ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಬಾಲಕಿಯು ದೇವಾಲಯಗಳಿಗೆ ಭೇಟಿ ನೀಡಲು ನಗರಕ್ಕೆ ಬಂದಿದ್ದು, ಪೋಷಕರೊಂದಿಗೆ ಗೆಸ್ಟ್ ಹೌಸ್‌ನಲ್ಲಿ ತಂಗಿದ್ದಳು. ಆರೋಪಿಯು ಘಟನೆ ಬಳಿಕ ಪರಾರಿಯಾಗಿದ್ದು, ಪೋಲೀಸರು ಆತನ ಗುರುತನ್ನು ಪತ್ತೆ ಹಚ್ಚಿದ್ದಾರೆ. 


ಈ ಘಟನೆ ಬಳಿಕ ಬಾಲಕಿಯ ಪೋಷಕರು ಪೋಲೀಸ್ ಕೇಸ್ ದಾಖಲಿಸುತ್ತೇವೆಂದರೂ ಬಿಡದೆ ಸ್ಥಳೀಯರು ಪಂಚಾಯಿತಿಗೆ ಒತ್ತಾಯಿಸಿದ್ದರು ಎನ್ನಲಾಗಿದೆ. ಇದೀಗ ಪಂಚಾಯಿತಿ ನಡೆಸಿ, ಆರೋಪಿಯನ್ನು ರಕ್ಷಿಸಲು ಪ್ರಯತ್ನಿಸಿದವರ ವಿರುದ್ಧವೂ ಕ್ರಮ ಜರುಗಿಸುವುದಾಗಿ ಪೋಲೀಸರು ಹೇಳಿದ್ದಾರೆ.